ಚಂದನವನದಲ್ಲಿ ಮತ್ತೆ ಶುರುವಾದ ಬಿರುಗಾಳಿ.. ದಚ್ಚು ಅಭಿಮಾನಿಗಳಿಗೆ ಡಿಚ್ಚಿ ಕೊಟ್ಟ ರಮ್ಯಾ.. ಏನ್ರಿ ದರ್ಶನ್… ನಿಮ್ಮ ಫ್ಯಾನ್ಸ್‌ಗೂ ರೇಣುಕಾಸ್ವಾಮಿಗೂ ವ್ಯತ್ಯಾಸನೇ ಇಲ್ವಾ? ಅಷ್ಟಕ್ಕೂ ದಚ್ಚು ಅಭಿಮಾನಿಗಳು ರಗಳೆ ಮಾಡಿದ್ಯಾಕೆ? ಪದ್ಮಾವತಿ ಕೋಪಕ್ಕೆ ಕಾರಣವೇನು?
ಸ್ಟಾರ್ ವಾರ್‌ಗಳು ನಡೆಯುತ್ತಿದ್ದ ಒಂದು ಕಾಲವಿತ್ತು. ಆದ್ರೆ, ಇದೀಗ ಸ್ಟಾರ್ ವರ್ಸಸ್ ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾ ವಾರ್ ಶುರುವಾಗಿದೆ. ಹೌದು.. ಯಥಾ ರಾಜ ತಥಾ ಪ್ರಜೆ ಅಂತ ಸುಮ್ಮನೇ ಹೇಳಲ್ಲ. ಸದ್ಯ ಈ ಮಾತು ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಸರಿಯಾಗಿ ಸೂಟ್ ಆಗುತ್ತೆ. ಇತ್ತೀಚೆಗೆ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಜಾಮೀನು ವಿಷಯವಾಗಿ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಅಂತ ರಮ್ಯಾ ಪೋಸ್ಟ್ ಮಾಡಿದ್ದರು. ಆದ್ರೀಗ ಆ ಒಂದು ಪೋಸ್ಟ್‌ಗೆ ದಾಸನ ಫ್ಯಾನ್ಸ್ ರೊಚ್ಚಿಗೆದ್ದು, ರಮ್ಯಾ ವಿರುದ್ಧ ಅಶ್ಲೀಲ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ.
ಡಿ ಬಾಸ್ ಅಭಿಮಾನಿಗಳಿಗೆ ತಿರುಗೇಟು ಕೊಟ್ಟಿರುವ ಕ್ವೀನ್ ರಮ್ಯಾ ಅಶ್ಲೀಲ ಮೆಸೇಜ್, ಕಾಮೆಂಟ್‌ಗಳನ್ನು ಮಾಡುತ್ತಿರುವ ಸ್ಕ್ರೀನ್‌ಶಾರ್ಟ್ಸ್‌ನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ರೇಣುಕಾಸ್ವಾಮಿ ಮೆಸೇಜ್‌ಗಳಿಗೂ, ದರ್ಶನ್ ಅಭಿಮಾನಿಗಳು ಮಾಡುತ್ತಿರುವ ಮೆಸೇಜ್‌ಗಳಿಗೂ ಯಾವುದೇ ವ್ಯತ್ಯಾಸವಿಲ್ಲ ಅಂತಾ ಬರೆದುಕೊಂಡು ದಾಸನ ಅಭಿಮಾನಿಗಳ ಜನ್ಮ ಜಾಲಡಿದ್ದಾರೆ. ಸದ್ಯ ಈ ಫೋಟೋಗಳು ಎಲ್ಲೆಡೆ ವೈರಲ್ ಆಗುತ್ತಿದ್ದು, ಡಿ ಬಾಸ್ ಫ್ಯಾನ್ಸ್‌ಗೆ ಸರಿಯಾಗಿ ಡಿಚ್ಚಿ ಕೊಟ್ಟಿದ್ದಾರೆ.
ಇತ್ತ ರಮ್ಯಾ, ನಾನು ಯಾರಿಗೂ ಕೇರ್ ಮಾಡಲ್ಲ. ಸೋಷಿಯಲ್ ಮೀಡಿಯಾದಲ್ಲಿ ಕೆಟ್ಟದಾಗಿ ಕಮೆಂಟ್ ಮಾಡುತ್ತಿರುವ ದರ್ಶನ್ ಅಭಿಮಾನಿಗಳ ತಕ್ಕ ಪಾಠ ಕಲಿಸದೇ ಬಿಡಲ್ಲ. ಶೀಘ್ರದಲ್ಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಲು ಮೋಹಕತಾರೆ ರಮ್ಯಾ ನಿರ್ಧರಿಸಿದ್ದಾರೆ. ಈ ನಡುವೆ ಮಾಧ್ಯಮಗಳಿಗೆ ರಿಯಾಕ್ಟ್ ಮಾಡಿರುವ ರಮ್ಯಾ, ನಾನು ಯಾವ ನನ್ನ ಮಗನಿಗೂ ಹೆದರಲ್ಲ ಅಂತಾ ಡಿ ಫ್ಯಾನ್ಸ್‌ಗೆ ಸರಿಯಾಗೇ ಬೆಂಡೆತ್ತಿದ್ದಾರೆ.. ಇನ್ನು ಈ ವಿಷಯವಾಗಿ ಮೌನವೇ ಬಂಗಾರ ಎಂಬಂತೆ ತಮ್ಮ ಅಭಿಮಾನಿಗಳು ಗಂಡು, ಹೆಣ್ಣು ಅಂತನೂ ನೋಡದೇ, ಬಾಯಿಗೆ ಬಂದಂತೆ ರೇಣುಕಾಸ್ವಾಮಿಗಿಂತ ಹೆಚ್ಚಾಗಿ ಕೆಟ್ಟದಾಗಿ ಮಾತಾಡ್ತಾ ಇದ್ರೆ, ನನಗೂ ಇದಕ್ಕೂ ಸಂಬಂಧವಿಲ್ಲ ಅನ್ನೋ ರೀತಿ ದರ್ಶನ್ ಇದ್ದಾರೆ.
ಆದೇನೆ ಆಗಲಿ… ದರ್ಶನ್ ಝೀರೋದಿಂದ ರಿಯಲ್ ಹೀರೋ ಆದವರು. ಅವರು ನಡೆದು ಬಂದ ಹಾದಿ ಎಲ್ಲರಿಗೂ ದೊಡ್ಡ ಮಾದರಿ. ಆದ್ರೆ ನಿಮ್ಮ ಪ್ರೀತಿಯ ಸೆಲೆಬ್ರಿಟಿಗಳು ಈ ರೀತಿ ಹೆಣ್ಣುಮಕ್ಕಳಿಗೆ ಬೈಯೋದು ಎಷ್ಟರ ಮಟ್ಟಿಗೆ ಸರಿ… ಕಾನೂನಿಗಿಂತ ದೊಡ್ಡವರ ಯಾರು ಇಲ್ಲ. ಹಾಗೇ ಸಮಾಜದಲ್ಲಿ ದೊಡ್ಡ ಹೆಸರು ಮಾಡಿ ಸಣ್ಣವರು ಆಗಬಾರದು. ಅದು ತಪ್ಪು, ಇದಕ್ಕೆ ಡಿ ಬಾಸ್ ಅಭಿಮಾನಿಗಳೇ ಏನ್ ಹೇಳ್ತಿರಾ? ಕಮೆಂಟ್ ಮಾಡಿ ತಿಳಿಸಿ.
