ಇಸ್ಲಾಮಾಬಾದ್: ಕೊನೆಗೂ ಪಾಕ್, ಭಾರತದ ಏಟನ್ನು ಒಪ್ಪಿಕೊಂಡಿದೆ. ಭಾರತದ ಆಪರೇಷನ್ ಸಿಂಧೂರ (Operation Sindoor) ದಾಳಿಯ ಸಂದರ್ಭದಲ್ಲಿ ನಾವು `ದೇವರ ದಯೆ’ ಯಿಂದ ಬದುಕುಳಿದಿದ್ದೇವೆ ಎಂದು ಹೇಳಿದೆ.
ಈ ಹೇಳಿಕೆಯನ್ನು ಸ್ವತಃ ಪಾಕಿಸ್ತಾನದ ರಕ್ಷಣಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಆಸಿಮ್ ಮುನೀರ್(Asim Munir) ಹೇಳಿದ್ದಾನೆ. ಇಸ್ಲಾಮಾಬಾದ್ನಲ್ಲಿ ನಡೆದ ರಾಷ್ಟ್ರೀಯ ಉಲೇಮಾ ಸಮಾವೇಶದಲ್ಲಿ ಮಾತನಾಡಿ, ಮೇ ತಿಂಗಳಲ್ಲಿ ನಡೆದ 4 ದಿನಗಳ ಮೇ ಸಂಘರ್ಷದ ಸಂದರ್ಭದಲ್ಲಿ ಪಾಕ್ ಸಶಸ್ತ್ರ ಪಡೆಗಳಿಗೆ ದೇವರ ನೆರವು ಸಿಕ್ಕಿತು ಎಂದಿದ್ದಾನೆ.
26 ನಾಗರಿಕರನ್ನು ಹತ್ಯೆಗೈದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ ನಡೆಸಿತ್ತು. ಮೇ 7 ರಂದು ಪಾಕಿಸ್ತಾನದ ಸೇನಾ ನೆಲೆ ಮತ್ತು ಉಗ್ರರ ನೆಲೆಗಳನ್ನು ಗುರಿಯಾಗಿಸಿ ದಾಳಿ ಮಾಡಲಾಗಿತ್ತು.
