ಬೆಂಗಳೂರು : ಮೊಬೈಲ್ ಗೆ ಎಲ್ಲರ ಬದುಕಿನ ಅವಿಭಾಜ್ಯ ಅಂಗ ಆಗಿ ಬಿಟ್ಟಿದೆ. ಮೊಬೈಲ್ ಇಲ್ಲದೆ ಬದುಕು ಇಲ್ಲ ಎನ್ನುವಂತಾಗಿದೆ. ಇದರ ಮಧ್ಯೆ ಮೊಬೈಲ್ ನ ಹಣ ದುಬ್ಬರ ಜನರಿಗೆ ಇಕ್ಕಟ್ಟು ತರುತ್ತಿದೆ. ಇತ್ತೀಚೆಗಷ್ಟೇ ಜಿಯೋ ಹೊರತು ಪಡಿಸಿ ಕೆಲವು ಕಂಪನಿಗಳು ದರ ಏರಿಕೆ ಮಾಡಿದ್ದವು. ಈಗ ಮತ್ತೊಮ್ಮೆ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಇದೇ ತಿಂಗಳ ಅಂತ್ಯದಲ್ಲಿ ಬಿಎಸ್ಸೆನ್ನೆಲ್, ಜಿಯೋ, ಏರ್ ಟೆಲ್ ಸೇರಿದಂತೆ ಇನ್ನಿತರ ಕಂಪನಿಗಳು ಸುಂಕ ಹೆಚ್ಚಿಸಲಿವೆ. ಈ ಹೊರೆ ನೇರವಾಗಿ ಗ್ರಾಹಕರ ಮೇಲೆ ಬೀಳಲಿದೆ ಎನ್ನಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಟೆಲಿಕಾಂ ಕಂಪನಿಗಳ ಆದಾಯ ಕುಸಿಯುತ್ತಿದೆ. ಹೀಗಾಗಿ ಆದಾಯದ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಹಕರ ಮೇಲೆ ಹೊರೆ ಹೇರಲು ಮುಂದಾಗಿವೆ ಎಂದು ವರದಿಯಾಗುತ್ತಿವೆ.

ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಶೇ. 10 ಕ್ಕೆ ಇಳಿದಿದೆ, ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿ ಇದು ಶೇ. 14-16 ರಷ್ಟಿತ್ತು. ಡಿಸೆಂಬರ್ ತ್ರೈಮಾಸಿಕದಲ್ಲಿ ಆದಾಯವು ಮತ್ತಷ್ಟು ಕಡಿಮೆಯಾಗುವ ನಿರೀಕ್ಷೆಯಿದೆ. ಹೀಗಾಗಿ ದರ ಏರಿಕೆಯಾಗಲಿದೆ ಎನ್ನಲಾಗುತ್ತಿದೆ.
ಕಳೆದ ತಿಂಗಳು, ವಿಐ ತನ್ನ 1,999 ರೂ. ವಾರ್ಷಿಕ ಯೋಜನೆಯ ಬೆಲೆಯನ್ನು ಶೇ. 12ರಷ್ಟು ಏರಿಸಿತ್ತು. ಏರ್‌ ಟೆಲ್ ತನ್ನ ಅಗ್ಗದ ವಾಯ್ಸ್ ಓನ್ಲಿ ಯೋಜನೆಯನ್ನು 189 ರೂ. ನಿಂದ 199 ರೂ.ಗೆ ಏರಿಸಿತ್ತು. ಈಗ ಎಲ್ಲ ಕಂಪನಿಗಳು ದರ ಏರಿಕೆ ಮಾಡುವ ಸಾಧ್ಯತೆ ಇದೆ.

Share.
Leave A Reply