ಸ್ವಯಂ ಘೋಷಿತ ಶಾಂತಿ ಧೂತ ಡೊನಾಲ್ಡ್‌ ಟ್ರಂಪ್‌ಗೆ ಭಾರಿ ಹಿನ್ನಡೆ ಉಂಟಾಗಿದೆ. ನೊಬೆಲ್‌ ಶಾಂತಿ ಪುರಸ್ಕಾರದ ನಿರೀಕ್ಷೆಯಲ್ಲಿದ್ದ ಅಮೆರಿಕದ ಅಧ್ಯಕ್ಷ ಟ್ರಂಪ್‌ ಕನಸು ಭಗ್ನವಾಗಿದೆ.. ಇಂಡಿಯಾ-ಪಾಕಿಸ್ತಾನ ಸೇರಿದಂತೆ ವಿವಿಧ ದೇಶಗಳ ನಡುವಿನ 7 ಯುದ್ಧವನ್ನು ನಿಲ್ಲಿಸಿದ್ದೇನೆ. ಹೀಗಾಗಿ, ನನಗೆ ನೊಬೆಲ್‌ ಶಾಂತಿ ಪ್ರಶಸ್ತಿ ಸಿಗಬೇಕು ಅಂತಾ ಟ್ರಂಪ್‌ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಆದ್ರೆ, ನೊಬೆಲ್‌ ಶಾಂತಿ ಪ್ರಶಸ್ತಿ ಆಯ್ಕೆ ಮಂಡಳಿ ಸದಸ್ಯರು ಟ್ರಂಪ್‌ ಹೆಸರನ್ನು ಪರಿಗಣಿಸಿಲ್ಲ. ಬದಲಾಗಿ ವೆನಿಜುವೆಲಾ ದೇಶದ ಮರಿಯಾ ಕೊರಿನಾ ಮಚಾಡೋಗೆ 2025ರ ನೊಬೆಲ್ ಶಾಂತಿ ಪ್ರಶಸ್ತಿ ದೊರೆತಿದೆ. ಮರಿಯಾ ಕೊರಿನಾ ಮಚಾಡೋ ವೆನಿಜುವೆಲಾದ ವಿರೋಧ ಪಕ್ಷದ ನಾಯಕಿಯಾಗಿದ್ದು, ಪ್ರಜಾಪ್ರಭುತ್ವದ ಉಳಿವಿಗಾಗಿ ಹೋರಾಟ ನಡೆಸಿದ ಕಾರಣಕ್ಕಾಗಿ ನೊಬೆಲ್ ಶಾಂತಿ ಪುರಸ್ಕಾರ ಒಲಿದು ಬಂದಿದೆ. ಉದ್ಯಮಿಯೂ ಆಗಿರುವ ಮರಿಯಾ, ಕೈಗಾರಿಕಾ ಇಂಜಿನಿಯರ್‌ ಆಗಿದ್ದಾರೆ. ವೆನಿಜುವೆಲಾ ಉಕ್ಕಿನ ಮಹಿಳೆ ಅಂತಲೇ ಗುರುತಿಸಿಕೊಂಡಿದ್ದಾರೆ. ಅಲ್ಲಿನ ಸರ್ವಾಧಿಕಾರದ ವಿರುದ್ಧ ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಪ್ರಶಸ್ತಿ ವಿಜೇತಕರಿಗೆ ನಗದು ಬಹುಮಾನ ಹಾಗೂ ಚಿನ್ನದ ಪದಕ ನೀಡಲಾಗ್ತಿದ್ದು, ಪ್ರಸ್ತುತ ನೊಬೆಲ್‌ ಪ್ರಶಸ್ತಿಯ ಬೆಲೆ 10.38 ಕೋಟಿ ರೂಪಾಯಿ ಇದೆ.

Share.
Leave A Reply