Skin: ರೋಸ್‌ ವಾಟರ್‌ಅನ್ನ ನೀವು ಫೇಸ್‌ಪ್ಯಾಕ್‌ಗಳಲ್ಲಿ ಸ್ಕಿನ್‌ಕೇರ್‌ ರೂಟಿನ್‌ಗಳಲ್ಲಿ ಬಳಸಿರ್ತೀರಾ. ಯಾವತ್ತಾದ್ರೂ ರೋಸ್‌ ಜೆಲ್‌ಅನ್ನ ಯೂಸ್‌ ಮಾಡಿದ್ದೀರಾ? ಇದೂ ಕೂಡ ರೋಸ್‌ ವಾಟರ್‌ನಷ್ಟೇ ಎಫೆಕ್ಟಿವ್ ಆಗಿ ಕೆಲ್ಸ ಮಾಡುತ್ತೆ. ಇದನ್ನ ನೀವೇ ಮನೇಲಿ ತಯಾರಿಸ್ಬಹುದು.

ಒಂದು ಗುಲಾಬಿ ದಳದ ಎಸಳುಗಳನ್ನ ಬಿಡಿಸಿ ಸ್ವಲ್ಪ ನೀರು ಹಾಕಿ ಕುದಿಸಿ. ಆರಿದ ನಂತ್ರ ಶೋಧಿಸಿಕೊಳ್ಳಿ. ಎರಡು ಚಮಚ ಗುಲಾಬಿ ದಳ ಕುದಿಸಿದ ನೀರಿಗೆ ಎರಡು ಚಮಚ ಅಲೋವೆರಾ ಜೆಲ್‌, ಒಂದು ವಿಟಮಿನ್‌ ಇ ಕ್ಯಾಪ್ಸೂಲ್‌ ಹಾಕಿ ಚನ್ನಾಗಿ ಮಿಕ್ಸ್‌ ಮಾಡಿದ್ರೆ ರೋಸ್‌ ಜೆಲ್‌ ರೆಡಿಯಾಗುತ್ತೆ. ಇದನ್ನ ರಾತ್ರಿ ಮಲಗೋವಾಗ ಮುಖ, ಕುತ್ತಿಗೆ ಕೈಕಾಲುಗಳಿಗೆ ಅಪ್ಲೈ ಮಾಡ್ಬಹುದು.

ಈ ರೋಸ್‌ ಜೆಲ್‌ಅನ್ನ ಫ್ರಿಜ್‌ನಲ್ಲಿ ಒಂದು ವಾರದವರೆಗೂ ಸ್ಟೋರ್‌ ಮಾಡ್ಬಹುದು. ಅಂದಹಾಗೆ ಗುಲಾಬಿ ದಳಗಳನ್ನ ಕುದಿಸುವ ಮೊದ್ಲು ಚನ್ನಾಗಿ ನೀರಲ್ಲಿ ತೊಳ್ದು ಕ್ಲೀನ್‌ ಮಾಡ್ಕೊಳಿ.

Also Read: ಬ್ಯಾಂಕ್‌ನಲ್ಲಿ ಕೆಲಸ ಹುಡುಕುತ್ತೀದ್ದೀರಾ.. ಹಾಗಾದ್ರೆ ಇಲ್ಲಿದೆ ನಿಮಗೆ Goodnews..!

ಇನ್ನುಈ ಜೆಲ್‌ ಹಚ್ಚೋದ್ರಿಂದ ಏನ್‌ ಉಪಯೋಗ ಅಂದ್ರೆ, ನಿಮ್ಮ ಕೈ ಕಾಲುಗಳ ಚರ್ಮ ತುಂಬಾ ಒರಟಾಗಿದ್ರೆ, ಈ ಜೆಲ್‌ಅನ್ನ ರೆಗ್ಯುಲರ್‌ ಆಗಿ ಅಪ್ಲೈ ಮಾಡೋದ್ರಿಂದ ಸ್ಕಿನ್‌ ತುಂಬಾ ಸಾಫ್ಟ್‌ ಆಗುತ್ತೆ. ಅನ್‌ಈವನ್‌ ಸ್ಕಿನ್‌ ಟೋನ್‌, ಪ್ಯಾಚಿ ಸ್ಕಿನ್‌ ಸಮಸ್ಯೆಯಿಂದ ಮುಕ್ತಿ ಸಿಗುತ್ತೆ.

ಹಾಗೆ ಡಿ-ಹೈಡ್ರೇಷನ್‌ನಿಂದಾಗಿ ಸ್ಕಿನ್‌ ಡಲ್‌ ಆಗಿದ್ರೆ, ಒಳ್ಳೆ ಗ್ಲೋ ಕೂಡ ಬರುತ್ತೆ. ಸೋ, ಈ ರೋಸ್‌ ಜೆಲ್‌ಅನ್ನ ಇವತ್ತೇ ಟ್ರೈ ಮಾಡಿ ಕಾಮೆಂಟ್‌ ಮೂಲಕ ತಿಳಿಸಿ.

Share.
Leave A Reply