ವಿಂಬಲ್ಡನ್‌ ಟೂರ್ನಮೆಂಟ್‌ ಸಮಿತಿ ಇಡೀ ಕನ್ನಡಿಗರೇ ಖುಷಿಪಡುವಂತಾ ಕಾರ್ಯಕ್ಕೆ ಸಾಕ್ಷಿಯಾಗಿದೆ.. ಕನ್ನಡದ ಸ್ಟಾರ್ ಟೆನ್ನಿಸ್‌ ಆಟಗಾರ ರೋಹನ್ ಬೋಪಣ್ಣಗೆ ಕನ್ನಡದಲ್ಲೇ ವಿಶ್‌ ಮಾಡಿ ಕನ್ನಡಿಗರ ಗಮನ ಸೆಳೆದಿದೆ.. ಹೌದು.. ವಿಂಬಲ್ಡನ್ ಚಾಂಪಿಯನ್‌ಶಿಪ್‌ ತಯಾರಿಲ್ಲಿರುವ ರೋಹನ್ ಬೋಪಣ್ಣಗೆ ಸದ್ಯ ವಿಂಬಲ್ಡನ್‌, ಕನ್ನಡದಲ್ಲೇ ವಿಶ್‌ ಮಾಡಿದೆ. ಶೈನ್‌ ಆಗೋಕೆ ನಮ್ಮ ಅಣ್ಣ ರೋಹನ್‌ ಬೋಪಣ್ಣ ರೆಡಿ ಇದ್ದಾರೆ ಎಂದು ಕನ್ನಡದಲ್ಲೇ ಬರೆದು ಪೋಸ್ಟ್‌ ಮಾಡಲಾಗಿದೆ. ಭಾರತದ ಸೂಪರ್‌ ಸ್ಟಾರ್‌ ಎಂಬ ಕನ್ನಡದ ಬರಹದಲ್ಲಿರುವ ಪೋಸ್ಟ್‌ ಸದ್ಯ ವೈರಲ್‌ ಆಗ್ತಿದೆ.

ಇನ್ನು, ಸಾನಿಯಾ ಮಿರ್ಜಾ, ಲಿಯಾಂಡರ್ ಪೇಸ್ ಮತ್ತು ಮಹೇಶ್ ಭೂಪತಿಯಂತಹ ದಿಗ್ಗಜರನ್ನು ಟೆನಿಸ್‌ ಸೃಷ್ಟಿಸಿದೆ ಎಂದರೆ ತಪ್ಪಲ್ಲ. ಕ್ರಿಕೆಟ್ ಆಟಗಾರರ ಖ್ಯಾತಿಗೆ ಪ್ರತಿಸ್ಪರ್ಧಿಯಾಗಿ ಸ್ಟಾರ್ ಸ್ಥಾನಮಾನಗಳನ್ನು ಗಳಿಸಿದರು ಮತ್ತು ಜಗತ್ತೇ ಅವರ ಪ್ರತಿಭೆಗಳತ್ತ ಗಮನ ಹರಿಸುವಂತೆ ಮಾಡಿದವರು ಇವರು. ಇವರ ಸಾಲಿನಲ್ಲಿ ಟೆನಿಸ್ ಐಕಾನ್ ರೋಹನ್ ಬೋಪಣ್ಣ, ಈ ಶ್ರೇಷ್ಠರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ನಿಂತವರು..

45 ವರ್ಷದ ರೋಹನ್ ಬೋಪಣ್ಣ ಇತ್ತೀಚಿನವರೆಗೂ ಪುರುಷರ ಡಬಲ್ಸ್‌ನಲ್ಲಿ ವಿಶ್ವದ ನಂ. 1 ಸ್ಥಾನವನ್ನು ಹೊಂದಿದ್ದರು. ಮೊದಲ ಬಾರಿಗೆ ಶ್ರೇಯಾಂಕ ಪಡೆದ ಅತ್ಯಂತ ಹಿರಿಯ ಆಟಗಾರ. ಕೊಡಗು ಮೂಲದ ಕನ್ನಡಿಗನಿಗೆ ಈಗ ವಿಂಬಲ್ಡನ್‌ ಗೌರವ ನೀಡಿದೆ. ಕನ್ನಡದಲ್ಲೇ ವಿಶ್‌ ಮಾಡಿರೋದು ಕನ್ನಡಿಗರ ಸಂತಸಕ್ಕೆ ಕಾರಣವಾಗಿದೆ… ವಿಂಬಲ್ಡನ್‌ ಹಂಚಿಕೊಂಡಿರುವ ಈ ಪೋಸ್ಟ್‌ನ್ನು ಶೇರ್‌ ಮಾಡಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ..

Share.
Leave A Reply