ರೇಣುಕಾಸ್ವಾಮಿ ಕೊಲೆ ಆರೋಪಿ, ನಟ ದರ್ಶನ್ ಫ್ಯಾನ್ಸ್ ವಿರುದ್ಧ ಸ್ಯಾಂಡಲ್‌ವುಡ್ ಕ್ವೀನ್, ನಟಿ ರಮ್ಯಾ ಫುಲ್ ಗರಂ ಆಗಿದ್ದಾರೆ. ಕೊಲೆಯಾಗಿರುವ ರೇಣುಕಾಸ್ವಾಮಿ ಕುಟುಂಬದ ಪರ ರಮ್ಯಾ ನಿಂತಿರುವುದು ದರ್ಶನ್ ಫ್ಯಾನ್ಸ್ ಕೋಪಕ್ಕೆ ಕಾರಣವಾಗಿದೆ. ಹೀಗಾಗಿ ದರ್ಶನ್ ಫ್ಯಾನ್ಸ್ ನಿರಂತರವಾಗಿ ರಮ್ಯಾಗೆ ಸೋಷಿಯಲ್ ಮೀಡಿಯಾ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದಾರೆ. ದರ್ಶನ್ ಫ್ಯಾನ್ಸ್ ಹೆಸರಿನಲ್ಲಿ ಕಳುಹಿಸುತ್ತಿರುವ ಅಶ್ಲೀಲ ಮೆಸೇಜ್‌ಗಳನ್ನು ತಮ್ಮದೇ ಸೋಷಿಯಲ್ ಮೀಡಿಯಾ ಅಕೌಂಟ್‌ನಲ್ಲಿ ರಮ್ಯಾ ಪೋಸ್ಟ್ ಕೂಡ ಮಾಡಿದ್ದಾರೆ. ಈ ವಿವಾದ ಈಗ ಸ್ಯಾಂಡಲ್‌ವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ. ದರ್ಶನ್ ಅಭಿಮಾನಿಗಳಿಗಾಗಿಯೇ ತೆರೆಯಲಾಗಿರುವ ಅಫಿಶಿಯಲ್ ಫ್ಯಾನ್ಸ್ ಪೇಜ್ ʻಡಿ ಕಂಪನಿʼ ಎಂಬ ಅಕೌಂಟ್ ಮೂಲಕ ಯಾರೊಬ್ಬರೂ ಯಾವುದಕ್ಕೂ ರಿಯಾಕ್ಟ್ ಮಾಡದಂತೆ ಮನವಿ ಮಾಡಲಾಗಿದೆ.
ದರ್ಶನ್ ಫ್ಯಾನ್ಸ್ ಅಫೀಶಿಯಲ್ ಪೇಜ್ ಪೋಸ್ಟ್‌ನಲ್ಲೇನಿದೆ?
ಡಿ-ಸೆಲಬ್ರೆಟಿಸ್‌ಗಳಿಗಾಗಿಯೇ ತೆರೆಯಲಾದ ಅಫಿಶಿಯಲ್ ಫ್ಯಾನ್ಸ್ ಪೇಜ್‌ನಲ್ಲಿ, ಡಿ ಬಾಸ್ ಮೇಲೆ ಗೌರವವಿರುವ ಯಾವೊಬ್ಬ ಅಭಿಮಾನಿ ಕೂಡ ಯಾವುದೇ ವಿವಾದಕ್ಕೆ ಕಿವಿಗೊಡಬೇಡಿ. ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ. ಯಾರಿಗೂ ಮೆಸೇಜ್ ಮಾಡಬೇಡಿ. ಮಪ್ರಚಾರಕ್ಕೆ ಆಗಲಿ, ಹುನ್ನಾರ ಮಾಡಲಿ, ಯಾರು ಏನೇ ಅಂದರೂ ತಲೆ ಕೆಡಸಿಕೊಳ್ಳಬೇಡಿ. ದರ್ಶನ್ ಫ್ಯಾನ್ಸ್ ಏನೆಂದು, ಮಾಡಿರುವ ಸಮಾಜಮುಖಿ ಕಾರ್ಯಗಳು ಸಾಕ್ಷಿ. ಅವಮಾನಗಳು ಇನ್ನಷ್ಟು ಕೆಲಸ ಮಾಡಲು ಮೆಟ್ಟಿಲು ಆಗಲಿ ಎಂದು ಡಿ ಕಂಪನಿ ಅಭಿಮಾನಿಗಳಿಗೆ ಮನವಿ ಮಾಡಿದೆ. ಅಲ್ಲದೇ ʻಕಾಲಯ ತಸ್ಮೈ ನಮಃʼ ಅಂತ ಬರೆದು ಡೆವಿಲ್ ಸಿನಿಮಾದ ಪೋಸ್ಟರ್‌ವೊಂದನ್ನು ಹಂಚಿಕೊಂಡಿದೆ.
