ದೊಡ್ಮನೆ ಅಖಾಡಕ್ಕೆ ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳ ಎಂಟ್ರಿಯಿಂದ ಹೊಸ ಟ್ವಿಸ್ಟ್‌ ಕೊಟ್ಟದ ಬಿಗ್‌ಬಾಸ್‌, ಈಗ ಬಿಗ್‌ ಫ್ಯಾನ್ಸ್‌ಗೆ ಶಾಕ್‌ ಕೊಟ್ಟಿದ್ದಾರೆ. ಈ ವಾರ ಬಿಗ್‌ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ ಆಗಿತ್ತು. ಎಲ್ಲರೂ ಕೂಡ ಅವರದ್ದೇ ಆಟವನ್ನು ಆಡುತ್ತಿದ್ದಾರೆ ಹೀಗಾಗಿ ಯಾರು ಹೊರ ಬರುತ್ತಾರೆ ಅಂತ ಊಹಿಸಲು ಕಷ್ಟವಾಗಿತ್ತು ಆದ್ರೆ ಇದೀಗ ಆ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜಾಹ್ನವಿ ಬಿಗ್ ಬಾಸ್ ಮನೆಯಿಂದ ಔಟ್‌ ಆಗಿದ್ದಾರೆ. ಅಷ್ಟಕ್ಕೂ ಜಾನ್ವಿ ಔಟ್‌ ಆಗೋಕೆ ಕಾರಣವೇನು? ಅನ್ನೋದನ್ನ ನೋಡೋಣ ಬನ್ನಿ

ಬಿಗ್‌ಬಾಸ್‌ ಮನೆಗೆ 5 ಮಂದಿ ಅತಿಥಿಗಳ ಪ್ರವೇಶದಿಂದ ಬಿಗ್‌ ಹೌಸ್‌ ಫೈಟ್‌ ರಿಂಗ್‌ ಆಗಿತ್ತು. ಮನೆ ಮಂದಿ ಗಿಲ್ಲಿಯದ್ದು ತಪ್ಪು ಅಂದ್ರೆ, ಕೆಲ ಸ್ಪರ್ಧಿಗಳು ಗಿಲ್ಲಿ ಪರ ಬ್ಯಾಟ್‌ ಬೀಸಿದರು. ಪ್ರಸ್ತುತ ಬಿಗ್‌ ಹೌಸ್‌ಗೆ ಇಬ್ಬರ ವೈಲ್ಡ್‌ ಕಾರ್ಡ್‌ ಎಂಟ್ರಿ ಆಗಿದೆ. ಹಿಂದಿನ ಸೀಸನ್‌ನ ಸ್ಪರ್ಧಿಯಾಗಿದ್ದ ರಜತ್‌ ಮತ್ತು ಚೈತ್ರಾ ದೊಡ್ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.. ಇನ್ನು ಈ ವಾರ ಬಿಗ್‌ ಮನೆಯಿಂದ ಜಾಹ್ನವಿ ಔಟ್‌ ಆಗಿದ್ದಾರೆ. ಈ ವಾರ ಬಿಗ್‌ಬಾಸ್ ಮನೆಗೆ ಮಾಜಿ ಸ್ಪರ್ಧಿಗಳು ಅತಿಥಿಗಳಾಗಿ ಬಂದ್ಮೇಲೆ ಮತ್ತಷ್ಟು ರಣರೋಚಕವಾಗಿದೆ. ಮನೆಯ ಸ್ಪರ್ಧಿಗಳನ್ನ ಕೆರಳಿಸಿ ಕೆಂಡ ಮಾಡಿದ್ದರು. ಇನ್ನು ಈ ವಾರ ಬಿಗ್‌ಬಾಸ್ ಮನೆಯಲ್ಲಿ ರಘು, ಧ್ರುವಂತ್, ಅಶ್ವಿನಿ ಗೌಡ, ಮಾಳು, ಜಾನ್ವಿ, ಕಾವ್ಯ ಹಾಗೂ ಗಿಲ್ಲಿ ನಾಮಿನೇಟ್ ಆಗಿದ್ದರು. ಎಲ್ಲರೂ ಈ ವಾರ ಉತ್ತಮವಾಗಿ ಆಟ ಆಡಿದ್ದರು. ಇವರ ಪೈಕಿ ಇದೀಗ ಜಾಹ್ನವಿ ಮನೆಯಿಂದ ಹೊರ ಬಂದಿದ್ದಾರೆ.

ಸದ್ಯ ಬಿಗ್‌ಬಾಸ್‌ ಮನೆಯ ಸಖತ್‌ ಸ್ಟ್ರಂಗ್‌ ಸ್ಪರ್ಥಿಯಾಗಿದ ಜಾನ್ವಿ, ಔಟ್‌ ಆಗೋಕೆ ಕಾರಣವೇನು ಅನ್ನೋದನ್ನ ನೋಡಿದ್ರೆ, ಜಾಹ್ನವಿ ಹಾಗೂ ಅಶ್ವಿನಿ ಗೌಡ ಅವರ ಗಾಸಿಪ್‌, ಕೆಲ ಸ್ಪರ್ಧಿಗಳನ್ನ ಪರ್ಸನಲ್‌ ಟಾರ್ಗೆಟ್‌ ಮಾಡ್ತಿದ್ದಾಗ, ಇವರಿಬ್ಬರಲ್ಲಿ ಒಬ್ಬರಾದರೂ ಬೇಗ ಔಟ್‌ ಆಗಲಿ ಎಂದು ಬಿಗ್‌ಬಾಸ್‌ ಫ್ಯಾನ್ಸ್‌ ಅಭಿಪ್ರಾಯ ಪಟ್ಟಿದ್ದರು. ಹಾಗೇ ಅಶ್ವಿನಿ ಗೌಡ ಜೊತೆಗಿನ ಅತಿಯಾದ ಸ್ನೇಹವೇ ಜಾನ್ವಿ ಪಾಲಿಗೆ ವಿಷವಾಯ್ತಾ? ಎಂಬ ಪ್ರಶ್ನೆ ಕೂಡ ಅಭಿಮಾನಿಗಳಲ್ಲಿ ಮೂಡಿದೆ.
ಆದೇನೆ ಆಗಲಿ….ಬಿಗ್‌ಬಾಸ್‌ ಕಪ್‌ ಗೆದ್ದೇ ಗೆಲ್ತೀನಿ ಅಂತ ಹೇಳ್ತಿದ್ದ ಜಾನ್ವಿ ಔಟ್‌ ಆಗಿದ್ದು, ಬಿಗ್‌ಬಾಸ್‌ ಕಿರೀಟ ಯಾರ ಗೆಲ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ

Share.
Leave A Reply