ಪಹಲ್ಗಾಮ್‌ (pahalgam) ದಾಳಿ ಬಳಿಕ ಕುದಿಯುತ್ತಿದ್ದ ಭಾರತೀಯರ ಎದೆಯ ಜ್ವಾಲಾಮುಖಿ ಇಂದು ಸ್ಫೋಟಗೊಂಡಿದೆ. 22 ಏಪ್ರಿಲ್‌ರಂದು ಪಹಲ್ಗಾಮ್‌ನಲ್ಲಿ ನಡೆದ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. ಇದರ ಪ್ರತೀಕಾರವಾಗಿ ಭಾರತೀಯ ಸೇನೆ ಬೆಳಗಿನ ಜಾವ ನಡೆಸಿದ ಆಪರೇಷನ್‌ ಸಿಂಧೂರ (Operation Sindoor)ಹೆಸರಿನ ಕಾರ್ಯಾಚರಣೆಯಲ್ಲಿ ಜೈಶ್-ಎ-ಮೊಹಮ್ಮದ್ ಮತ್ತು ಲಷ್ಕರ್-ಎ-ತೋಯ್ಬಾ (Lashkar-e-Taiba) ಉಗ್ರ ಸಂಘಟನೆಗೆ ಸೇರಿದ 9 ಉಗ್ರ ನೆಲೆಗಳನ್ನ ಉಡಿಸ್‌ ಮಾಡಿದೆ. ಭಾರತೀಯ ಹೆಣ್ಮಕ್ಕಳ ಕುಂಕುಮ ಅಳಿಸಿರುವ ಪಾಕಿ ಉಗ್ರರ ಸಂಹಾರಕ್ಕೆ ಆಪರೇಷನ್‌ ಸಿಂಧೂರ ಎಂದು ಹೆಸರಿಟ್ಟಿರುವ ಸೇನೆ, ದಾಳಿಯ ಕುರಿತಾಗಿ ಟ್ವೀಟ್‌ ಮಾಡಿ Justice is Served ಎಂದು ಬರೆದುಕೊಂಡಿದೆ.

ಈ ದಾಳಿಯಲ್ಲಿ ಅಂದಾಜು 70ಕ್ಕೂ ಅಧಿಕ ಉಗ್ರರ ಸಂಹಾರ ಮಾಡಲಾಗಿದೆ ಎಂದು ಸೇನೆ ತಿಳಿಸಿದೆ. ಭಾರತೀಯ ಸೇನೆ ಈ ದಿಟ್ಟ ಕಾರ್ಯಕ್ಕೆ ದೇಶದೆಲ್ಲಡೆ ಶ್ಲಾಘನೆ ವ್ಯಕ್ತವಾಗಿದೆ. ಆಪರೇಷನ್‌ ಸಿಂಧೂರ ಯಶಸ್ವಿ ಬಗ್ಗೆ ಟ್ವೀಟ್‌ ಮಾಡಿರುವ ರಾಜನಾಥ್‌ ಸಿಂಗ್‌, ಭಾರತ್‌ ಮಾತಾ ಕೀ ಜೈ ಎಂದು ಬರೆದುಕೊಂಡಿದ್ದಾರೆ. ಭಾರತದ ಈ ದಿಟ್ಟ ನಿರ್ಧಾರಕ್ಕೆ ಭಾರತೀಯ ಜನತೆ ಪಾಕಿಸ್ತಾನದಲ್ಲಿ ದೀಪಾವಳಿ ಆಚರಿಸಿದ ಭಾರತ ಎಂದು ಕಮೆಂಟ್‌ ಮಾಡುತ್ತಿದ್ದಾರೆ..

Share.
Leave A Reply