ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ನೆಲಕ್ಕಪ್ಪಳಿಸಿ ಹೊತ್ತಿ ಉರಿದಿದೆ.. ಗುಜರಾತ್‌ನ ಅಹ್ಮದಾಬಾದ್ ಏರ್‌ಪೋರ್ಟ್‌ನಿಂದ ಲಂಡನ್‌ಗೆ ಹೊರಟಿದ್ದ ವಿಮಾನ ದುರಂತಕ್ಕೀಡಾಗಿದೆ.. ಅಹ್ಮದಾಬಾದ್‌ನ ಮೇಘಾನಿ ಮಧ್ಯಾಹ್ನ 1.39ರ ಸುಮಾರಿಗೆ 242 ಪ್ರಯಾಣಿಕರನ್ನು ಹೊತ್ತು ಟೇಕಾಫ್ ಆಗಿದ್ದ AI-171 ವಿಮಾನ, ಏರ್‌ಪೋರ್ಟ್‌ನ 2 ಕಿಲೋ ಮೀಟರ್ ದೂರದಲ್ಲಿ ನೆಲಕ್ಕೆ ಬಿದ್ದಿದೆ.. ಆದ್ರೆ, ಪೈಲಟ್ ರವಾನಿಸಿದ ಕೊನೇ ಸಂದೇಶ ಭಾರಿ ಸಂಚಲನ ಸೃಷ್ಟಿಸಿದೆ..







ರನ್‌ವೇ 23ರಿಂದ ಟೇಕಾಫ್.. ಕೆಲವೇ ಕ್ಷಣದಲ್ಲಿ ದುರಂತ!
ವಿಮಾನದಲ್ಲಿ ಇಬ್ಬರು ಪೈಲಟ್ಗಳು ಮತ್ತು 10 ಕ್ಯಾಬಿನ್ ಸಿಬ್ಬಂದಿ ಸೇರಿದಂತೆ 242 ಜನರಿದ್ದರು. 169 ಭಾರತೀಯರು, 52 ಬ್ರಿಟಿಷ್ ಪ್ರಜೆಗಳು, ಓರ್ವ ಕೆನಡಿಯನ್, 7 ಜನರು ಪೊರ್ಚುಗಲ್ ಪ್ರಯಾಣಿಕರು ಇದ್ದರು… ಎಟಿಸಿ ಅಂದ್ರೆ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ ಪ್ರಕಾರ, ವಿಮಾನವು ಅಹಮದಾಬಾದ್ ಏರ್‌ಪೋರ್ಟ್ ರನ್‌ವೇ 23ರಿಂದ ಹೊರಟಿತು. ರನ್‌ವೇ 23 ರಿಂದ ನಿರ್ಗಮಿಸಿದ ಸ್ವಲ್ಪ ಸಮಯದ ನಂತರ ವಿಮಾನ ನೆಲಕ್ಕೆ ಅಪ್ಪಳಿಸಿದೆ.
ಕೊನೆ ಕರೆ ಎಂದು ಸಂದೇಶ ರವಾನಿಸಿದ್ದ ಪೈಲಟ್!
ವಿಮಾನದಲ್ಲಿದ್ದ 242 ಜನರ ಜೀವ ಉಳಿಸಲು ಪೈಲಟ್ ಕೊನೇ ಕ್ಷಣದ ಹೋರಾಟ ನಡೆಸಿದ್ದಾರೆ… ವಿಮಾನವನ್ನು ಸೇಫ್ ಆಗಿ ಲ್ಯಾಂಡ್ ಮಾಡಿಸಲು ಯಾವೆಲ್ಲಾ ಪ್ರಯತ್ನ ಮಾಡ್ಬೇಕೋ ಅದನ್ನೆಲ್ಲಾ ಮಾಡಿದ್ದಾರೆ.. ಕೊನೇ ಕ್ಷಣದಲ್ಲಿ ಪೈಲಟ್, ಏರ್ಪೋರ್ಟ್‌ನ ಎಟಿಸಿಗೆ ಒಂದು ಮೆಸೇಜ್ ಪಾಸ್ ಮಾಡಿದ್ದಾರೆ.. ವಿಮಾನ ಸುಗಮವಾಗಿ ಸಂಚರಿಸದೇ ಇದ್ದಾಗ ಪೈಲಟ್ ಮೇ ಡೇ ಎಂದು ಸಂದೇಶ ರವಾನಿಸಿದ್ದಾರೆ.. ಮೇ ಡೇ ಅಂದರೆ ಕಟ್ಟ ಕಡೆಯ ಕರೆ ಎಂದರ್ಥ ಮತ್ತು ಜೀವಗಳಿಗೆ ಹಾನಿ ಫಿಕ್ಸ್ ಅಂತಲೇ ಅರ್ಥ.. ಈ ಕರೆ ರವಾನಿಸಿದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿದೆ..
ಮೆಡಿಕಲ್ ಹಾಸ್ಟೆಲ್ ಮೇಲೆ ಬಿದ್ದ ವಿಮಾನ..!
ಇನ್ನೊಂದು ದುರಂತ ಅಂದರೆ ಬಿಜೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಮೇಲೆ ವಿಮಾನ ಪತನಗೊಂಡಿದೆ.. ಈ ವೇಳೆ ಹಾಸ್ಟೆಲ್‌ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮಧ್ಯಾಹ್ನದ ಭೋಜನ ಸವಿಯುತ್ತಿದ್ದರು.. ಕ್ಷಣಾರ್ಧದಲ್ಲೇ ವಿಮಾನ ಹಾಸ್ಟೆಲ್ ಮೇಲೆ ಬಿದ್ದಿದ್ದು, 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿಲವಿಲ ಒದ್ದಾಡಿ ಜೀವ ಬಿಟ್ಟಿದ್ದಾರೆ ಅನ್ನೋ ಶಂಕೆ ಇದೆ.. ಇನ್ನೂ, ವಿಮಾನದಲ್ಲಿ 58 ಸಾವಿರ ಲೀಟರ್ ತೈಲ ಇದ್ದರೂ ತಾಂತ್ರಿಕ ದೋಷದಿಂದಾಗಿ 85 ಅಡಿ ಎತ್ತರದಿಂದ ವಿಮಾನದ ಬಿದ್ದು ದುರಂತ ಸಂಭವಿಸಿದೆ ಎನ್ನಲಾಗ್ತಿದೆ..
ಮಗಳ ಭೇಟಿಗೆ ಹೊರಟಿದ್ದ ಗುಜರಾತ್ ಮಾಜಿ ಸಿಎಂ!
ಮತ್ತೊಂದೆಡೆ, ಗುಜರಾತ್‌ನ ಮಾಜಿ ಸಿಎಂ ವಿಜಯ್ ರೂಪಾನಿ ಲಂಡನ್‌ಗೆ ಹೊರಟಿದ್ರು.. ಮಗಳನ್ನು ಭೇಟಿ ಮಾಡಲು ಪ್ರಯಾಣ ಬೆಳೆಸಿದ್ರು.. ವಿಮಾನದ ಸೀಟ್ ನಂಬರ್ 12ರಲ್ಲಿ ಕುಳಿತಿದ್ರು.. ಆದ್ರೆ, ಇಷ್ಟರಲ್ಲೇ ವಿಮಾನ ಪತನಗೊಂಡಿದ್ದು, ಅವರ ಆರೋಗ್ಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗಬೇಕಿದೆ… ಇನ್ನು, ದುರಂತರದಲ್ಲಿ 133ಕ್ಕೂ ಹೆಚ್ಚು ಜನರು ಮೃತಪಟ್ಟಿ ದ್ದಾರೆ ಅಂತಾ ಹೇಳಲಾಗ್ತಿದೆ… ಇನ್ನೂ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇದೆ..
ಒಟ್ನಲ್ಲಿ, ಗುಜರಾತ್‌ನಲ್ಲಿ ನಡೆದ ವಿಮಾನ ದುರಂತ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.. ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವರು ಕಂಬನಿ ಮಿಡಿದಿದ್ದಾರೆ..
