ಆಪರೇಷನ್‌ ಸಿಂಧೂರ್‌ ಮೂಲಕ ಪಾಕಿಸ್ತಾನದ ಉಗ್ರರನ್ನು ಭಾರತೀಯ ಸೇನೆ ಸದೆಬಡಿದ ಒಂದು ದಿನದ ನಂತರ ಪಾಕಿಸ್ತಾನ ಭಾರತದ ಜಮ್ಮುವಿನ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನ 8 ಕ್ಷಿಪಣಿಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಲು ಯತ್ನಿಸಿತ್ತು. ಆದ್ರೆ ತಕ್ಷಣ ಸ್ಪಂದಿಸಿದ ಭಾರತೀಯ ಸೇನೆ ಪಾಕಿಸ್ತಾನದ ಎಲ್ಲಾ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ. ಈ ಬೆನ್ನಲ್ಲೇ ಭಾರತ ಕೂಡಾ ಪಾಕಿಸ್ತಾನದ ಲಾಹೋರ್, ಇಸ್ಲಾಮಾಬಾದ್‌ ಮೇಲೆ ದಾಳಿ ನಡೆಸಿದ್ದು, ಪಾಕ್ ಪ್ರಧಾನಿ ಶೆಹಬಾಜ್ ಷರೀಪ್‌ ಮೇಲೆ ದಾಳಿ ನಡೆಸಿದೆ. ಇನ್ನು ಭಾರತದ ಪ್ರತ್ಯುತ್ತರಕ್ಕೆ ಪಾಕ್‌ ತತ್ತರಿಸಿ ಹೋಗಿದೆ. ಅಲ್ಲದೇ ಭಾರತ ಕೂಡಾ ಎಚ್ಚರಿಕೆಯಿಂದ ದೇಶದ 24 ಏರ್‌ಪೋರ್ಟ್‌ಗಳನ್ನು ಬಂದ್ ಮಾಡಲು ಸೂಚನೆ ನೀಡಿದೆ.

Also Read: Operation Sindoor : INS ವಿಕ್ರಾಂತ ಶಕ್ತಿ ಕಂಡು ಬೆದರಿದ ಪಾಕಿಸ್ತಾನ!

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜನರನ್ನು ಕೊಂದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ, ಭಾರತವು ಮೇ 7, 2025ರಂದು ಪಾಕಿಸ್ತಾನ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ 9 ಭಯೋತ್ಪಾದಕ ಶಿಬಿರಗಳ ಮೇಲೆ ನಿಖರವಾದ ಕ್ಷಿಪಣಿ ದಾಳಿಗಳನ್ನು ನಡೆಸಿತು. ಈ ಬೆನ್ನಲ್ಲೇ ಭಾರತ 24 ಏರ್‌ಪೋರ್ಟ್‌‌ಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.

ಮುಚ್ಚಲ್ಪಟ್ಟ ವಿಮಾನ ನಿಲ್ದಾಣಗಳಲ್ಲಿ ಶ್ರೀನಗರ, ಲೇಹ್‌, ಜಮ್ಮು, ಅಮೃತಸರ, ಪಠಾಣ್‌ಕೋಟ್‌, ಚಂಡೀಗಢ, ಲುಧಿಯಾನ, ಪಾಟಿಯಾಲಾ, ಬಠಿಂಡಾ, ಬಿಕಾನೇರ್‌, ಜೋಧ್‌ಪುರ್‌, ಜೈಸಲ್ಮೇರ್‌, ರಾಜ್‌ಕೋಟ್‌, ಪೋರ್‌ಬಂದರ್‌, ಗ್ವಾಲಿಯರ್‌, ಶಿಮ್ಲಾ, ಧರ್ಮಶಾಲಾ, ಮತ್ತು ಜಾಮ್‌ನಗರ ಸೇರಿವೆ. ರಾವಲ್ಪಿಂಡಿಯ ಪಾಕ್‌ ಸೇನೆಯ ಹೆಡ್‌ಕ್ವಾಟರ್ಸ್ ಮೇಲೆ ಭಾರತ ದಾಳಿ ಮಾಡಿದೆ. ಕಾಲು ಕೆರೆದುಕೊಂಡು ಬಂದ ಪಾಕ್‌‌ಗೆ ಕಾಲು ಮುರಿಯುವಂತಹ ಕೆಲಸವನ್ನು ಮಾಡೋದಕ್ಕೆ ಭಾರತ ಸೇನಾ ಪಡೆ ಸಜ್ಜಾಗಿದೆ.

Share.
Leave A Reply