ಕನ್ನಡವು ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ವಿವಾದ ಮಾಡಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ.. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆಶಿ (Kamal Haasan-DKS)ಕಮಲ್ ಹಾಸನ್​ ಬಗ್ಗೆ ನನಗೆ ಯಾವ ಸಾಫ್ಟ್ ಕಾರ್ನರ್ ಇಲ್ಲ ಎಂದಿದ್ದಾರೆ. 

ಬೆಂಗಳೂರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಕಮಲ್ ಹಾಸನ್ ಪರ ಸಾಫ್ಟ್ ಕಾರ್ನರ್‌ ಅಲ್ಲ. ಏನಾದರೂ ಹೆಚ್ಚು ಕಮಿಯಾದ್ರೆ ಯಾರು ಹೊಣೆ? ಅನ್ನೋದು ನನ್ನ ಚಿಂತೆ ಅಷ್ಟೇ ಎಂದಿದ್ದಾರೆ. ಹೊಸೂರಿಗೆ ಬೆಂಗಳೂರಿನಿಂದ ನಿತ್ಯ 50 ಸಾವಿರ ಜನ ಹೋಗ್ತಾರೆ, ಅಲ್ಲಿಂದಲೂ ಬರ್ತಾರೆ, ನಮಗೆ ಶಾಂತಿ ಕಾಪಾಡೋದು ಮುಖ್ಯವಾಗಿದೆ ಎಂದ್ರು.

ಅಲ್ಲದೇ ನಾವು ಸೂಜಿ, ಬಿಜೆಪಿ ಅವರು ಕತ್ತರಿ, ಇಲ್ಲಿ ನಾವು ಹೊಲಿಯುವ ಕೆಲಸ ಮಾಡ್ತೀವಿ. ಕಮಲ್​ ಹಾಸನ್​ ವಿಚಾರದಲ್ಲಿ ಬಿಜೆಪಿ ಬೆಂಕಿ ಹಚ್ಚೋ ಕೆಲಸ ಮಾಡ್ತಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್  ಪರೋಕ್ಷವಾಗಿ ಕಿಡಿಕಾರಿದ್ರು.

ಕೇಸ್ ಕೋರ್ಟ್​ನಲ್ಲಿದೆ, ನ್ಯಾಯಾಲಯ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ತನ್ನ ಅಭಿಪ್ರಾಯ ತಿಳಿಸುತ್ತದೆ.. ನಾವೆಲ್ಲ ದ್ರಾವಿಡ ಭಾಗಕ್ಕೆ ಸೇರಿದಂದರು, ನಾವು ಭಾಷೆ ಮಾತಾಡಬೇಕಾದ್ರೆ ಕೆಲವು ತೆಲುಗು, ತಮಿಳು ಅಕ್ಷರಗಳು ಬರ್ತಾವೆ ಎಂದು ಡಿಕೆಶಿ ಹೇಳಿದ್ರು.

ಕಮಲ್ ಹಾಸನ್ ಪರ ಸಾಫ್ಟ್​ ಅಂತ ಅಲ್ಲ, ಭಾಷೆಗೆ, ಜಾತಿಗೆ, ರಾಜ್ಯಗಳಿಗೆ ಜಗಳ ಮಾಡಿಸಲು ಆಗುತ್ತಾ? ಈ ವಿವಾದ ಬೇರೆ ರೂಪಕ್ಕೆ ತಿರುಗಿದ್ರೆ ಯಾರು ಹೊಣೆ..!? ಅನ್ನೋದು ನನ್ನ ಚಿಂತೆ.. ಸಣ್ಣ ಸಣ್ಣ ವಿಚಾರ ಇದು, ಅವರು ತಪ್ಪು ಮಾಡಿದ್ದಾರೆ. ಕಮಲ್​ ಕ್ಷಮೆ ಕೇಳ್ತಾರೆ, ಆದ್ರೆ ಈ ವಿಚಾರ ಬೇರೆ ಕಡೆ ಹೋಗಬಾರದು ಎಂದಿದ್ದಾರೆ.

Share.
Leave A Reply