ಹೈದರಾಬಾದ್: ಐಐಟಿ ಕೊನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 21 ವರ್ಷದ ಎಡ್ವರ್ಡ್ ನೇತನ್ ವರ್ಗೀಸ್ಗೆ (Edward Nathan Varghese) ಗೆ 2.5 ಕೋಟಿ ರೂ. ಸಂಬಳದ ಆಫರ್ ನೀಡಲಾಗಿದೆ ಎಂದು ವರದಿಯಾಗಿದೆ.

ಐಐಟಿ ಹೈದರಾಬಾದ್ನ ಎಡ್ವರ್ಡ್ ಗೆ 2.5 ಕೋಟಿ ರೂ ಸ್ಯಾಲರಿ ಪ್ಯಾಕೇಜ್ ಕೊಡಲಾಗುತ್ತಿದೆ. ನೆದರ್ಲ್ಯಾಂಡ್ಸ್ ಮೂಲದ ಗ್ಲೋಬಲ್ ಟ್ರೇಡಿಂಗ್ ಸಂಸ್ಥೆಯಾದ ಆಪ್ಟಿವರ್ (Optiver) ಆಫರ್ ನೀಡಿದೆ ಎನ್ನಲಾಗಿದೆ. ಎಡ್ವರ್ಡ್ ನೇತನ್ ವರ್ಗೀಸ್ ಹಾಗೂ ಐಐಟಿ ಹೈದರಾಬಾದ್ನ ಮತ್ತೊಬ್ಬ ವಿದ್ಯಾರ್ಥಿ, ಈ ಇಬ್ಬರೂ ಆಪ್ಟೀವರ್ನ ಎರಡು ತಿಂಗಳ ಇಂಟರ್ನ್ಶಿಪ್ಗೆ ಸೇರಿಕೊಂಡಿದ್ದರು. ಎಡ್ವರ್ಡ್ ಅವರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳಲು ಆಪ್ಟೀವರ್ ನಿರ್ಧರಿಸಿದೆ.

21 ವರ್ಷದ ಎಡ್ವರ್ಡ್ಗೆ ಆಪ್ಟೀವರ್ 2.5 ಕೋಟಿ ರೂ ಸಂಬಳ ಆಫರ್ ಮಾಡಿದೆ. 2008ರಲ್ಲಿ ಆರಂಭವಾದ ಐಐಟಿ ಹೈದರಾಬಾದ್ನಲ್ಲಿ ಇಲ್ಲಿಯವರೆಗೆ ಯಾವ ವಿದ್ಯಾರ್ಥಿ ಕೂಡ ಕ್ಯಾಂಪಸ್ ಪ್ಲೇಸ್ಮೆಂಟ್ನಲ್ಲಿ ಇಷ್ಟೊಂದು ಸ್ಯಾಲರಿ ಆಫರ್ ಪಡೆದಿದ್ದಿಲ್ಲ. ಎಡ್ವರ್ಡ್ ನೇತನ್ ವರ್ಗೀಸ್ ಮೂಲತಃ ಹೈದರಾಬಾದ್ನವರೇ. ಅಲ್ಲೇ ಹುಟ್ಟಿ ಬೆಳೆದಿದ್ದು. ಆದರೆ, ಏಳನೇ ತರಗತಿಯಿಂದ 12ನೇ ತರಗತಿಯವರೆಗೂ ಇವರು ಬೆಂಗಳೂರಿನಲ್ಲಿ ಓದಿದ್ದಾರೆ.

Share.
Leave A Reply