ಖ್ಯಾತ ಗಾಯಕಿ ಮಂಗ್ಲಿ ಈಗ ಗಾಂಜಾ ಸುಳಿಯಲ್ಲಿ ಸಿಲುಕಿದ್ದಾರೆ. ಗಾಯಕಿ ಮಂಗ್ಲಿ ತಮ್ಮ ಜನ್ಮದಿನವನ್ನ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಗಾಯಕಿ ಮಂಗ್ಲಿಯ ಬರ್ತ್‌ಡೇ ಪಾರ್ಟಿಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಪಾರ್ಟಿಯಲ್ಲಿ ಮಾದಕ ವಸ್ತುಗಳ ಸೇವನೆ ಪತ್ತೆಯಾಗಿದೆ.

ಹೈದರಾಬಾದ್ನ ಚೆವೆಲ್ಲಾ ತ್ರಿಪುರಾ ರೆಸಾರ್ಟ್‌ನಲ್ಲಿ ಗಾಯಕಿ ಮಂಗ್ಲಿಯ ಬರ್ತ್‌ಡೇ ಪಾರ್ಟಿ ಬಲು ಜೋರಾಗಿ ನಡೆದಿತ್ತು. ಪಾರ್ಟಿಯ ಮೇಲೆ ದಾಳಿ ನಡೆಸಿದ ಪೊಲೀಸರು ಪಾರ್ಟಿಯಲ್ಲಿ ಭಾಗಿಯಾದವರ ರಕ್ತದ ಮಾದರಿಗಳನ್ನು ಪಡೆದು, ಪರೀಕ್ಷೆ ನಡೆಸಿದ್ದು, ಮಾದಕ ವಸ್ತು ಸೇವಿಸಿರುವುದು ಖಾತ್ರಿ ಆಗಿದೆ.

ಮಂಗ್ಲಿಯ ಹುಟ್ಟುಹಬ್ಬದಲ್ಲಿ ಹಲವಾರು ಮಂದಿ ಭಾಗಿಯಾಗಿದ್ದು, ಕೆಲ ವಿದೇಶಿ ಮದ್ಯಗಳು ಸಹ ಪಾರ್ಟಿ ಸ್ಥಳದಲ್ಲಿದ್ದು ಅವುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರು ಬರ್ತ್‌ಡೇ ಪಾರ್ಟಿ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಗಾಯಕಿ ಮಂಗ್ಲಿ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎನ್ನಲಾಗುತ್ತಿದೆ.

ಘಟನಾ ಸ್ಥಳದ ವಿಡಿಯೋ ಮಾಡುತ್ತಿದ್ದ ಪೊಲೀಸರ ಮೇಲೆ ವಾಗ್ದಾಳಿ ನಡೆಸಿದ ಗಾಯಕಿ ಮಂಗ್ಲಿ, ವಿಡಿಯೋ ರೆಕಾರ್ಡಿಂಗ್ ನಿಲ್ಲಿಸುವಂತೆ ಧಮ್ಕಿ ಹಾಕಿದ್ದಾರೆ ಎನ್ನಲಾಗುತ್ತಿದೆ.
