ಇಸ್ರೇಲ್-ಇರಾನ್‌ ಯುದ್ಧವೀಗ ಇಡೀ ಜಗತ್ತನ್ನೇ ಆವರಿಸಿದೆ.. ಅಮೆರಿಕಾ, ರಷ್ಯಾದಂತಹ ಬಲಿಷ್ಠ ರಾಷ್ಟ್ರಗಳು ರಣರಂಗಕ್ಕೆ ಎಂಟ್ರಿ ಕೊಟ್ಟು ಕದನದ ತೀವ್ರತೆಯನ್ನ ಮತ್ತಷ್ಟು ಹೆಚ್ಚಿಸಿದೆ.. ಇರಾನ್‌ ಎಷ್ಟೇ ಪೈಪೋಟಿ ಕೊಟ್ರೂ ಇಸ್ರೇಲ್‌ನ ಹೊಡೆತ ಮಿತಿಮೀರಿದೆ.. ಇಸ್ರೇಲ್‌ನ ರೌದ್ರಾವತಾರಕ್ಕೆ ಇರಾನ್‌ನ ಪ್ರತಿಯೊಂದು ಹೆಜ್ಜೆಯೂ ಮಸಣವಾಗ್ತಿದೆ.. ಇದಕ್ಕೆ ಕಾರಣ ಇರಾನ್‌ನ ಪ್ರತಿಯೊಂದು ಕಾರ್ಯತಂತ್ರ ಇಸ್ರೇಲ್‌ಗೆ ತೆರೆದ ಪರದೆಯಂತೆ ಕಾಣಿಸಿಕೊಳ್ತಿದೆ.. ಇಸ್ರೇಲ್‌ನ ಬ್ಯಾಕ್‌ಬೋನ್‌ನಂತೆ ದಾಳ ಉರಿಳಿಸ್ತಿರೋದು ಬ್ಯೂಟಿಫುಲ್‌ ಲೇಡಿ.. ತನ್ನ ಕ್ಯೂಟ್‌ನೆಸ್‌ನಿಂದಲೇ ಕಿಲ್ಲಿಂಗ್‌ ಸ್ಕೆಚ್‌ ಹಾಕಿ ಇರಾನ್‌ನ ಮುಗಿಸಿಬಿಟ್ಟಿದ್ದಾಳೆ..


ಇರಾನ್‌ಗೆ ಗುನ್ನ ಇಟ್ಟ ʻಗುಪ್ತಗಾಮಿನಿʼ..!

ಇರಾನ್‌-ಇಸ್ರೇಲ್‌ ಯುದ್ಧ ತೀವ್ರಗೊಳ್ಳುತ್ತಿದ್ದಂತೆ ಇರಾನ್‌ನ ಅಧಿಕಾರಿಗಳು ಎಷ್ಟೇ ಸ್ಥಳಗಳನ್ನ ಬದಲಾಯಿಸಿದ್ರೂ ಅವರಿರುವ ಅಡಗುತಾಣದ ಸೀಕ್ರೇಟ್‌ ಇಸ್ರೇಲ್‌ಗೆ ಕ್ಷಣಮಾತ್ರದಲ್ಲೇ ತಿಳಿದುಬಿಡ್ತಿತ್ತು.. ಇರಾನ್‌ ಎಷ್ಟೇ ಗುಪ್ತವಾಗಿ ಕಾರ್ಯತಂತ್ರ ರೂಪಿಸಿದ್ರೂ ಇಸ್ರೇಲ್‌ ಇರಾನ್‌ ಪ್ಲ್ಯಾನ್‌ಗಳನ್ನ ಧ್ವಂಸ ಮಾಡ್ತಿತ್ತು.. ಇಸ್ರೇಲ್‌ ಇಷ್ಟೊಂದು ಸಕ್ಸಸ್‌ ಆಗಲು ಅದ್ರ ಹಿಂದಿದ್ದ ಅಸ್ತ್ರ ಅಂದ್ರೆ ಲೇಡಿ ಸ್ಪೈ ಕ್ಯಾಥರೀನ್ ಪೆರೆಜ್ ಶಾಕ್ಡಮ್.. ಇಸ್ರೇಲ್‌ನ ಗುಪ್ತಚರ ಇಲಾಖೆಯಾದ ಮೊಸಾದ್‌ನಲ್ಲಿ ತರಬೇತಿ ಪಡೆದು ಇರಾನ್‌ಗೆ ಎಂಟ್ರಿ ಕೊಡ್ತಾಳೆ ಈ ಗುಪ್ತಗಾಮಿನಿ.

ಎರಡು ವರ್ಷ ಸ್ಕೆಚ್‌.. ಮುಸ್ಲಿಂ ಆಗಿ ಸ್ವಿಚ್‌..!
ಸತತ ಎರಡು ವರ್ಷಗಳ ಕಾಲ ಇರಾನ್‌ನ ಮೂಲೆಮೂಲೆಯಲ್ಲಿ ಅಲೆದಾಡಿ ಅಲ್ಲಿನ ರಕ್ಷಣಾ ವ್ಯವಸ್ಥೆಯ ಸಂಪೂರ್ಣ ಚಿತ್ರಣವನ್ನೇ ಇಸ್ರೇಲ್‌ ಮುಂದೆ ಇಡ್ತಾಳೆ..

ಕ್ರಿಶ್ಚಿಯನ್‌ನಿಂದ ಶಿಯಾ ಮುಸ್ಲಿಂಗೆ ಮತಾಂತರ..!

ಇರಾನ್‌ನ ಟೆಹ್ರಾನ್‌ಗೆ ಎಂಟ್ರಿ ಆಗ್ತಿದ್ದಂತೆ ಈಕೆ ಮೊದಲು ಮಾಡಿದ್ದು ತನ್ನ ಕ್ರಿಶ್ಚಿಯನ್‌ ಧರ್ಮದಿಂದ ಶಿಯಾ ಮುಸ್ಲಿಂ ಧರ್ಮಕ್ಕೆ ಮತಾಂತರಗೊಳ್ಳುತ್ತಾಳೆ.. ಆಕೆ ಆಕರ್ಷಣೀಯವಾದ ಅಂದದಿಂದಲೇ ಎಲ್ಲರನ್ನೂ ಸೆಳೆಯುತ್ತಾಳೆ..

ಅಧಿಕಾರಿಗಳ ಪತ್ನಿಯರೊಂದಿಗೆ ನಿರಂತರ ಸಂಪರ್ಕ..!
ಯಾರಿಗೂ ತನ್ನ ಮೇಲೆ ಸಂದೇಹ ಬರದಂತೆ ಕಾರ್ಯ ನಿರ್ವಹಿಸಿ ಇರಾನ್‌ನ ರಕ್ಷಣಾ ವ್ಯವಸ್ಥೆಯನ್ನ ಅರಿತುಕೊಳ್ಳುತ್ತಾಳೆ.. ಅಲ್ಲಿನ ಮಿಲಿಟರಿ ಅಧಿಕಾರಿಗಳ ಪತ್ನಿಯರೊಂದಿಗೆ ಸ್ನೇಹ ಬೆಳೆಸಿ ಅವರ ಮನೆಗಳಿಗೂ ನಿರಂತರವಾಗಿ ಭೇಟಿ ನೀಡ್ತಾ ಇರ್ತಾಳೆ..

ಡೌಟೇ ಬಾರದೇ ಪರಮಾಣು ಸ್ಥಾವರಕ್ಕೆ ಭೇಟಿ..!
ರಕ್ಷಣಾ ಇಲಾಖೆ ಅಧಿಕಾರಿಗಳೊಂದಿಗೆ ನಿಖಟ ಸಂಪರ್ಕ ಬೆಳೆಸಿದ್ದ ಕಾರಣ ಆಕೆ ಅಲ್ಲಿನ ರಕ್ಷಣಾ ಪ್ರದೇಶಗಳು, ಪರಮಾಣು ಸ್ಥಾವರದ ಸ್ಥಳಕ್ಕೂ ಭೇಟಿ ನೀಡಿದ್ದಾಳೆ.. ಇಷ್ಟೆಲ್ಲಾ ವಾಕ್‌ ಮಾಡಿದ್ರೂ ಯಾರಿಗೂ ಇವಳ ಮೇಲೆ ಕೊಂಚ ಅನುಮಾನವೂ ಬರೋದಿಲ್ಲ.. ಎಷ್ಟರ ಮಟ್ಟಿಗೆ ಅಂದ್ರೆ ಆಕೆಗೆ ಚೆಕ್ಕಿಂಗ್‌ ಕೂಡ ಇರ್ಲಿಲ್ವಂತೆ.. ಹೀಗೆ ಅಲ್ಲಿನ ರಕ್ಷಣಾ ವ್ಯವಸ್ಥೆಯ ಸೀಕ್ರೇಟ್‌ಗಳನ್ನ ಫೋಟೋ, ವಿಡಿಯೋಗಳ ಮೂಲಕ ಇಸ್ರೇಲ್‌ನ ಮೊಸಾದ್‌ ಕಚೇರಿಗೆ ಕಳಿಸ್ತಾ ಇದ್ಲು ಅನ್ನೋ ಮಾಹಿತಿ ಹೊರಬಿದ್ದಿದೆ..

ಹೀಗೆ ತನ್ನ ಬುಡದಲ್ಲೇ ಇದ್ದುಕೊಂಡು ತನಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಖತರ್ನಾಕ್‌ ಲೇಡಿ ಡಾನ್‌ ಬಗ್ಗೆ ಇರಾನ್‌ ಈಗ ಪಶ್ಚಾತಾಪ ಪಡುವಂತಾಗಿದೆ.. ಯಾಕಂದ್ರೆ ಆಕೆಯ ಬಗ್ಗೆ ಅನುಮಾನ ಬರುವ ಮೊದಲೇ ಅವಳು ತನ್ನ ವೇಷ ಬದಲಾಯಿಸಿ ಬೇರೆ ದೇಶಕ್ಕೆ ಎಸ್ಕೇಪ್‌ ಆಗಿದ್ದಾಳೆ.. ಟ್ರೈನ್‌ ಹೋದ್ಮೇಲೆ ಟಿಕೆಟ್‌ ತಗೊಂಡ್ರು ಅನ್ನುವಂತೆ ಅವಳು ಪರಾರಿ ಆದ್ಮೇಲೆ ಇರಾನ್‌ ಲೇಡಿ ಸ್ಪೈ ಹುಡುಕಿಕೊಡುವಂತೆ ಪ್ರಚಾರ ಮಾಡ್ತಿದೆ..

Share.
Leave A Reply