ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಸ್ಪರ್ಧಿಗಳ ಆಟ ರೋಚಕ ತಿರುವು ಪಡೆದುಕೊಳ್ತಿದೆ. ಅದ್ರಲ್ಲೂ ಶೋನ ಪ್ರಮುಖ ಆಕರ್ಷಣೆ ಗಿಲ್ಲಿ ನಟನಿಗೆ ಈಗ ಸಂಕಷ್ಟ ಎದುರಾಗಿದೆ. ದಿನವಿಡೀ ಮಾತಾಡುವ ಸಾಮರ್ಥ್ಯ ಇರುವ ಗಿಲ್ಲಿ ಈಗ ಬಾಯಿ ಮುಚ್ಕೊಂಡಿರುವ ಸಂದಿಗ್ಧ ಪರಿಸ್ಥಿತಿ ಬಂದೊಂದಗಿದೆ. ಯಾಕಂದ್ರೆ, ಗಿಲ್ಲಿ ನಟನಿಗೆ ಕಳೆದ ಸೀಸನ್‌ನ ಸ್ಪರ್ಧಿಗಳು, ಸಖತ್‌ ಕ್ವಾಟ್ಲೆ ಕೊಟ್ಟಿದ್ದು, ಸ್ಟ್ರಿಕ್ಟ್‌ ಆಗಿ ವಾರ್ನಿಂಗ್‌ ಮಾಡಿದ್ದಾರೆ.

ಯೆಸ್..‌ ದೊಡ್ಮನೆಗೆ ಬಿಗ್‌ಬಾಸ್‌ ಸೀಸನ್‌ 11ರ ಫೈರ್‌ ಬ್ರ್ಯಾಂಡ್‌ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ರಜತ್‌ ಬುಜ್ಜಿ, ತ್ರಿವಿಕ್ರಮ್‌, ಉಗ್ರಂ ಮಂಜು, ಚೈತ್ರಾ ಕುಂದಾಪುರ ಹಾಗೂ ಮೋಕ್ಷಿತಾ ಪೈ ಅಬ್ಬರ ಜೋರಾಗಿದೆ. ಇವರ ಮುಂದೆ, ಇಡೀ ಮನೆಯ ಸದಸ್ಯರನ್ನ ಗೋಳೋಯ್ಕೊಳ್ತಿದ್ದ ಗಿಲ್ಲಿ ಈಗ ಥಂಡಾ ಹೊಡೆದಿದ್ದಾರೆ.

ಹೌದು.. ಉಗ್ರಂ ಮಂಜು ಮದ್ವೆ ಬಗ್ಗೆ ಬಿಗ್‌ಬಾಸ್‌ ಅನೌನ್ಸ್‌ ಮಾಡುತ್ತಾರೆ. ನಮ್ಮ ನಲ್ಮೆಯ ಮಹಾರಾಜ ಮಂಜು ಅವರಿಗೆ ಮದ್ವೆ ಫಿಕ್ಸ್‌ ಆಗಿದೆ ಅಂತಾ ಹೇಳ್ತಾರೆ. ಇದನ್ನ ಕೇಳಿದ ಸದಸ್ಯರು ಕೂಡ ಸ್ಪೆಷಲ್‌ ವಿಶ್‌ ಮಾಡಿದಾಗ ಉಗ್ರಂ ಮಂಜು ಖುಷಿಯಲ್ಲಿ ತೇಲಾಡಿದ್ರು. ಇದೇ ವೇಳೆ, ಗ್ಯಾಪಲ್ಲಿ ಗಿಲ್ಲಿ ನಟ, ಮೂರನೇ ಮದ್ವೆನಾ? ನಾಲ್ಕನೇ ಮದ್ವೆನಾ ಅಂತಾ ಡೈಲಾಗ್‌ ಹೊಡೆದ್ರು. ಇದನ್ನ ಕೇಳಿದ ಉಗ್ರಂ ಮಂಜು ಪ್ರಾಕ್ಶನ್‌ ಆಫ್‌ ಸೆಕೆಂಡ್‌ನಲ್ಲಿ ಉಗ್ರರೂಪ ತಾಳಿದ್ರು. ಕೋಪದಲ್ಲೇ ಗಿಲ್ಲಿ ಕಡೆ ತಿರುಗಿ ನೋಡಿ ಗುರಾಯಿಸಿದ್ರು. ಇದಾದ ಮೇಲೆ ಗಿಲ್ಲಿ ಬಳಿ ಹೋದ ಉಗ್ರಂ ಮಂಜು, ಖಡಕ್‌ ಕ್ಲಾಸ್‌ ತೆಗೆದುಕೊಂಡ್ರು. ಪರ್ಸನಲ್‌ಗೆ ಅಂತಾ ಬಂದ್ರೆ ನಾನು ಅತಿಥಿನೂ ಅಲ್ಲ.. ನೀನು ಸಪ್ಲೈಯರೂ ಅಲ್ಲ. ಬೇರೆ ಆಗಿ ಬಿಡ್ತೀವಿ ಅಂತಾ ಮಂಜಣ್ಣ ಹೇಳಿದ್ದು, ಗಿಲ್ಲಿ ಸಾರಿ ಸಾರಿ ಅಣ್ಣ ಅಂತಾ ಥಂಡಾ ಹೊಡೆದಿದ್ರು.

ಸದ್ಯ ರಿಲೀಸ್‌ ಆಗಿರುವ ಪ್ರೊಮೋದ ಮತ್ತೊಂದು ಸೀನ್‌ನಲ್ಲಿ ನಮ್ಮಣ್ಣ ಬ್ಯಾಚುಲರ್‌ ಪಾರ್ಟಿ ಅದ್ಕೆ ಬಂದಿರೋದು ನಾವು ಅಂತಾ ಮೋಕ್ಷಿತಾ ಪೈ ಎದ್ದು ನಿಂತು ಹೇಳ್ತಾರೆ. ಆಗ ಮಧ್ಯದಲ್ಲಿ ಎಂಟ್ರಿ ಕೊಟ್ಟ ಗಿಲ್ಲಿ ನಟ, ಬಿಟ್ಟಿ ಊಟಕ್ಕೆ ಬಂದಿದ್ದೀರಾ ಅಂತಾ ಡೈಲಾಗ್‌ ಹೊಡೆದು ಸುಮ್ನಾಗ್ತಾರೆ. ಇದ್ರಿಂದ ಕೆರಳಿದ ರಜತ್‌ ಬುಜ್ಜಿ, ಸಖತ್‌ ಕ್ಲಾಸ್‌ ತೆಗೆದುಕೊಂಡಿದ್ದಾರೆ. ನೀನ್‌ ಕೊಡ್ತಾ ಇದ್ದೀಯೆನಪ್ಪಾ ಬಿಟ್ಟಿ ಊಟ..? ಮಾತುಗಳು ಕರೆಕ್ಟಾಗಿರಲಿ ಅಂತಾ ರೋಷಾವೇಶದಲ್ಲೇ ರಜತ್‌ ಕ್ಲಾಸ್‌ ತೆಗೆದುಕೊಂಡಿದ್ದು, ಗಿಲ್ಲಿ ಸಾರಿ ಸರ್‌ ಅಂದಿದ್ದಾರೆ. ಇದನ್ನೆಲ್ಲಾ ನೋಡಿದ ಗಿಲ್ಲಿ ನಟನ ವಿರೋಧಿಗಳು ಈಗ ಫುಲ್‌ ಖುಷ್‌ ಆಗಿದ್ದಾರೆ.

ಮತ್ತೊಂದ್ಕಡೆ, ಗಿಲ್ಲಿ ವಿರುದ್ಧ ಆಂಕರ್‌ಗೆ ಅವಮಾನ ಮಾಡಿದ ಆರೋಪವೂ ಕೇಳಿ ಬರುತ್ತಿದೆ. ಆಂಕರ್‌ ಜಾನ್ವಿ ರೆಡಿ ಆಗ್ತಿರುವಾಗ ಗಿಲ್ಲಿ ಮಧ್ಯೆ ಪ್ರವೇಶಿಸಿ, ಏನ್‌ ಜಾನು, ಆಂಕರಿಂಗ್‌ ಮರ್ತೋಗ್ತದೆ ಅಂತಾ ಪ್ರಾಕ್ಟೀಸ್‌ ಮಾಡ್ತಿದಿಯಾ ಅಂತಾ ಕಾಳೆದ್ರು.. ಆಗ ಕಾವ್ಯಾ ಎಂಟ್ರಿ ಕೊಟ್ಟು, ನಾವೂ ಆಂಕರಿಂಗ್‌ ಮಾಡೋಣ. ಆದ್ರೆ ಸವಿರುಚಿ ಕಾರ್ಯಕ್ರಮಕ್ಕೆ ಬೇಡ. ಮಾಡಿದ್ರೆ ಇನ್ನೂ ದೊಡ್ಡ ಕಾರ್ಯಕ್ರಮಕ್ಕೆ ಮಾಡೋಣ ಅಂತಾ ಹೇಳ್ತಾರೆ. ಆಗ ಗರಂ ಆದ ಜಾನ್ವಿ, ಆಂಕರಿಂಗ್‌ ಮಾಡೋದನ್ನ ನೀವು ಸಣ್ಣದು, ದೊಡ್ಡದು ಅಂತಾ ಅವಮಾನಿಸ್ತಿದ್ದೀರಾ ಅಂತಾ ಆರೋಪಿಸಿದ್ದಾರೆ. ಹೀಗಾಗಿ, ಗಿಲ್ಲಿ ಆಂಕರಿಂಗ್‌ಗೆ ಅವಮಾನಿಸಿದ್ರಾ ಅನ್ನೋ ಚರ್ಚೆಯೂ ಶುರುವಾಗಿದೆ.

Share.
Leave A Reply