ಅಗ್ನಿಸಾಕ್ಷಿ ಧಾರಾವಾಹಿಯಿಂದಲೇ ಖ್ಯಾತಿ ಪಡೆದ ನಟಿ ವೈಷ್ಣವಿ ಗೌಡ ಅವರು ಸನ್ನಿಧಿ ಎಂಬ ಹೆಸರಿನಿಂದಲೇ ಜನರಿಗೆ ಪರಿಚಯ.ಕನ್ನಡ ಬಿಗ್ ಬಾಸ್ ನಲ್ಲಿ ಸ್ಪರ್ಧಿಯಾಗಿಯೂ ಈ ನಟಿಯು ಎಲ್ಲರ ಗಮನ ಸೆಳೆದಂತವರು. ಸೀತಾರಾಮ ಧಾರವಾಹಿಯಲ್ಲೂ ಮುಖ್ಯ ಪಾತ್ರದಲ್ಲಿ ಈ ನಟಿಯು ಮಿಂಚಿರುವ ವೈಷ್ಣವಿ ಗೌಡ ಇದೀಗ ಸಪ್ತಪದಿ ತುಳಿದಿದ್ದಾರೆ.

ನಟಿ ವೈಷ್ಣವಿ ಅವರು ಅನುಕೂಲ್ ಮಿಶ್ರಾ ಜೊತೆ ಅದ್ಧೂರಿಯಾಗಿ ಮದುವೆ ಮಾಡಿಕೊಂಡಿದ್ದಾರೆ. Officially Mr and Mrs ಅಂತ ಕ್ಯಾಪ್ಷನ್‌ ಕೊಟ್ಟು ಕ್ಯೂಟ್‌ ಫೋಟೋಸ್‌ ಶೇರ್‌ ಮಾಡಿದ್ದಾರೆ. ಹೊರ ರಾಜ್ಯದ ಅನುಕೂಲ್ ಮಿಶ್ರಾ ಏರ್ಪೋರ್ಸ್ ಅಲ್ಲಿ ಕೆಲಸ ಮಾಡುತ್ತಾರೆ.

ಮದುವೆ ಸಮಾರಂಭವು ಒಕ್ಕಲಿಗ ಹಾಗೂ ಉತ್ತರ ಭಾರತದ ಶೈಲಿಯಲ್ಲಿ ನಡೆಯಿತು. ನಟಿ ಅಮೂಲ್ಯ, ಅನುಪಮಾ ಗೌಡ, ನಿವೇದಿತಾ ಗೌಡ, ನಟಿ ಇಶಿತಾ, ನೇಹಾ ಗೌಡ, ನಿರಂಜನ್ ದೇಶಪಾಂಡೆ ಹಾಗೂ ಪತ್ನಿ ಯಶಸ್ವಿನಿ, ನಟ ವಿಜಯ್ ಸೂರ್ಯ ದಂಪತಿ, ನಟಿ ಅಮೂಲ್ಯ ಮದುವೆಯಲ್ಲಿ ಭಾಗಿಯಾಗಿದ್ದರು.

Share.
Leave A Reply