ಬೆಂಗಳೂರು : ರಾಜ್ಯದಲ್ಲಿ ಸಿಎಂ ಕುರ್ಚಿಯ ಬದಲಾವಣೆಯ ಕೂಗು ಭಾರೀ ಸದ್ದು ಮಾಡುತ್ತಿದೆ. ಕ್ಷಣಕ್ಷಣಕ್ಕೊಂದು ಮಾಹಿತಿ ಹೊರ ಬರುತ್ತಿದ್ದು, ಜನರು ಕುತೂಹಲದಿಂದ ಏನಾಗಬಹುದು ಎಂದು ಕಾಯುತ್ತಿದ್ದಾರೆ. ತಾಳಿಗರೆಗಳಿಂದ ಭವಿಷ್ಯ ನುಡಿಯುತ್ತಿರುವ ಕೋಡಿಮಠದ ಶ್ರೀ ಈಗ ಮತ್ತೊಂದು ಭಯಾನಕ ಭವಿಷ್ಯ ನುಡಿದ್ದಾರೆ.

ಸಂಕ್ರಾಂತಿಯ ವೇಳೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗುತ್ತದೆ ಎಂದು ಚರ್ಚೆಯಾಗುತ್ತಿರುವ ಬೆನ್ನಲ್ಲೇ ಈ ಭವಿಷ್ಯ ಹಲವು ಕುತೂಹಲಕ್ಕೆ ಕಾರಣವಾಗುತ್ತಿದೆ. ಸಂಗಮೇಶನು ಅರಿವನೆ, ಆದರೆ ಒಳಹಡ್ಡ ಬಂದಿದೆ, ಶಿವನ ಮುಡಿಯ ಎರಡು ದುಂಡು ಮಲ್ಲಿಗೆಗಳು ಶಿವನ ಬಲಪಾದ ಸೇರಿಯಾವು, ಮುಂದೆ ಸುಖ್ಯಾಂತ್ಯವಾಗಲಿದೆ. ಸಂಕ್ರಾಂತಿ, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬದಲಾವಣೆಯಾಗಲಿದೆ. ಸುಖಾಂತ್ಯ ಯಾರಿಗಾದರೂ ಆಗಬಹುದು’. ಸಂಕ್ರಾಂತಿಯ ಶುಭಪರ್ವದಲ್ಲಿ ಕರ್ನಾಟಕ ಕಾಂಗ್ರೆಸ್ಸಿನ ರಾಜಕೀಯ ಸುಖಾಂತ್ಯ ಕಾಣಲಿದೆ ಎಂದು ಶ್ರೀ ಹೇಳಿದ್ದಾರೆ. ಇದ ಹಲವಾರು ಚರ್ಚೆಗಳಿಗೆ ಇಂಬು ನೀಡಿದೆ.

ಕಾಂಗ್ರೆಸ್ಸಿನ ಅಧಿಕಾರ ಹಸ್ತಾಂತರದ ಸುಖಾಂತ್ಯ, ಸಂಕ್ರಾಂತಿ, ರಾಜ್ಯ ಬಜೆಟ್ ನಂತರ ಎಂದು ಅರಸೀಕೆರೆ ಹಾರನಹಳ್ಳಿ ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಹೇಳಿದ್ದಾರೆ. ಆದರೆ, ಯಾರ ಪರವಾಗಿ ಸುಖಾಂತ್ಯ ಕಾಣಲಿದೆ ಎಂಬುವುದನ್ನು ಮಾತ್ರ ಹೇಳಿಲ್ಲ. ಹೀಗಾಗಿ ಈ ಭವಿಷ್ಯ ಬಾರೀ ಚರ್ಚೆಯ ವಸ್ತುವಾಗಿದೆ.

ಯುಗಾದಿಯ ನಂತರ ನಾಡಿನ ಆಗುಹೋಗುಗಳು, ಆರೋಗ್ಯ, ಚಿಂತನೆ, ಮಳೆಬೆಳೆ, ಜನಜೀವನ ಮುಂತಾದವುಗಳಾಗಿರುತ್ತದೆ. ಸಂಕ್ರಾಂತಿಯ ನಂತರ ಬರುವ ಭವಿಷ್ಯ, ವ್ಯಾಪಾರಸ್ಥರಿಗೆ, ರಾಜರು ದೊರೆಗಳಿಗೆ ಬರುತ್ತದೆ. ಹೀಗಾಗಿ ಈ ರಾಜಕೀಯ ಎನ್ನುವುದು ಸಂಕ್ರಾಂತಿಯ ನಂತರ ನಿರ್ಧಾರವಾಗುತ್ತದೆ ಎಂದಿದ್ದಾರೆ.

ಹಾಲು ಕೆಟ್ಟರೂ ಹಾಲುಮತ ಕೆಡುವುದಿಲ್ಲ, ಆ ಸಮುದಾಯದ ಕೊಡುಗೆ ಈ ಸಮಾಜಕ್ಕೆ ಬಹಳಷ್ಟಿದೆ. ನಾಡಿನ ಈಗಿನ ದೊರೆಗಳು ಅವರಾಗಿಯೇ ಬಿಡಬೇಕೇ ಹೊರತು, ಬಲವಂತದಿಂದ ಅವರನ್ನು ಇಳಿಸುವುದು ಅಸಾಧ್ಯ ಎಂದು ಈ ಹಿಂದೆ ಶ್ರೀಗಳು ಹೇಳಿದ್ದು, ಸಿದ್ದರಾಮಯ್ಯ ಅವರ ಕುರ್ಚಿ ಅಲಗಾಡುವುದಿಲ್ಲ ಎಂಬ ಸಂದೇಶವನ್ನೂ ನೀಡಿದಂತಿದೆ.

Share.
Leave A Reply