ಜಮ್ಮು ಕಾಶ್ಮೀರದ ಪಹಲ್ಗಾಮ್ (Pahalgam Terror Attack) ದಾಳಿ ಆದಾಗಿನಿಂದಲೂ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ. ಭಯೋತ್ಪಾದಕರನ್ನು ಸದೆಬಡಿಯಲು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುತ್ತಿರುವ ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಸರ್ಕಾರ ತುದಿಗಾಲಲ್ಲಿ ನಿಂತಿದ್ದು, ಈಗ ಆಪರೇಷನ್ ಸಿಂಧೂರ್ (Operation Sindoor ) ಮೂಲಕ ಪಾಪಿ ಪಾಕಿಸ್ತಾನಕ್ಕೆ ಸಖತ್ ತಿರುಗೇಟು ನೀಡಿದೆ. ನಮ್ಮ ಹೆಮ್ಮೆಯ ಭಾರತೀಯ ಸೇನೆ ಇಂದು ಬೆಳಗಿನ ಜಾವ ನಡೆಸಿದ ರಣಾರ್ಭಟದ ದಾಳಿಗೆ ಪಾಪಿಗಳ ಸಂಹಾರ ಆಗಿದೆ.

ಇನ್ನು ಭಾರತ ನಡೆಸಿದ ದಾಳಿಗೆ ಪಾಪಿ ಪಾಕಿಗಳು ವಿಲ ವಿಲ ಅಂತ ಹೊದಡಿದ್ದು, ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತೀಯ ಸೇನೆ Operation Sindoor ಕಾರ್ಯಾಚರಣೆ ನಡೆಸಿತು. ಈ ದಾಳಿಯ ಮೊದಲ ಫೋಟೋಗಳು ಈಗ ಹೊರಬಂದಿವೆ.
ಈ ಫೋಟೋಗಳು ಮುಜಫರಾಬಾದ್ನಲ್ಲಿ ಕ್ಷಿಪಣಿ ದಾಳಿಯಿಂದ ಕಟ್ಟಡಗಳಿಗೆ ಉಂಟಾದ ಭಾರೀ ಹಾನಿಯನ್ನು ತೋರಿಸುತ್ತವೆ. ಹಾಗೇ ಭಾರತೀಯ ಸೇನೆಯು ಮುಜಫರಾಬಾದ್, ಕೋಟ್ಲಿ ಮತ್ತು ಮುರಿಡ್ಕೆಯ ಭಯೋತ್ಪಾದಕ ಶಿಬಿರಗಳ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ಈ ದಾಳಿಯಲ್ಲಿ 70 ಭಯೋತ್ಪಾದಕರು ಮಟಾಶ್ ಆಗಿದ್ದು, 55 ಜನರು ಗಾಯಗೊಂಡಿದ್ದಾರೆ.
ಇನ್ನು ಉಗ್ರರ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದೇವೆ. ಯಾವುದೇ ಯಾವುದೇ ಪಾಕಿಸ್ತಾನಿ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿಲ್ಲ ಎಂದು ಭಾರತೀಯ ಸೇನೆ ತಿಳಿಸಿದೆ. ಗುರಿ ಮಾಡಲಾದ 9 ಸ್ಥಳಗಳಲ್ಲಿ ಬಹಾವಲ್ಪುರದಲ್ಲಿರುವ ಜೈಶ್-ಎ-ಮೊಹಮ್ಮದ್ ಪ್ರಧಾನ ಕಚೇರಿ ಮತ್ತು ಮುರಿಡ್ಕೆಯಲ್ಲಿರುವ ಲಷ್ಕರ್-ಎ-ತೈಬಾ ಸೇರಿವೆ ಎಂದು ಮೂಲಗಳು ತಿಳಿಸಿವೆ.
Also Read : Justice is Served ಸೇನೆಯ ಟ್ವೀಟ್ನಲ್ಲೇನಿದೆ?
ಆದೇನೆ ಆಗಲಿ… ಪಹಲ್ಗಾಮ್ ದಾಳಿ ಪ್ರತಿಕಾರಕ್ಕೆ ಭಾರತ Operation Sindoor ಮೂಲಕ ಪಾಪಿ ಪಾಕಿಸ್ತಾನಕ್ಕೆ ಸಖತ್ ಪಂಚ್ ನೀಡಿದ್ದು, ಕದನದಲ್ಲಿ ಭಾರತವನ್ನ ಕೆಣಕಿ ಉಳಿದವರಿಲ್ಲ. ಯುದ್ಧಕ್ಕೆ ಅಂತ ನಿಂತರೆ ಸೈನ್ಯ ಸೈನಿಕರನ್ನು ಲೆಕ್ಕ ಹಾಕದೆ ಪಾಪಿಗಳ ಸಂಹಾರ ಮಾಡೋದು ಗ್ಯಾರಂಟಿ, ಅನ್ನೋದನ್ನ ಭಾರತದ ಸೇನೆ ಮತ್ತೆ ಸಾಬೀತು ಮಾಡಿದೆ.
