ತನ್ನ ಕೋಗಿಲೆ ಕಂಠದಿಂದಲೇ ಕನ್ನಡಿಗರನ್ನ ಆಕರ್ಷಿಸಿದ್ದ ಗಾಯಕಿ.. ಕನ್ನಡ ಕೋಗಿಲೆ ರಿಯಾಲಿಟಿ ಶೋನಲ್ಲಿ ಮಿಂಚಿ ರನ್ನರ್‌ಅಪ್‌ ಆಗಿ ಫೇಮಸ್‌ ಆಗಿದ್ದ ಸಿಂಗರ್‌ ಅಖಿಲಾ ಪಜಿಮಣ್ಣು ತನ್ನ ಸಂಗಾತಿಯಿಂದ ದೂರವಾಗಿದ್ದಾರೆ.. ದಕ್ಷಿಣ ಕನ್ನಡದ ಬೆಡಗಿ-ಅಮೆರಿಕ ಹುಡುಗನ ಬಾಳಲ್ಲಿ ಬಿರುಗಾಳಿ ಎದ್ದಿದೆ..

ಮನೆಯವರ ಸಮ್ಮುಖದಲ್ಲಿಯೇ ಸಪ್ತಪದಿ ತುಳಿದಿದ್ದ ಈ ಜೋಡಿ ಬಾಳಲ್ಲಿ ದಿಢೀರನೇ ಏನಾಯ್ತು.. ತನ್ನ ನುಗುವಿಂದಲೇ ಕನ್ನಡಿಗರ ಹೃದಯ ಕದ್ದಿದ್ದ ಅಪರಂಜಿಗೆ ತನ್ನ ಪತಿಯ ಮೇಲೆ ದಿಢೀರ್‌ ಮುನಿಸಾಗಿದ್ದೇಕೆ? ಕನ್ನಡ ಕೋಗಿಲೆಯ ಬದುಕಲ್ಲಿ ಹುಳಿ ಹಿಂಡಿದ್ದು ಯಾರು? ಇಬ್ಬರ ಮಧ್ಯೆ ಇದೇನಾಯ್ತು ಅಂತಾ ಎಲ್ಲವನ್ನೂ ಹೇಳ್ತೀವಿ ಅದ್ಕೂ ಮೊದ್ಲು ಬಾಸ್‌ಟಿವಿ ಕನ್ನಡ ಚಾನೆಲ್‌ನ ಸಬ್ಸ್‌ಕ್ರೈಬ್‌ ಮಾಡಿ..

ಸೋಷಿಯಲ್‌ ಮೀಡಿಯಾದಲ್ಲಿ ಫೋಟೋಗಳು ಡಿಲೀಟ್‌..!
ಕನ್ನಡದ ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳ ಮೂಲಕ ಗುರುತಿಸಿಕೊಂಡಿದ್ದ ಗಾಯಕಿ ಅಂದ್ರೆ ಅದು ಅಖಿಲಾ ಪಜಿಮಣ್ಣು.. ಕಿರುತೆರೆ ಮಾತ್ರವಲ್ಲದೇ ಸೋಷಿಯಲ್‌ ಮಿಡಿಯಾದಲ್ಲೂ ಸಕ್ರಿಯವಾಗಿ ಕಾಣಿಸಿಕೊಂಡು ಸಖತ್‌ ಫೇಮಸ್‌ ಆಗಿದ್ರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈ ಬೆಡಗಿ ಇಡೀ ಕರ್ನಾಟಕದ ಮನೆಮಾತಾಗಿದ್ರು.

3 ವರ್ಷಗಳ ಹಿಂದೆ ಅಖಿಲಾ ಅಮೆರಿಕ ಹುಡುಗ ಧನಂಜಯ್‌ ಶರ್ಮಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ರು.. ಮದುವೆಯಾದ ಬಳಿಕ ಈ ಜೋಡಿ ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಸ್ಯಾನ್‌ ಹೋಸ್‌ನಲ್ಲಿ ವಾಸವಿದ್ರು. ಅಷ್ಟು ಅನ್ಯೋನ್ಯವಾಗಿದ್ದ ಈ ಸುಂದರ ಜೋಡಿ ಬದುಕಲ್ಲಿ ಅದೇನಾಯ್ತೋ ಗೊತ್ತಿಲ್ಲ. ಇಬ್ಬರು ಪರಸ್ಪರ ಒಪ್ಪಿ ದೂರವಾಗಲು ನಿರ್ಧರಿಸಿದ್ದಾರೆ. ಕೋರ್ಟ್‌ನಲ್ಲಿ ಡಿವೋರ್ಸ್‌ ಅರ್ಜಿ ಸಲ್ಲಿಸಿದ್ದಾರೆ.

ಪರಸ್ಪರ ನಿರ್ಧರಿಸಿದ ಮೇಲೆಯೇ ಈ ಜೋಡಿ ಪುತ್ತೂರಿನ ಕೋರ್ಟ್‌ನಲ್ಲಿ ಜೂನ್‌ 12ರಂದು ವಿಚ್ಛೇದನ ಪಡೆಯಲು ಅರ್ಜಿ ಸಲ್ಲಿಸಿದೆ. ಈ ಹಿಂದೆ ಹೊಂದಾಣಿಕೆಗೆಂದು 6 ತಿಂಗಳ ಕಾಲಾವಕಾಶವನ್ನು ನೀಡಲಾಗಿತ್ತು.. ಆದ್ರೂ ಸರಿಹೋಗದ ಈ ದಂಪತಿ ಡಿವೋರ್ಟ್‌ ಪಡಿಯಲು ಡಿಸೈಡ್‌ ಮಾಡಿದ್ದಾರೆ.. ಜೂನ್‌ 18ರಂದೇ ಇಬ್ರು ಕೋರ್ಟ್‌ಗೆ ಹಾಜರಾಗಿ ತಮ್ಮ ತಮ್ಮ ಹೇಳಿಕೆಗಳನ್ನೂ ನೀಡಿದ್ದಾರೆ.. ಹೀಗಾಗಿ ಕೋರ್ಟ್‌ನಲ್ಲಿ ವಿಚಾರಣೆ ಮುಗಿದಿದ್ದು, ಅಂತಿಮ ತೀರ್ಪು ಕಾಯ್ದಿರಿಸಿದೆ.

ಒಟ್ನಲ್ಲಿ ಕನ್ನಡ ಕೋಗಿಲೆ, ಮುಂಜಾನೆ ರಾಗ ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರನ್ನ ಮನರಂಜಿಸಿದ್ದ ಕೋಗಿಲೆ ಇದೀಗ ತನ್ನ ಬಾಳಸಂಗಾತಿಯಿಂದ ದೂರವಾಗಲು ನಿರ್ಧರಿಸಿದೆ.. ಅನ್ಯಾಯವಾಗಿ ಈ ಜೋಡಿ ದೂರವಾಯ್ತಲ್ಲ ಅಂತ ಕನ್ನಡ ಕಿರುತೆರೆ ಪ್ರೇಕ್ಷಕರು ಬೇಸರ ಹೊರಹಾಕ್ತಿದ್ದಾರೆ..

Share.
Leave A Reply