ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ (Bigg boss kannada 11) ಟ್ವಿಸ್ಟ್ ಮೇಲೆ ಟ್ವಿಸ್ಟ್ಗಳು ಸಿಕ್ಕಿವೆ. ದಿನದಿಂದ ದಿನಕ್ಕೆ ರೋಚಕತೆ ಮೂಡುತ್ತಿದ್ದು, ಸ್ಪರ್ಧಿಗಳ ನಡುವೆ ಈಗ ಭಾರೀ ಪೈಪೋಟಿ ನಡಿತಿದೆ. ಅದರಲ್ಲೂ ಬಿಗ್ ಮನೆಯಲ್ಲಿ ಮಹಿಳಾ ಮಣಿಯರಾದ ಮೋಕ್ಷಿತಾ ಪೈ ಮತ್ತು ಗೌತಮಿ ಜಾದವ್ ನಡುವೆ ಇರುವ ಮನಸ್ತಾಪ ದೊಡ್ಡದಾಗಿದೆ.
ನಿನ್ನೆ ಬಿಗ್‌ಬಾಸ್ ನೀಡಿದ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸ್ವಾಭಿಮಾನವನ್ನು ಬಿಟ್ಟು ಗೌತಮಿ(Gautami) ಎದುರು ಸಹಾಯ ಪಡೆಯಲ್ಲ ಎಂದು ಮೋಕ್ಷಿತಾ(Mokshita) ಅವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ರು. ಅವರ ಈ ನಿರ್ಧಾರದಿಂದ ಕ್ಯಾಪ್ಟೆನ್ಸಿ ಟಾಸ್ಕ್ ಆಟದ ಅವಕಾಶ ಅವರಿಗೆ ಮಿಸ್ ಆಗಿತ್ತು. ವೀಕ್ಷಕರ ವೋಟ್ಗೆ ಬೆಲೆ ನೀಡಿಲ್ಲ ಎಂಬ ಕಾರಣಕ್ಕೆ ಬಿಗ್ ಬಾಸ್ ಮೋಕ್ಷಿತಾಗೆ ಎಚ್ಚರಿಕೆ ನೀಡಿದ್ರು.
ಆದ್ರೆ ತಮಗೆ ಸಿಕ್ಕ ಅವಕಾಶವನ್ನ ಸರಿಯಾಗೇ ಬಳಸಿಕೊಂಡ ಗೌತಮಿ(Gautami) ಈಗ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಇದನ್ನ ಮೋಕ್ಷಿತಾಗೆ ತಡೆದುಕೊಳ್ಳಲು ಆಗದೆ. ನಾನು ಈ ವಾರ ತಲೆಕೆಡಿಸಿಕೊಳ್ಳ ಎಂಬ ಉಡಾಫೆಯ ಮಾತನ್ನಾಡಿದ್ದಾರೆ. ಆರಂಭದಲ್ಲಿ ಗೌತಮಿ ಜಾದವ್ ಮತ್ತು ಮೋಕ್ಷಿತಾ ಪೈ ಅವರು ತುಂಬಾ ಕ್ಲೋಸ್ ಆಗಿದ್ದರು. ಆದರೆ ನಂತರದ ದಿನಗಳಲ್ಲಿ ಅವರಿಬ್ಬರ ನಡುವೆ ವೈಮನಸ್ಸು ಮೂಡಿತು. ಜಗಳ ಆದ ಬಳಿಕ ಮೋಕ್ಷಿತಾ ಅವರು ಹಠ ಸಾಧಿಸುತ್ತಿದ್ದಾರೆ. ಅದಕ್ಕಾಗಿ ಅವರು ತಮಗೆ ಸಿಕ್ಕಿರುವ ಕೆಲವು ದೊಡ್ಡ ಅವಕಾಶಗಳನ್ನು ಕೂಡ ಕೈ ಚೆಲ್ಲಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗುವ ಅವಕಾಶವನ್ನು ಕೂಡ ಮೋಕ್ಷಿತಾ ಅವರು ಕಳೆದುಕೊಂಡಿದ್ದಾರೆ. ಗೌತಮಿಯ ಸಹಾಯ ಪಡೆಯುವುದಕ್ಕಿಂತ ತಾವು ಬಿಗ್ ಬಾಸ್ ಮನೆಯಿಂದ ಹೊರಗೆ ಹೋಗುವುದೇ ವಾಸಿ ಎಂದು ಮೋಕ್ಷಿತಾ ಅವರು ಕಠಿಣ ನಿರ್ಧಾರ ತೆಗೆದುಕೊಂಡಿದ್ರು.
ಸಧ್ಯ ಒಂದು ಪ್ರಶ್ನೇ ಈಗ ಎಲ್ಲ ಬಿಗ್‌ಬಾಸ್ ವೀಕ್ಷಕರಲ್ಲಿ ಎದ್ದಿದೆ. ಆರಂಭದಲ್ಲಿ ನೋಡುಗರಿಗೆ ಮಾದರಿಯಂತ್ತಿಂದ ಈ ಮೂವರ ಸ್ನೇಹ ಈಗ ಕೆಲವೊಂದು ಮನಸ್ತಾಪಗಳಿಂದ ಕೆಲವು ದಿನಗಳಿಂದ ದೂರೂ ಉಳಿದಿದ್ದಾರೆ, ಮೋಕ್ಷಿತಾ ಪೈ ಏಕಾಂಗಿಯಾಗಿ ಆಟ ಆಡ್ಬೇಕು ಅಂತ ದೋಸ್ತಿ ಬಿಟ್ಟು ಬಂದಿದ್ದಾರೆ, ಸದ್ಯ ಮಂಜಣ್ಣನ ವಿರುದ್ದ ಕೆಂಡಕಾರುತ್ತಿರುವ ಇವರು ಗೌತಮಿಯ ಬಗ್ಗೆ ಇಲ್ಲಸಲ್ಲದ ವಿಷಯಗಳನ್ನು ಹೇಳಿಕೊಂಡು ಓಡಾಡುತ್ತದ್ದಾರೆ.
ಗೌತಮಿ ಈ ವಿಚಾರ ಕುರಿತು ಯಾವುದೇ ಮಾತನ್ನು ಹೇಳಿಕೊಂಡಿಲ್ಲ, ಅದರೆ ಮೋಕ್ಷಿತಾ(Mokshita) ಪೈಗೆ ಎನೋ ಸಮಸ್ಯೆ ಕಾಡುತ್ತಿದೆ. ಸೆಲ್ಪ್ ರೆಸ್ಪೆಕ್ಟ್ ಅಂತಿದ್ದಾರೆ, ಒಟ್ಟಾರೆ ಈ ವಾರ ಮನೆಯ ಕ್ಯಾಪ್ಟನ್ ಗೌತಮಿ ಆಟ ಬೇರೆ ರೀತಿನೇ ಇದ್ದು ಮಜಾ ಕೊಡುತ್ತೆ ಅನ್ನೋ ಕುತೂಹಲ ಇದೆ.