ಹೇಗಿದ್ದೀಯಾ ಕಂದಾ.. ನಾನು ಜೊತೆಗಿಲ್ಲ ಅಂತಾ ಬೇಜಾರಾಗಿದ್ದೀಯಾ..? ಎಷ್ಟು ಚೆನ್ನಾಗಿ ಕಾಣ್ತೀಯ ನೋಡು.. ನಿನ್ನ ಮೇಲೆ ಯಾರ ದೃಷ್ಟಿನೂ ಬೀಳದೇ ಇರಲಿ.. ಯಾವುದಕ್ಕೂ ತಲೆಕೆಡಿಸಿಕೊಳ್ಬೇಡ ಮಗಾ.. ನಾನು ನಿನ್ನ ಬೆನ್ನ ಹಿಂದೆಯೇ ಇರ್ತೀನಿ. ಹೀಗೆ ನಗುತ್ತಾ.. ನಗಿಸ್ತಾ ಖುಷಿಯಾಗಿರುವ ಕಂದ ಅಂತಾ ಬಿಗ್‌ಬಾಸ್‌ ಪರದೆ ಮೇಲೆ ಮನಮಿಡಿಯುವ ಹಾಡು ಕೇಳಿ ಬಂತು.. ಅಷ್ಟೇ.. ಅಭಿನಯ ಚಕ್ರವರ್ತಿ ಸುದೀಪ್‌ ಕಣ್ಣಾಲಿಗಳು ಒದ್ದೆಯಾಗಿದ್ದವು. ಸುದೀಪ್‌ ಮಗಳು ಸಾನ್ವಿ ಕಣ್ಣಲ್ಲಿ ನೀರು ಜಿನುಗಿತ್ತು.. ನೆರೆದಿದ್ದ ಪ್ರೇಕ್ಷಕರ ಹೃದಯ ಕಲಕಿದಂತಾಗಿತ್ತು..

Sudeep

ನಿಜ.. ಬಿಗ್‌ಬಾಸ್‌ ಸೀಸನ್‌ 11 ಗ್ರಾಂಡ್‌ ಫಿನಾಲೆ (Bigg boss season 11 grand finale) ಎಲ್ಲರ ಹೃದಯ ಸ್ಪರ್ಶಿಸಿದೆ.. ಆ ಮನ ಮಿಡಿಯುವ ಕ್ಷಣಗಳು ಎಲ್ಲರನ್ನೂ ಒಂದು ಕ್ಷಣ ಮಂತ್ರಮುಗ್ದರನ್ನಾಗಿಸಿತ್ತು.. ಯಾಕಂದ್ರೆ, ಬಾರದೂರಿಗೆ ಪಯಣಿಸಿರುವ ಕಿಚ್ಚನ ಪ್ರೀತಿಯ ತಾಯಿ, ಮತ್ತೆ ಮರಳಿ ಬಂದಂತ್ತಿತ್ತು.. ಪುಟ್ಟ ಬಾಲಕನೊಬ್ಬ ವೇದಿಕೆ ಮೇಲೆ ಅಮ್ಮಾ ಅಮ್ಮಾ ಅಂತಾ ಹಾಡು ಹಾಡುತ್ತಿದ್ರೆ, ದಿಢೀರ್‌ ಪ್ರತ್ಯಕ್ಷವಾದ ಅಮ್ಮ ನಾನಿದ್ದೀನಿ ಮಗನೇ ಹೆದರಬೇಡ ಅಂತಾ ಧೈರ್ಯ ತುಂಬಿದ್ದು ಪ್ರತಿಯೊಬ್ಬರ ಕಣ್ಣುಗಳು ತುಂಬಿ ಬರುವಂತೆ ಮಾಡಿತ್ತು..

ಕಿಚ್ಚನಿಗೆ ಅಮ್ಮನ ಪ್ರೀತಿ ಸಮರ್ಪಿಸಿ ಬಿಗ್‌ಬಾಸ್‌ ವಿದಾಯ!
ಹೌದು.. ಕಿಚ್ಚ ಸುದೀಪ್‌ಗೆ ಸೀಸನ್‌ 11 ತುಂಬಾ ಕಷ್ಟಕರವಾಗಿತ್ತು.. ಎಂದೆಂದಿಗೂ ಮರೆಯಲಾರದ ಸೀಸನ್‌ ಆಗಿತ್ತು.. ಯಾಕಂದ್ರೆ, ಇದೇ ಸೀಸನ್‌ನಲ್ಲೇ ಕಿಚ್ಚು ಸುದೀಪ್‌(Sudeep) ತಾಯಿ ಸರೋಜಾ ವಿಧಿವಶರಾಗಿದ್ರು.. ಅಕ್ಟೋಬರ್‌ 20ರಂದು ಸರೋಜಾ ಅವರು ಬಾರದ ಲೋಕಕ್ಕೆ ಪಯಣಿಸಿದ್ದು, 2 ವಾರದ ನಂತರ ಅಮ್ಮನ ಅಗಲಿಕೆ ನೋವಿನಲ್ಲೇ ಕಿಚ್ಚ ಸುದೀಪ್‌ ಬಿಗ್‌ಬಾಸ್‌ ಶೋ ಹೋಸ್ಟ್‌ ಮಾಡಿದ್ದು ಎಲ್ಲರಿಗೂ ಕಣ್ಣೀರು ತರಿಸಿತ್ತು.. ಇದೀಗ ಕಾಲನ ಕರೆಯಲ್ಲಿ ಕಣ್ಮರೆಯಾಗಿದ್ದ ಕಿಚ್ಚನ ತಾಯಿಯನ್ನು ಮರುಸೃಷ್ಟಿಸಿ, ಕಿಚ್ಚನಿಗೆ ಭಾವನಾತ್ಮಕ ವಿದಾಯ ಹೇಳಲಾಯ್ತು.. ಅದನ್ನೆಲ್ಲಾ ಕಂಡ ಸುದೀಪ್‌, ಮಗಳು, ಸಾನ್ವಿ ಹಾಗೂ ಸುದೀಪ್‌ (Sudeep) ತಂದೆ ಕಣ್ಣೀರಿಟ್ರು..

ಬಾಲ್ಯ ನೆನಪಿಸಿದ ಬಾಲಕನಿಗೆ ಸುದೀಪ್‌ ಭರ್ಜರಿ ಗಿಪ್ಟ್..!‌
ಬಾಲ್ಯದಲ್ಲಿ ಕಿಚ್ಚ ಸುದೀಪ್‌ ಹೇಗಿದ್ರು? ಹೇಗೆಲ್ಲಾ ಕಳೆದ್ರು ಅನ್ನೋದನ್ನು ಪುಟ್ಟ ಬಾಲಕನೊಬ್ಬ ವೇದಿಕೆ ಪ್ರದರ್ಶನ ತೋರಿದ. ಅಮ್ಮನಿಲ್ಲದ ಪುಟ್ಟ ಕಂದನ ನೋವು, ಆ ಚಡಪಡಿಕೆ ಹೇಗಿರುತ್ತೆ ಅನ್ನೋದನ್ನು ಸಾರಿ ಸಾರಿ ಹೇಳಿ ಕಿಚ್ಚನ ಬಾಲ್ಯ ನೆನಪಾಗುವಂತೆ ಮಾಡಿದ. ಇದರಿಂದ ಸುದೀಪ್‌ ನೋವು ಅನುಭವಿಸಿದ್ರೂ, ಚೇತರಿಸಿಕೊಂಡು ವೇದಿಕೆ ಮೇಲೆ ಬಂದ್ರು… ಪುಟ್ಟ ಬಾಲಕನ ವೇದಿಕೆ ಮೇಲೆ ಕರೆದು ಹೆಸರು ಕೇಳಿ ಗುಣಗಾನ ಮಾಡಿದ್ರು. ಅದೇ ಖುಷಿಯಲ್ಲಿ ಕಿಚ್ಚ ತಮ್ಮ ಕೈಯಲ್ಲಿದ್ದ ಬೆಳ್ಳಿಯ ಬ್ರೇಸ್‌ಲೇಟ್‌ನ್ನು ತೆಗೆದು ಬಾಲಕನ ಕೈಗೆ ತೊಡಿಸಿ ಕಳಿಸಿದ್ದು, ನೆರೆದಿದ್ದ ಪ್ರೇಕ್ಷಕರು ಚಪ್ಪಾಳೆ ತಟ್ಟಿ ಖುಷಿ ಪಟ್ರು..

Sudeep

ಸೀಸನ್‌ 1ರಿಂದಲೇ ಮೋಡಿ ಮಾಡಿದ್ದ ಕಿಚ್ಚ ಸುದೀಪ್..!‌
ಇನ್ನು, ಕರ್ನಾಟಕದ ಜನಮಾನಸದಲ್ಲಿ ಹೆಸರುವಾಸಿಯಾಗಿರುವ ಬಿಗ್‌ಬಾಸ್‌ ಶುರುವಾಗಿದ್ದು 2013ರಲ್ಲಿ.. ಸೀಸನ್‌ ಒಂದರಿಂದಲೇ ಕಿಚ್ಚ ಸುದೀಪ್‌ ಭರ್ಜರಿಯಾಗಿ ನಿರೂಪಣೆ ಮಾಡಿದ್ರು. ಆ ಮೂಲಕ ಅವರ ಗತ್ತು, ಗೈರತ್ತು ಇಡೀ ಕನ್ನಡ ಇಂಡಸ್ಟ್ರಿಗೆ ಗೊತ್ತಾಗಿತ್ತು.. ಅಲ್ಲಿಂದ ಈ ಸೀಸನ್‌ವರೆಗೂ ಸುದೀಪ್‌ ನಿರೂಪಣೆ ಹೇಗಿದೆ ಅಂತಾ ಹೇಳಬೇಕಾಗಿಲ್ಲ. ಆದ್ರೆ, ಈ ಬಾರಿಯ ಸೀಸನ್‌ ಸುದೀಪ್‌ಗೆ ತೀರಾ ಕಷ್ಟವಾದ ಸೀಸನ್‌.. ಯಾಕಂದ್ರೆ ಈ ಸೀಸನ್‌ನಲ್ಲೇ ಕಿಚ್ಚ ಸುದೀಪ್‌ ತಾಯಿ ಅಗಲಿದ್ದು.. ಅಮ್ಮನ ನಿಧನರಾದ ಎರಡು ವಾರದ ನಂತರ ಕಿಚ್ಚ ಸುದೀಪ್‌, ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ನಡೆಸಲು ತಮ್ಮ ಕರ್ತವ್ಯ ನಿರ್ವಹಿಸಲು ಬಂದಿದ್ರು.. ನನ್ನಮ್ಮನಿಗೆ ಬಿಗ್‌ಬಾಸ್‌ ಇಷ್ಟ ಎಂದು ಹೇಳಿ ಭಾವುಕರಾಗಿದ್ರು.. ಆದ್ರೀಗ ಅಮ್ಮ ಇಷ್ಟಪಡುವ ರಿಯಾಲಿಟಿ ಶೋಗೆ ಕಿಚ್ಚ ಸುದೀಪ್‌ ವಿದಾಯ ಹೇಳಿದ್ದಾರೆ. ಅಂದ್ರೆ, ಇದೇ ಸೀಸನ್‌ ಅವರ ಕೊನೇ ಸೀಸನ್‌ ಆಗಿದ್ದು, ಮುಂದಿನ ಸೀಸನ್‌ಗೆ ನಾನಿರಲ್ಲ ಅಂತಾ ಮೊದಲೇ ಹೇಳಿದ್ದರು. ಆದ್ರೀಗ ಅವರ ಕೊನೆಯ ಸೀಸನ್‌, ಕೊನೆಯ ನಿರೂಪಣೆ, ಕೊನೆ ಚಪ್ಪಾಳೆ ಇಲ್ಲಿಗೇ ಕೊನೆಯಾಗಿದೆ.

ಒಟ್ನಲ್ಲಿ, ಬಿಗ್‌ಬಾಸ್‌ ರಿಯಾಲಿಟಿ ಶೋಗೆ ವಿದಾಯ ಹೇಳಿದ ಕಿಚ್ಚ ಸುದೀಪ್‌ಗೆ ಭಾವನಾತ್ಮಕ ವಿದಾಯ ಹೇಳಲಾಗಿದ್ದು, ಕಿಚ್ಚ ಕಣ್ಣೀರಲ್ಲಿ ಮುಳುಗಿದ್ರು.. ಆದ್ರೀಗ ಕಿಚ್ಚನ ಸ್ಥಾನವನ್ನು ಯಾರು ತುಂಬ್ತಾರೆ ಅನ್ನೋದು ಭಾರಿ ಕುತೂಹಲ ಕೆರಳಿಸಿದೆ.

Share.
Leave A Reply