ಕನ್ನಡದ ಅದೆಷ್ಟೋ ಸೂಪರ್‌ ಹಿಟ್‌ ಹಾಡುಗಳಿಗೆ ಖ್ಯಾತ ಗಾಯಕ Sonu Nigam ಕಂಠವಿದೆ. ಕೆಲವು ಹಾಡುಗಳನ್ನ ಅದೆಷ್ಟ್‌ ಚನ್ನಾಗಿ ಹಾಡಿದ್ದಾರೆ ಅಂದ್ರೆ ಅವ್ರು ಕನ್ನಡದವ್ರೇ ಏನೋ ಅನ್ನೋ ಫೀಲ್‌ ಕೊಡುತ್ತೆ. ಈ ರೀತಿ ಕನ್ನಡ ಭಾಷೆಯಲ್ಲಿ, ಕನ್ನಡ ಹಾಡುಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದ ಸೋನು ನಿಗಮ್‌ ಇತ್ತೀಚೆಗೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟ್‌ಮೆಂಟ್‌ ಕೊಟ್ಟಿದ್ದು ನಿಮ್ಗೆಲ್ಲಾ ಗೊತ್ತೇ ಇದೆ. ಈ ಬೆಂಕಿ ಆರುವ ಮುನ್ನವೇ, ಸೋನು ಮತ್ತೊಮ್ಮೆ ಕಿಚ್ಚು ಹಚ್ಚಿದ್ದಾರೆ. ಮತ್ತೆ ಕನ್ನಡಿಗರನ್ನ ಕೆಣಕಿ ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದಾರೆ..

ಬೆಂಗಳೂರಿನ ಚಂದಾಪುರದ ಎಸ್​ಬಿಐ ಬ್ಯಾಂಕ್​ಗೆ ಕೆಲಸದ ಗ್ರಾಹಕರೊಬ್ಬರು ಹೋದಾಗ ಅಲ್ಲಿನ ಬ್ಯಾಂಕ್​ ಮ್ಯಾನೇಜರ್ ಪ್ರಿಯಾಂಕಾ​ ಕನ್ನಡ ಮಾತಾಡದೇ ಉದ್ಧಟತನ ತೋರಿದ್ದರು. ಅಲ್ಲದೇ ನಾನ್‌ ಯಾವತ್ತೂ ಕನ್ನಡ ಮಾತಾಡಲ್ಲ. ನೀನ್‌ ಬೇಕಿದ್ರೆ ಹಿಂದಿ ಮಾತಾಡು ಅಂತಾ ದುರಹಂಕಾರದಿಂದ ಹೇಳಿದ್ದರು. ಇದನ್ನ ಗ್ರಾಹಕ ವಿಡಿಯೋ ಮಾಡಿದ್ದ ಈ ವಿಡಿಯೋ ವೈರಲ್‌ ಆಗ್ತಿದ್ದಂತೆ ಸಂಸದ ತೇಜಸ್ವಿ ಸೂರ್ಯ ಖಡಕ್‌ ಪ್ರತಿಕ್ರಿಯೆ ನೀಡಿದ್ದರು. ಎಸ್‌ಬಿಐ ಬ್ಯಾಂಕ್‌ ಮ್ಯಾನೇಜರ್‌ನ ದರ್ಪ ಸಹಿಸೋದಿಕ್ಕೆ ಆಗೋದಿಲ್ಲ.

ಕರ್ನಾಟಕದಲ್ಲಿ ಅದ್ರಲ್ಲೂ ಬ್ಯಾಂಕ್‌ನಲ್ಲಿ ಸೇವೆ ಸಲ್ಲಿಸುತ್ತಿರುವವರು ಕನ್ನಡದಲ್ಲಿಯೇ ವ್ಯವಹರಿಸಬೇಕು. ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆಗಳಲ್ಲಿ ಸ್ಥಳೀಯ ಕನ್ನಡಿಗರನ್ನು ಪರಿಗಣಿಸುವಂತೆ ನಾನು ಸಂಸತ್ತಿನಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ದೇನೆ. ಈ ಕುರಿತಂತೆ DFS ನೀತಿಯಡಿಯಲ್ಲಿಯೇ ನೇಮಕಾತಿ ಕೈಗೊಳ್ಳುವಂತೆ ಎಸ್​ಬಿಐ ಬಳಿ ವಿನಂತಿಸುತ್ತೇನೆ. ಈ ರೀತಿಯ ವರ್ತನೆ ತೋರಿರುವ ಬ್ಯಾಂಕ್ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಸಂಬಂಧಪಟ್ಟವರ ಬಳಿ ನಾನು ಒತ್ತಾಯಿಸಿದ್ದೇನೆ ಅಂತಾ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದರು.

ಇನ್ನು, ತೇಜಸ್ವಿ ಸೂರ್ಯ ಅವರ ಪೋಸ್ಟ್‌ಗೆ ಗಾಯಕ Sonu Nigam ಎಕ್ಸ್‌ ಅಕೌಂಟ್‌ನಲ್ಲಿ ಕೌಂಟರ್‌ ಕೊಟ್ಟಿದ್ದಾರೆ ಅಂತಾ ಸೋಷಿಯಲ್‌ ಮೀಡಿಯಾ ಸೇರಿದಂತೆ ಹಲವು ನ್ಯೂಸ್‌ ಚಾನಲ್‌ಗಳಲ್ಲಿ ಅಪಪ್ರಚಾರ ಮಾಡಲಾಗ್ತಿದೆ. ಅಸಲಿ ವಿಷಯ ಏನು ಅಂದ್ರೆ, ಗಾಯಕ ಸೋನು ನಿಗಮ್‌ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟಿವ್‌ ಇರುವಷ್ಟು ಬೇರೆ ಸೋಷಿಯಲ್‌ ಮೀಡಿಯಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಇಲ್ಲ.

Also Read: Cannes : ದೇಸಿ ಉಡುಗೆಯಲ್ಲಿ ಐಶ್ವರ್ಯಾ ರೈ ಬಚ್ಚನ್‌ ಮಿಂಚಿಂಗ್‌!

ಅದ್ರಲ್ಲೂ ಎಕ್ಸ್‌ ಅಕೌಂಟ್‌ಅನ್ನ ಸೋನು ನಿಗಮ್‌ ಬಳಸದೇ ಏಳು ವರ್ಷಗಳೇ ಕಳೆದಿವೆ. ಆದ್ರೆ, Sonu Nigam ಹೆಸರಿನ ಮತ್ತೋರ್ವ ವ್ಯಕ್ತಿ ಮಾಡಿರುವ ಟ್ವೀಟ್‌ಅನ್ನ ಗಾಯಕ ಸೋನು ನಿಗಮ್‌ ಮಾಡಿದ್ದಾರೆಂದು ಬಿಂಬಿಸಲಾಗ್ತಿದೆ. ಕರ್ನಾಟಕದಲ್ಲಿ ಕನ್ನಡವೇ ಮಾತಾಡ್ಬೇಕು ಅನ್ನೋ ಹಾಗಿದ್ರೆ ಕನ್ನಡ ಸಿನಿಮಾ ಹಿಂದಿಗೆ ಡಬ್​ ಮಾಡಬೇಡಿ. ಕನ್ನಡ ಸಿನಿಮಾನ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬೇಡಿ.

ತೇಜಸ್ವಿ ಸೂರ್ಯ ಅವರೇ ಇದನ್ನು ಕನ್ನಡ ಹೀರೋಗಳಿಗೆ ಹೇಳುವ ಗಟ್ಸ್ ನಿಮಗೆ ಇದೆಯೇ ಅಥವಾ ನೀವೊಬ್ಬ ಭಾಷಾ ಹೋರಾಟಗಾರ ಅಷ್ಟೇನಾ ಅಂತಾ Sonu Nigam ಹೆಸರಿನ ವ್ಯಕ್ತಿಯೋರ್ವ ಟ್ವೀಟ್‌ ಮಾಡಿದ್ದ. ಈತ ಒಬ್ಬ ಕ್ರಿಮಿನಲ್‌ ಲಾಯರ್‌ ಆಗಿದ್ದು 91 ಸಾವಿರ ಫಾಲೋವರ್ಸ್‌ಅನ್ನ ಕೂಡ ಹೊಂದಿದ್ದಾನೆ. ಈತನ ಟ್ವೀಟ್‌ಅನ್ನ Sonu Nigam ಟ್ವೀಟ್‌ ಎಂದು ಅಪಾರ್ಥ ಮಾಡಿಕೊಂಡಿರುವ ನೆಟ್ಟಿಗರು ಮತ್ತೆ Sonu Nigam ವಿರುದ್ಧ ಕೆಂಡಾಮಂಡಲವಾಗಿದ್ದಾರೆ.

Share.
Leave A Reply