ಕನ್ನಡ ಭಾಷೆ ವಿಚಾರದಲ್ಲಿ ಉಡಾಫೆ ಮಾತಾಡಿದ್ದ ತಮಿಳು ನಟ ಕಮಲ್‌ ಹಾಸನ್‌ಗೆ ಸುಪ್ರೀಂಕೋರ್ಟ್‌ನಲ್ಲೂ ಮುಖಭಂಗ ಉಂಟಾಗಿದೆ.. 10 ದಿನಗಳ ಕಾಲ ಕಮಲ್‌ ಅಭಿನಯದ ಥಗ್ ಲೈಫ್ ಕರ್ನಾಟಕದಲ್ಲಿ ರಿಲೀಸ್ ಮಾಡುವಂತಿಲ್ಲ ಅಂತಾ ತಡೆ ಹೇರಿರುವ ಕರ್ನಾಟಕ ಹೈಕೋರ್ಟ್ ಅವಧಿ ನಾಳೆಗೆ ಮುಗಿಯಲಿದೆ.

ಇದರ ಮೊದಲೇ ಕಮಲ್ ಹಾಸನ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಸಿನಿಮಾ ರಿಲೀಸ್​ಗೆ ಭದ್ರತೆ ನೀಡುವ ಅರ್ಜಿಯನ್ನು ತುರ್ತಾಗಿ ವಿಚಾರಣೆ ಮಾಡಬೇಕೆಂದು ಕೋರಿದ್ದಾರೆ.. ಥಗ್ ಲೈಫ್ ಸಿನಿಮಾವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡುವುದನ್ನು ಕನ್ನಡಿಗರು ವಿರೋಧಿಸುತ್ತಿದ್ದಾರೆ.

ಹೀಗಾಗಿ, ತಮ್ಮ ಸಿನಿಮಾಗೆ ರಕ್ಷಣೆ ಕೊಡಬೇಕೆಂದು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಬೇಕೆಂಬ ಕಮಲ್ ಹಾಸನ್ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಸಿನಿಮಾ ರಿಲೀಸ್​​ಗಾಗಿ ಕಮಲ್ ಹಾಸನ್ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರೂ ಹಿನ್ನಡೆಯಾಗಿತ್ತು. ಕ್ಷಮೆ ಕೇಳದ ಹೊರತಾಗಿ ಸಿನಿಮಾ ರಿಲೀಸ್​ಗೆ ಅವಕಾಶ ಇಲ್ಲ ಎನ್ನಲಾಗಿದೆ. ಈಗ ಕಮಲ್ ಹಾಸನ್ ಸುಪ್ರೀಂ ಮೊರೆ ಹೋಗಿದ್ದು ಅಲ್ಲಿಯೂ ಹಿನ್ನಡೆಯಾಗಿದೆ..

ಅರ್ಜಿ ವಿಚಾರಣೆ ಮಾಡಿದ ಜಡ್ಜ್ ಆರ್ಟಿಕಲ್ 31 ಪಿಟಿಷನ್ ಇಲ್ಲಿ ಯಾಕೆ? ಹೈಕೋರ್ಟ್​ಗೆ ಹೋಗಿ ಅಂತಾ ನ್ಯಾಯಮೂರ್ತಿ ಪಿಕೆ ಮಿಶ್ರಾ ಹೇಳಿದ್ದಾರೆ. ಈ ಮೂಲಕ ಕಮಲ್ ಹಾಸನ್ ಅರ್ಜಿಯನ್ನು ಬೇಗನೇ ವಿಚಾರಣೆ ಮಾಡುವ ಮನವಿ ತಳ್ಳಿ ಹಾಕಿದ್ದಾರೆ. ಅದೇ ರೀತಿ ಹೈಕೋರ್ಟ್​ಗೆ ಹೋಗುವಂತೆ ಸೂಚಿಸಿದ್ದಾರೆ… ಇದೀಗ ಕಮಲ್‌ ಹಾಸನ್‌ ಮುಂದೆ ಕ್ಷಮೆ ಕೇಳದ ಹೊರತು ಬೇರೆ ದಾರಿ ಇಲ್ಲ ಅಂತಾ ಹೇಳಲಾಗುತ್ತಿದೆ..

Share.
Leave A Reply