ಅಹಮದಾಬಾದ್ನ ಮೇಘಾನಿಪುರದಲ್ಲಿ ಸಂಭವಿಸಿರುವ ವಿಮಾನ ದುರಂತ ಒಬ್ಬ ವ್ಯಕ್ತಿಯನ್ನು ಬಿಟ್ಟು ಎಲ್ಲರನ್ನೂ ಬಲಿ ಪಡೆದಿದೆ.. ಎಲ್ಲೋ ಹಾಸ್ಟೆಲ್ನಲ್ಲಿದ್ದ ವಿದ್ಯಾರ್ಥಿಗಳ ಜೀವ ಕೂಡ ಹೋಯ್ತು.. ಆದ್ರೆ ಅದೇ ವಿಮಾನದಲ್ಲಿ ಪ್ರಯಾಣಿಸಿ ಆ ಅವಘಡವನ್ನು ಅನುಭವಿಸಬೇಕಿದ್ದ ಓರ್ವ ಮಹಿಳೆ ಪವಾಡ ಸದೃಶದಂತೆ ಪಾರಾಗಿದ್ದಾರೆ.. ಅದಕ್ಕೆ ಆ ಹತ್ತು ನಿಮಿಷಗಳೇ ಕಾರಣ.. ಕೆಲವೊಮ್ಮೆ ಜೀವನದಲ್ಲಿ ಅನುಭವಿಸುವ ವಿಳಂಬ ಜೀವಕ್ಕೆ ವರವಾಗುತ್ತೆ ಅನ್ನೋದಕ್ಕೆ ಈ ಲೇಡಿಯೇ ಸಾಕ್ಷಿ.. ಸಾವನ್ನೇ ಗೆದ್ದು ಬಂದ ಭೂಮಿಯ ಮಿರಾಕಲ್ ಸ್ಟೋರಿ..
ಟ್ರಾಫಿಕ್ ವಿಳಂಬವೇ ಭೂಮಿಗೆ ವರವಾಯ್ತಾ..?
ಲಂಡನ್ನಲ್ಲಿ ಪತಿಯೊಂದಿಗೆ ವಾಸವಿದ್ದ ಭೂಮಿ ಚೌಹಾಣ್ ಎಂಬ ಮಹಿಳೆ ರಜೆಯ ಕಾರಣ ಭಾರತಕ್ಕೆ ಬಂದಿದ್ರು.. ವಿಮಾನ ದುರಂತ ನಡೆದ ದಿನ ಬೆಳಗ್ಗೆ ಭೂಮಿ ಆಸ್ಪತ್ರೆಗೆ ಭೇಟಿ ನೀಡಿದ್ರು.. ಅದೇ ದಿನವೇ ಅವರು ಲಂಡನ್ಗೆ ಪ್ರಯಾಣ ಬೆಳೆಸಲು ಏರ್ಇಂಡಿಯಾ 171 ವಿಮಾನವನ್ನ ಬುಕ್ ಮಾಡಿದ್ರು.. ಆದ್ರೆ ಆಸ್ಪತ್ರೆಯಿಂದ ವಿಮಾನ ನಿಲ್ದಾಣಕ್ಕೆ ತೆರಳೋದು ವಿಳಂಬವಾಗಿತ್ತು.. ಭೂಮಿ ಟ್ರಾಫಿಕ್ನಲ್ಲಿ ಸಿಕ್ಕಿಹಾಕಿಕೊಂಡಿದ್ದೇ ಇದಕ್ಕೆ ಕಾರಣವಾಗಿತ್ತು.. ಹೀಗಾಗಿ ಅವರು ಮಧ್ಯಾಹ್ನ 12-30ಕ್ಕೆ ವಿಮಾನ ನಿಲ್ದಾಣವನ್ನ ತಲುಪುತ್ತಾರೆ.. ಆದ್ರೆ ಅದಾಗಲೇ ಚೆಕ್-ಇನ್ ಪ್ರಕ್ರಿಯೆ ಮುಗಿದಿದ್ದ ಕಾರಣ ಅವರು ಒಳಹೋಗಲು ಸಾಧ್ಯವಾಗ್ಲಿಲ್ಲ.. ಅಲ್ಲೇ ನೋಡಿ ಆಕೆಯ ಬದುಕಿನಲ್ಲಿ ಅತಿದೊಡ್ಡ ತಿರುವು ಸಿಕ್ಕಿದ್ದು..
ಜೀವ ಉಳಿಸಿದ್ದೇಗೆ ಆ ಹತ್ತು ನಿಮಿಷ..?
ಭೂಮಿ ಹತ್ತು ನಿಮಿಷ ತಡವಾಗಿ ವಿಮಾನ ನಿಲ್ದಾಣ ತಲುಪಿದ ಕಾರಣ ಎಷ್ಟೇ ಬೇಡಿಕೊಂಡ್ರು ಅಲ್ಲಿನ ಅಧಿಕಾರಿಗಳು ಬಿಡಲಿಲ್ಲ.. ಬೋರ್ಡಿಂಗ್ ಪ್ರಕ್ರಿಯೆಯನ್ನ ಆಗಲೇ ಮುಗಿಸಿರೋದಾಗಿ ಹೇಳಿದ್ದಾರೆ.. ಹೀಗಾಗಿ ಭೂಮಿ 1:30ಕ್ಕೆ ವಾಪಸ್ ಆಗ್ತಾರೆ.. ಆದ್ರೆ 1:38ಕ್ಕೆ ಅವರು ಹೋಗಬೇಕಿದ್ದ ವಿಮಾನ ದುರಂತ ಅಂತ್ಯ ಕಾಣುತ್ತೆ.. ಅವರು ಅಲ್ಲಿದ್ದಾಗಲೇ ವಿಷಯ ಕಿವಿಗೆ ಬಿದ್ದಾಗ ಒಮ್ಮೆಲೆ ಬೆಚ್ಚಿಬಿದ್ದಿದ್ರಂತೆ.. ಒಂದು ಕ್ಷಣ ಏನು ಮಾಡೋದು ಅಂತ ತಿಳಿಯದೇ ಸ್ಟನ್ ಆಗಿಬಿಟ್ಟಿದ್ರಂತೆ..
ನಾನು ಬಚಾವ್ ಆದೇ ಅಂತ ಸಂತೋಷ ಪಡೋಕಾಗಲ್ಲ.. ಬದಲಾಗಿ ದೇವರಿಗೆ ಧನ್ಯವಾದ ಹೇಳ್ತೀನಿ.. ಗಣಪತಿ ಬಪ್ಪನೇ ನನ್ನನ್ನ ಕಾಪಾಡಿದ್ದು ಅಂತ ಭೂಮಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.. ಆ 10 ನಿಮಿಷಗಳ ವಿಳಂಬ ಅವರ ಜೀವನದಲ್ಲಿ ಮರಿಯಲಾಗದ ಸಂಗತಿ ಅನ್ನೋದು ಸುಳ್ಳಲ್ಲ..
