2025ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟವನ್ನು ರಾಜಸ್ಥಾನದ ಮಣಿಕಾ ವಿಶ್ವಕರ್ಮ ಅಲಂಕರಿಸಿದ್ದಾರೆ. ಈ ಮೂಲಕ ಮುಂದಿನ ನವೆಂಬರ್ 21ರಂದು ಥೈಲ್ಯಾಂಡ್‌ನಲ್ಲಿ ನಡೆಯಲಿರುವ 74 ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಭಾರತ ದೇಶವನ್ನು ಪ್ರತಿನಿಧಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ತಮ್ಮ ಪಯಣದ ಅನುಭವ ಹಂಚಿಕೊಂಡ ಮಣಿಕಾ ಈ ಗೆಲುವನ್ನು ರಾಜಸ್ಥಾನ ಮತ್ತು ರಾಷ್ಟ್ರಕ್ಕೆ ಹೆಮ್ಮೆಯ ಕ್ಷಣ ಎಂದು ಬಣ್ಣಿಸಿದ್ದಾರೆ.

ಈ ಪ್ರತಿಷ್ಠಿತ ಸ್ಪರ್ಧೆಯಲ್ಲಿ ಬಾಲಿವುಡ್ ನಟಿ ಮತ್ತು ಮಾಜಿ ಮಿಸ್ ಯೂನಿವರ್ಸ್ ಇಂಡಿಯಾ ಊರ್ವಶಿ ರೌಟೇಲಾ ಕೂಡ ತೀರ್ಪುಗಾರರ ಸದಸ್ಯೆಯಾಗಿ ಹಾಜರಿದ್ದರು. ಸ್ಪರ್ಧೆ ತುಂಬಾ ಕಠಿಣವಾಗಿತ್ತು, ವಿಜೇತರು ನಮ್ಮೊಂದಿಗಿದ್ದಾರೆ. ಮಣಿಕಾ ಅವರು ಖಂಡಿತವಾಗಿಯೂ ಮಿಸ್ ಯೂನಿವರ್ಸ್‌ನಲ್ಲಿ ನಮ್ಮನ್ನು ಹೆಮ್ಮೆಪಡುವಂತೆ ಮಾಡುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದೇಶದಾದ್ಯಂತ 48 ಸ್ಪರ್ಧಿಗಳು ಗ್ರ್ಯಾಂಡ್ ಫಿನಾಲೆಯಲ್ಲಿ ಪ್ರತಿಷ್ಠಿತ ಕಿರೀಟಕ್ಕಾಗಿ ಸ್ಪರ್ಧಿಸಿದ್ದರು. ರಾಜಸ್ಥಾನದ ಜೈಪುರದಲ್ಲಿ ನಡೆದ ಈ ಭವ್ಯ ಸಮಾರಂಭದಲ್ಲಿ ಮಣಿಕಾ ವಿಶ್ವಕರ್ಮಾ ಕಿರೀಟವನ್ನ ಮುಡಿಗೇರಿಸಿಕೊಂಡಿದ್ದು, 2024ರ ಮಿಸ್ ಯೂನಿವರ್ಸ್ ಇಂಡಿಯಾ ರಿಯಾ ಸಿಂಘಾ ಕಿರೀಟಧಾರಣೆ ಮಾಡಿದ್ರು.

Read Also : ಅಜಯ್‌ ರಾವ್‌ ಬದುಕಲ್ಲಿ ‘ಯುದ್ಧಕಾಂಡ’ : ಕೃಷ್ಣನ್‌ ಕೋರ್ಟ್‌ ಕಹಾನಿ..!

Share.
Leave A Reply