ಪಾಪಿ ಪಾಕಿಸ್ತಾನ(Pakistan) ಹಿಂದೆಂದೂ ಕಂಡು ಕೇಳರಿಯದ ಹೀನಾಯ ಸ್ಥಿತಿಗೆ ತಲುಪಿಬಿಟ್ಟಿದೆ. ಉಗ್ರರರನ್ನು ಪೋಷಿಸಿದ ಪಾಪದಿಂದಾಗಿ ಪಾಪಿಸ್ತಾನದ ಬುಡಕ್ಕೆ ಬೆಂಕಿ ಬಿದ್ದಿದೆ. ಈಗಾಗಲೇ ಆ ದೇಶವನ್ನು ರಾಜತಾಂತ್ರಿಕವಾಗಿ ಮುಗಿಸಿರುವ ಭಾರತ ಆಪರೇಷನ್ ಸಿಂದೂರ್ (Operation Sindoor) ನಡೆಸಿ ಮಣ್ಣುಮುಕ್ಕಿಸಿದೆ. ಉಗ್ರರನ್ನು ಹೊಡೆದು ಪಾಕಿಸ್ತಾನದ ಬಲಗೈಯನ್ನೇ ಕತ್ತರಿಸಿದೆ. ಹೀಗಿರುವಾಗಲೇ ಮತ್ತೊಂದು ಕಡೆ ಬಲೂಚಿಸ್ತಾನ(Balochistan) ಕೂಡ ಪಾಕ್‌ಗೆ ತಕ್ಕ ಪಾಠ ಕಲಿಸಿದೆ. ಪಾಕ್ ಸೇನೆಯನ್ನ ಹೊಡೆದುರುಳಿಸಿ, ಪಾಕಿಸ್ತಾನದಿಂದ ಬಿಡುಗಡೆ ಹೊಂದುವ ಕಾರ್ಯಕ್ಕೆ ಮೊದಲ ಹೆಜ್ಜೆ ಇಟ್ಟಿದೆ. ಇದ್ರಿಂದಾಗಿ ಪಾಕ್‌ನ ಉಸಿರುಗಟ್ಟಿದ್ದು ವಿಲವಿಲ ಒದ್ದಾಡ್ತಿದೆ.
ಜಗತ್ತಿನಾದ್ಯಂತ ಆಪರೇಷನ್ ಸಿಂದೂರ್ (Operation Sindoor)ಸಖತ್ ಸೌಂಡ್ ಮಾಡಿದೆ. ಒಂದೆರಡು ದೇಶಗಳು ಬಿಟ್ರೆ ಇಡೀ ವಿಶ್ವವೇ ಭಾರತದ ಕಾರ್ಯವೈಖರಿಯನ್ನು ಕೊಂಡಾಡಿದೆ. ಹೀಗಿರುವಾಗಲೇ ತೆರೆಮರೆಯಲ್ಲಿ ಬಲೂಚಿಸ್ತಾನವೂ ಪಾಕ್‌ಗೆ ಬಿಸಿ ಮುಟ್ಟಿಸಿದೆ. ಪಾಕ್‌ನಿಂದ ಮುಕ್ತಿ ಪಡೆಯುವ ತನ್ನ ಬಹುಕಾಲದ ಕನಸ್ಸಿಗೆ ಸರ್ಕಸ್ ಶುರು ಮಾಡಿದೆ. ಈಗಾಗಲೇ ಭಾರತಕ್ಕೆ ಕೀಟಲೆ ಕೊಟ್ಟು ಮುಗ್ಗರಿಸಿರುವ ಪಾಕಿಸ್ತಾನ ಅತ್ತ ಬಲೂಚಿಸ್ತಾನ ಉಗ್ರರ ಮೇಲೆ ದಾಳಿ ಮಾಡಿದ್ದ ಪರಿಣಾಮವಾಗಿ ಇದೀಗ ತನ್ನ 14 ಸೈನಿಕರನ್ನ ಕಳೆದುಕೊಂಡಿದೆ. ಪಾಕಿಸ್ತಾನದ ಲಾಹೋರ್, ಕರಾಚಿಯಲ್ಲಿ ಡೆಡ್ಲಿ ದಾಳಿಯಿಂದಾಗಿ ಭಾರಿ ನಷ್ಟವಾಗಿದೆ.
ಬಲೂಚಿಸ್ತಾನ ಅನ್ನೋದು ಪಾಕಿಸ್ತಾನದ ಒಂದು ಪ್ರಮುಖ ಪ್ರಾಂತ್ಯ. ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಪಾಕಿಸ್ತಾನದಿಂದ ಮುಕ್ತಿ ಪಡೆದು ಸ್ವತಂತ್ರ್ಯವಾಗುವ ಕನಸು ಬಲೂಚಿಸ್ತಾನಕ್ಕೆ ಬಹುಕಾಲದಿಂದ ಇದೆ ಎನ್ನಲಾಗಿದೆ. ಜೊತೆಗೆ ಬಲೂಚಿಸ್ತಾನದ ನೈಸರ್ಗಿಕ ಸಂಪನ್ಮೂಲಗಳ ಮೇಲೆ ಪಾಕಿಸ್ತಾನ ಅವಲಂಭಿಸಿರೋದು ಬಲೂಚಿಸ್ತಾನದದಲ್ಲಿ ಜನಸಂಖ್ಯೆ ಕಡಿಮೆ ಇದ್ರೂ ಸಹಾ ಪಾಕಿಸ್ತಾನಕ್ಕೆ ಇದ್ರಿಂದ ಸಾಕಷ್ಟು ಲಾಭಗಳಿವೆ. ಆದ್ರೆ ಬಲೂಚಿಸ್ತಾನ ಮಾತ್ರ ಪಾಕಿಸ್ತಾನ ರಾಜಕೀಯವಾಗಿ, ಪ್ರಾದೇಶಿಕವಾಗಿ ಹಾಗೂ ಅಭಿವೃದ್ಧಿ ವಿಚಾರದಲ್ಲಿ ತನ್ನನ್ನು ಕಡೆಗಣಿಸುತ್ತಿದೆ ಹಾಗಾಗಿ ಅದ್ರಿಂದ ಮುಕ್ತಿ ಬೇಕು ಅಂತ ಹಾತೊರೆಯುತ್ತಿದೆ. ಇದೇ ಹೊತ್ತಲ್ಲಿ ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡಿರೋದು ಬಲೂಚಿಸ್ತಾನಕ್ಕೆ ಹೊಸ ಅವಕಾಶವನ್ನು ಸೃಷ್ಟಿ ಮಾಡಿದೆ.
Also Read : ಕಂದಹಾರ್ ಹೈಜಾಕ್ ಮಾಸ್ಟರ್ ಮೈಂಡ್ ಮಟಾಶ್!
ಪಾಕಿಸ್ತಾನವನ್ನು ಸ್ವತಂತ್ರ್ಯವಾಗಿ ಎದುರಿಸೋದು ಬಲೂಚಿಸ್ತಾನ ಲಿಬರೇಶನ್ ಆರ್ಮಿಗೆ ಕಷ್ಟಸಾಧ್ಯ. ಆದ್ರೆ ಇತ್ತ ಭಾರತ ಆಪರೇಷನ್ ಸಿಂದೂರ್ (Operation Sindoor)ನಡೆಸಿರೋದ್ರಿಂದ ಪಾಕಿಸ್ತಾನ ಫುಲ್ ವೀಕ್ ಆಗಿದೆ. ಇದೇ ಅವಕಾಶವನ್ನು ಬಳಸಿಕೊಂಡಿರುವ ಬಲೂಚಿಸ್ತಾನ ಲಿಬರೇಶನ್ ಆರ್ಮಿ ಕಚ್ಚಿ ಜಿಲ್ಲೆಯಲ್ಲಿ ಪಾಕಿಸ್ತಾನ ಸೇನಾ ಸೈನಿಕರ ವಾಹನದ ಮೇಲೆ ಐಇಡಿ ದಾಳಿ ನಡೆಸಿ 14 ಪಾಕಿಸ್ತಾನ ಸೈನಿಕರನ್ನು ಕೊಂದಿದೆ.. ಜೊತೆಗೆ ಲಾಹೋರ್, ಕರಾಚಿಯಲ್ಲೂ ಡ್ರೋನ್ ದಾಳಿ ನಡೆಸಿ ಪಾಕಿಸ್ತಾನಕ್ಕೆ ತಿರುಗೇಟು ಕೊಟ್ಟಿದೆ. ಹೀಗಿರುವಾಗಲೇ ಬಲೂಚಿಸ್ತಾನ ಪಾಕಿಸ್ತಾನದ ವಿರುದ್ಧ ತನ್ನ ಪರಾಕ್ರಮ ತೋರಿಸಿ ಮುಕ್ತಿ ಪಡೆಯಲಿದೆ ಅನ್ನೋ ಅಭಿಪ್ರಾಯಗಳು ಎಲ್ಲೆಡೆ ಹರಿದಾಡ್ತಿವೆ..
