ಭಾರತೀಯ ಸೇನೆ (Indian Army) ಸುಡುವ ಜ್ವಾಲೆ ಅಂತ ಗೊತ್ತಿದ್ರು ಮುಟ್ಟಬಾರದಿತ್ತು.. ಭಾರತೀಯ ನೌಕಾ ಸೇನೆ ಸುನಾಮಿ ಅಂತ ತಿಳಿದು ಸುಮ್ಮನಿರಬೇಕಿತ್ತು.. ಭಾರತೀಯ ವಾಯುಸೇನೆ ಚಂಡಮಾರುತ ಅನ್ನೋದು ಅರಿತು ಕೆಣಕಬಾರದಿತ್ತು.. ಆದ್ರೆ ಎಲ್ಲವನ್ನು ತಿಳಿದು ಸಹಾ ಕಿಡಿ ಹೊತ್ತಿಸಿದ ಪಾಕ್‌ ಬೆಂಬಲಿತ ಉಗ್ರರು ಇದೀಗ ಸುಟ್ಟು ಭಸ್ಮವಾಗಿದ್ದಾರೆ. ಭಾರತ ಮಾತೆಯ ಮಗಳಂದಿರ ಸಿಂಧೂರ ಅಳಿಸಿದ್ದಕ್ಕಾಗಿ ಆಪರೇಷನ್‌ ಸಿಂಧೂರಕ್ಕೆ(Operation Sindoor) ಬಲಿಯಾಗಿದ್ದಾರೆ.. ಭಾರತದ ಮಿಡ್‌ನೈಟ್‌ ಏರ್‌ಸ್ಟ್ರೈಕ್‌ಗೆ (Midnight Airstrike) 100ಕ್ಕೂ ಹೆಚ್ಚು ಉಗ್ರರು ಉಡೀಸ್‌ ಆಗಿದ್ದಾರೆ..

2001ರ ಸಂಸತ್‌ ಮೇಲಿನ ದಾಳಿ, 2008ರ ಮುಂಬೈ ಟೆರರ್‌ ಅಟ್ಯಾಕ್‌, 2019ರ ಪುಲ್ವಾಮಾ ದಾಳಿ ಹೀಗೆ ಹಲವಾರು ಉಗ್ರರ ದಾಳಿಯಲ್ಲಿ ಭಾಗಿಯಾಗಿದ್ದ ಹೇಡಿ ಭಯೋತ್ಪಾದಕರೆಲ್ಲಾ ಇದೇ ಆಪರೇಷನ್‌ ಸಿಂಧೂರ್‌ಗೆ ಆಲೌಟ್‌ ಆಗಿದ್ದಾರೆ.. ಮೋದಿ ಸರ್ಕಾರ (Modi Government) ಒಂದೇ ಏಟಿನಿಂದ ಹಲವಾರು ವರ್ಷಗಳ ಪ್ರತೀಕಾರ ತೀರಿಸಿಕೊಂಡಿದೆ..

ಹಾಗಾದ್ರೆ ಈ ಆಪರೇಷನ್‌ ಸಿಂಧೂರ್‌ಗೆ ಬಲಿಯಾದ ಉಗ್ರರು ಯಾರು ಅನ್ನೋದು ನೋಡೋದಾದ್ರೆ..

  1. LET ಉಗ್ರ ಹಫೀಜ್‌ ಅಬ್ದುಲ್‌ ಮಲೀಕ್‌
  2. LET ಕಮಾಂಡರ್‌ ಮುದಾಸಿರ್‌
  3. ಉಗ್ರ ಬದ್ರುದಿನ್‌
  4. ಜೈಶ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ

LET ಉಗ್ರ ಹಫೀಜ್‌ ಅಬ್ದುಲ್‌ ಮಲೀಕ್, LET ಕಮಾಂಡರ್‌ ಮುದಾಸಿರ್‌, ಉಗ್ರ ಬದ್ರುದಿನ್‌, ಜೈಶ್ ಎ-ಮೊಹಮ್ಮದ್‌ ಮುಖ್ಯಸ್ಥ ಮಸೂದ್ ಅಜರ್ ಕುಟುಂಬದ 10 ಜನರು ಸೇರಿದಂತೆ 100ಕ್ಕೂ ಹೆಚ್ಚು ಉಗ್ರರರನ್ನ ಹೊಡೆದುರುಳಿಸಲಾಗಿದೆ..

Also Read : ಭಾರತದ ಹೊಡೆತಕ್ಕೆ ಪಾಕ್‌ ವಿಲ ವಿಲ!

ಇದು ಉಗ್ರರ ವಿರುದ್ಧ ಕೇಂದ್ರ ಸರ್ಕಾರ(Central Government) ಇಟ್ಟಿದ್ದ zero tollerance ಹೆಜ್ಜೆಗೆ ಸಿಕ್ಕ ಅತಿದೊಡ್ಡ ಜಯವಾಗಿದೆ. ಹತರಾಗಿರುವ ಉಗ್ರರ ಮಾಹಿತಿಗಳು ಒಂದೊಂದೇ ಹೊರಬರ್ತಿದ್ದು, ಮತ್ತಷ್ಟು ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ..

Share.
Leave A Reply