ಕಿಚ್ಚ ಸುದೀಪ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಕಿರುತೆರೆಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಭರ್ಜರಿ ಸಕ್ಸಸ್ ಕಂಡಿದೆ. ಕಿಚ್ಚ ಸುದೀಪ್ ನಿರೂಪಣೆಯಲ್ಲಿ 11 ಸೀಸನ್ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮುಂದಿನ ಸೀಸನ್ ಯಾವಾಗ ಎಂದು ವೀಕ್ಷಕರು ಕಾಯುತ್ತಿದ್ದಾರೆ. ಆದರೆ ಶೋ ನಿರೂಪಣೆ ಮಾಡೋದು ಯಾರು ಎನ್ನುವ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಸೀಸನ್ 11 ಮುಕ್ತಾಯಕ್ಕೂ ಮುನ್ನವೇ ಸೀಸನ್ 12 ನಾನು ನಿರೂಪಣೆ ಮಾಡಲ್ಲ ಅಂತಾ ಸುದೀಪ್ ಹೇಳಿದ್ದರು. ಈ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದ್ದರು. ಕಲರ್ಸ್ ಕನ್ನಡ ಜೊತೆಗಿನ ಕೆಲ ಭಿನ್ನಾಭಿಪ್ರಾಯಗಳಿಂದ ಕಿಚ್ಚ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿತ್ತು. ಬಳಿಕ ಮುಂದಿನ ಸೀಸನ್ ಹೋಸ್ಟ್ ಯಾರು ಮಾಡ್ತಾರೆ ಎನ್ನುವ ಚರ್ಚೆ ಶುರುವಾಗಿತ್ತು.
ಆದರೆ ಈಗ ಈ ಎಲ್ಲಾ ಗೊಂದಲಗಳಿಗೆ ಸ್ಪಷ್ಟನೆ ಸಿಕ್ಕಿದೆ. ಬಿಗ್‌ಬಾಸ್ ಅಡ್ಡಕ್ಕೆ ಕಿಚ್ಚ ಮತ್ತೆ ಬಂದ್ದಿದ್ದಾರೆ. ಬಿಗ್‌ಬಾಸ್ ಸೀಸನ್ 12ಕ್ಕೂ ಕಿಚ್ಚ ಸುದೀಪ್ ಅವರೇ ಇರುತ್ತಾರೆ. ಅವರೇ ನಿರೂಪಣೆ ಮಾಡ್ತಾರೆ.. ಇವತ್ತು ನಡೆದ ಬಿಗ್‌ಬಾಸ್ ಸುದ್ದಿಗೋಷ್ಟಿಯಲ್ಲಿ ಕಿಚ್ಚಸುದೀಪ್ ಬಿಗ್‌ಬಾಸ್ ಸೀಸನ್ 12ರ ನಿರೂಪಣೆ ಮಾಡಲಿದ್ದಾರೆ ಅಂತಾ ಬಿಗ್‌ಬಾಸ್ ಸಂಯೋಜಕರು ಹಾಗೂ ಕಲರ್ಸ್ ತಂಡ ಸುದ್ದಿಗೋಷ್ಠಿಯಲ್ಲಿ ಅಧಿಕೃತವಾಗಿ ಈ ನಿರ್ಧಾರವನ್ನು ಪ್ರಕಟಿಸಿದೆ. ಅಷ್ಟೇಅಲ್ಲಾ ಕಿಚ್ಚ ಸುದೀಪ್ ಮತ್ತೆ ಬಿಗ್‌ಬಾಸ್ ನಿರೂಪಣೆ ಮಾಡೋದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ಕಿಚ್ಚನ ಫ್ಯಾನ್ಸ್ ಫುಲ್ ಖುಷ್ ಆಗಿದ್ದು, ಈ ಬಾರಿ ದೊಡ್ಮನೆ ಬಿಸಿ ಹೇಗಿರುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.
