ಕೂದ್ಲು ಬೆಳ್ಳಗಾಗ್ತಿದ್ದಂತೆ ಪುರುಷರು ಅಷ್ಟೊಂದು ತಲೆ ಕೆಡ್ಸ್‌ಕೊಳ್ತಾರೋ ಇಲ್ವೋ ಆದ್ರೆ ಮಹಿಳೆಯರಿಗಂತೂ ಸಿಕ್ಕಾಪಟ್ಟೆ ಚಿಂತೆ ಶುರುವಾಗುತ್ತೆ. ನೋಡೋಕ್‌ ಎಷ್ಟೇ ಚನ್ನಾಗಿದ್ರೂ ಈ ಬಿಳಿ ಕೂದಲು ಅಂದವನ್ನ ಕೆಡಿಸಿಬಿಡುತ್ತೆ. ಹಾಗಂತ ಕೆಮಿಕಲ್‌ಯುಕ್ತ ಡೈ ಬಳಸೋದಿಕ್ಕೆ ತುಂಬಾ ಜನಕ್ಕೆಇಷ್ಟ ಇರೋದಿಲ್ಲ.

ಇನ್ನು, ಸಾಕಷ್ಟು ಮಂದಿ ಮೆಹೆಂದಿಯನ್ನ ಬಿಳಿ ಕೂದಲಿಗೆ ಬಳಸ್ತಾರೆ ಆದ್ರೆ ಇದ್ರಿಂದ ಕೂದಲು ಕಪ್ಪಾಗೋ ಬದಲು ಕೆಂಪಗಾಗಿ ಇನ್ನೂ ಅಸಹ್ಯವಾಗಿ ಕಾಣ್ಸುತ್ತೆ. ಸೋ ಇವೆಲ್ಲದರ ಬದ್ಲು ನ್ಯಾಚುರಲ್‌ ಆಗಿ ಬಿಳಿ ಕೂದಲನ್ನ ಕಪ್ಪಾಗಿಸೋದು ಹೇಗೆ ಅನ್ನೋದನ್ನ ತಿಳ್ಕೊಳೋಣ.

ಬೆಟ್ಟದ ನೆಲ್ಲಿಕಾಯಿ ಕೂದಲಿನ ಹಲವು ಸಮಸ್ಯೆಗಳಿಗೆ ಪವರ್‌ಫುಲ್‌ ಆಗಿ ಕೆಲ್ಸ ಮಾಡುತ್ತೆ. ಕೂದಲು ಅಕಾಲಿಕವಾಗಿ ಬಿಳಿಯಾಗುವುದು, ಕೂದಲು ಉದುರುವುದು ಮತ್ತು ಇತರ ಹಲವು ಸಮಸ್ಯೆಗಳ ನಿವಾರಣೆಗೆ ನೆಲ್ಲಿಕಾಯಿ ಪ್ರಯೋಜನಕಾರಿಯಾಗಿದೆ.

ಸೋ ಬಿಳಿ ಕೂದ್ಲು ಕಪ್ಪಗೋದಿಕ್ಕೆ ನೆಲ್ಲಿಕಾಯಿಯನ್ನ ಈ ರೀತಿ ಬಳಸಿ. ನಿಮ್ಮ ಕೂದಲಿನ ಅಳತೆಗೆ ತಕ್ಕಂತೆ ಬೆಟ್ಟದ ನೆಲ್ಲಿಕಾಯಿ ಪುಡಿಯನ್ನ ತಗೋಳಿ. ಇದಿಕ್ಕೆ ನಿಂಬೆರಸ ಬೆರೆಸಿ ಪೇಸ್ಟ್‌ ರೀತಿ ಮಾಡಿ ಬೇಕಿದ್ರೆ ಸ್ವಲ್ಪ ನೀರು ಸೇರಿಸಿ. ಈ ಪೇಸ್ಟ್ ಅನ್ನು ಕೂದಲಿಗೆ ಹಚ್ಚಿ ನಂತರ ಅರ್ಧ ಗಂಟೆಯ ನಂತರ ತೊಳೆಯಿರಿ. ಈ ರೀತಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಮಾಡ್ತಾ ಬರೋದ್ರಿಂದ ಕ್ರಮೇಣ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಲು ಪ್ರಾರಂಭಿಸುತ್ತೆ.

Share.
Leave A Reply