ಮೊದ್ಲೆಲ್ಲಾ ವಯಸ್ಸಾದವ್ರಿಗೆ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ತಾ ಇತ್ತು. ಆದ್ರೆ ಈಗೀಗ 25-30 ವರ್ಷದ ಹೆಣ್ಮಕ್ಳಲ್ಲೂ ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ತಿದೆ. ಎಲ್ಲ ರೀತಿಯ ಔಷಧಿ, ಚಿಕಿತ್ಸೆ ಪಡೆದ ಬಳಿಕವೂ ನೋವು ಕಾಡ್ತಿದೆ ಏನ್ ಮಾಡೋದು ಅಂತಾ ತಲೆ ಕೆಡಿಸಿಕೊಂಡಿದ್ದೀರಾ? ನಿಮ್ಮ ನೋವಿನ ಸಮಸ್ಯೆ ಹೀಗೆ ಮಾಡಿ ಸಾಕು.

ಹೈ ಹೀಲ್ಡ್‌ ಚಪ್ಪಲಿ ಧರಿಸೋದು ಫ್ಯಾಷನ್‌. ಸೆಲೆಬ್ರಿಟಿಗಳೇನೋ ಅನಿವಾರ್ಯ ಅಂತಾ ಧರಿಸ್ಬೋದು ಆದ್ರೆ ಸಾಮಾನ್ಯ ಜನ್ರು ಕೂಡ ಹೆಚ್ಚಾಗಿ ಹೈ ಹೀಲ್ಡ್‌ ಚಪ್ಪಲಿಗಳನ್ನ ಧರಿಸ್ತಿದ್ದಾರೆ. ಮಾಮೂಲಿ ಚಪ್ಪಲಿಯಂತೆಯೇ ಹೈ ಹೀಲ್ಸ್ ಧರಿಸಿಕೊಂಡು ಹೆಣ್ಮಕ್ಕಳು ಓಡಾಡುತ್ತಾರೆ. ಆದರೆ ಇದು ಕೆಲವರ ಬೆನ್ನು ನೋವಿಗೂ ಕಾರಣವಾಗ್ಬಹುದು ಎಂದು ವೈದ್ಯರು ಹೇಳುತ್ತಾರೆ.‌

ಅವರು ಹೇಳೋ ಪ್ರಕಾರ ಹೈಹೀಲ್ಡ್ ಚಪ್ಪಲಿಗಳು ದೇಹದ ಸಮತೋಲನವನ್ನು ಪಲ್ಲಟಗೊಳಿಸುತ್ವೆ. ಹೈಹೀಲ್ಡ್ ಧರಿಸಿದಾಗ ಹೆಚ್ಚಿನ ಭಾರವು ಬೆನ್ನು ಹುರಿಯ ಲಂಬಾರ್ ಭಾಗದ ಮೇಲೆ ಬಿದ್ದು ಬೆನ್ನು ನೋವು ಕಾಣಿಸುತ್ತೆ. ಇನ್ನು ಗರ್ಭಿಣಿ ಮಹಿಳೆಯರು ಹೈಹೀಲ್ಡ್ ಚಪ್ಪಲಿ ಧರಿಸುವುದು ಸೂಕ್ತವಲ್ಲ. ಒಂದ್ವೇಳೆ ಧರಿಸೋದೇ ಆದರೆ ಗರ್ಭಾವಸ್ಥೆಯ ಕೊನೆಯ ದಿನಗಳಲ್ಲಿ ಬೆನ್ನು ನೋವು ಕಾಣಿಸಿಕೊಳ್ಳಬಹುದಾಗಿದೆ.

ಆದ್ದರಿಂದ ಈ ಸಮಯದಲ್ಲಿ ಅದನ್ನು ಧರಿಸುವ ಪ್ರಯತ್ನವನ್ನು ಮಾಡ್ಬೇಡಿ. ಇನ್ನು, ಬೆನ್ನು ನೋವಿಗೆ ಸ್ವಯಂ ಚಿಕಿತ್ಸೆ ತೆಗೆದುಕೊಳ್ಳೋದು ಒಳ್ಳೇದಲ್ಲ. ಹೆಚ್ಚಿನ ಜನ ಬೆನ್ನು ನೋವು ಶಮನಕ್ಕಾಗಿ ಫಿಸಿಯೋಥೆರಪಿ ಮಾಡಿಸಿಕೊಳ್ಳುತ್ತಾರೆ. ಇನ್ನು ಕೆಲವರು ಬಿಗಿಪಟ್ಟಿ ಕಟ್ಟಿಕೊಳ್ಳುತ್ತಾರೆ.

ತೈಲ, ನೋವು ನಿವಾರಕ ಕ್ರೀಮ್ ಹಚ್ಚಿಕೊಳ್ಳುವುದು, ನೋವು ಶಮನಕಾರಿ ಮಾತ್ರೆ ಸೇವಿಸುವುದು ಮೊದಲಾದ ಸ್ವಯಂ ಚಿಕಿತ್ಸೆಗಳನ್ನು ಹೆಚ್ಚಿನವರು ಮಾಡುತ್ತಾರೆ. ಆದರೆ ನಮಗೆ ಬೆನ್ನುನೋವು ಕಾಣಿಸಿಕೊಂಡಾಗ ಮೊದಲಿಗೆ ಡಾಕ್ಟರ್‌ಅನ್ನ ಕನ್ಸಲ್ಟ್‌ ಮಾಡಿ ಅವರ ಸಲಹೆ ಮೇಲೆ ಚಿಕಿತ್ಸೆ ಪಡೆದುಕೊಳ್ಳುವುದು ಒಳ್ಳೆಯದು.

Share.
Leave A Reply