ಬೆಂಗಳೂರು: ಭಾರೀ ಏರಿಕೆಯ ಹಾದಿಯಲ್ಲಿರುವ ಚಿನ್ನದ ಬೆಲೆ ಇಂದು ಸ್ವಲ್ಪ ಇಳಿಕೆ ಕಂಡಿದೆ. ಹೀಗಾಗಿ ಚಿನ್ನ ಪ್ರಿಯರು ಸಂತಸ ಪಡುತ್ತಿದ್ದಾರೆ.

ಸೋಮವಾರವಷ್ಟೇ 75 ರೂ. ನಷ್ಟು ಏರಿಕೆ ಕಂಡಿದ್ದ ಚಿನ್ನದ ಬೆಲೆ (Gold rate) ಇಂದು 80 ರೂ. ಇಳಿಕೆ ಕಂಡಿದೆ. ಹೀಗಾಗಿ ಅಪರಂಜಿ ಚಿನ್ನದ ಬೆಲೆ 13,400 ರೂ ಗಡಿಗೆ ಬಂದಿದೆ. ಆಭರಣ ಚಿನ್ನದ ಬೆಲೆಯೂ 12,300 ರೂ ಗಡಿಗೆ ಬಂದು ನಿಂತಿದೆ.
ಆದರೆ, ಸೋಮವಾರ ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದ್ದು, 3 ರೂ.ನಷ್ಟು ಏರಿಕೆಯಾಗಿದೆ. ದೇಶದಲ್ಲಿ ಇಂದು 10 ಗ್ರಾಂನ 22 ಕ್ಯಾರೆಟ್ ಚಿನ್ನದ ಬೆಲೆ 1,22,700 ರೂ.ಆಗಿದೆ. 24 ಕ್ಯಾರಟ್ ನ ಅಪರಂಜಿ ಚಿನ್ನದ ಬೆಲೆ 1,33,860 ರೂ. ಆಗಿದೆ. 100 ಗ್ರಾಂ ಬೆಳ್ಳಿ ಬೆಲೆ 19,900 ರೂ. ಇದೆ.

ಅಲ್ಲದೇ, ಸಿಲಿಕಾನ್ ಸಿಟಿಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 1,22,700 ರೂ. ಇದೆ. ಬೆಳ್ಳಿ ಬೆಲೆ 100 ಗ್ರಾಮ್ಗೆ 19,900 ರೂ. ದರ ಆಗಿದೆ.

ಭಾರತದಲ್ಲಿ ಚಿನ್ನಾಭರಣ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,386 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,270 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,039 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 199 ರೂ


ವಿದೇಶಗಳಲ್ಲಿ ಚಿನ್ನದ ಬೆಲೆ ಹೇಗಿದೆ?(ಗ್ರಾಂ ಲೆಕ್ಕಾಚಾರದಲ್ಲಿ)
ಮಲೇಷ್ಯಾ: 12,299 ರೂ.
ದುಬೈ: 11,869 ರೂ.
ಅಮೆರಿಕ: 12,169 ರೂ.
ಸಿಂಗಾಪುರ: 12,182 ರೂ.
ಕತಾರ್: 11,984 ರೂ.
ಸೌದಿ ಅರೇಬಿಯಾ: 11,859 ರೂ.
ಓಮನ್: 12,002 ರೂ.
ಕುವೇತ್: 11,581 ರೂ.

Share.
Leave A Reply