ಬೆಂಗಳೂರು: ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ತೆರಳುತ್ತಿರುವ ಮುನ್ನ ಸವಾರರು ಎಚ್ಚರಿಕೆಯಿಂದ ಇರಬೇಕಾಗಿದೆ. ಏಕೆಂದರೆ ಇಂತಹ ರಸ್ತೆಗಳಲ್ಲಿ ಕ್ರೈಮ್ ರೇಟ್ ಹೆಚ್ಚಾಗುತ್ತಿದೆ.

ಕಾರು, ಬೈಕ್ ಗಳಲ್ಲಿ ಹೋಗುವಾಗ ಜನರು ಜನ ವಸತಿ ಇಲ್ಲದ ಕಡೆಗಳಲ್ಲಿ ನಿಲ್ಲಿಸುವುದು ಅಪಾಯಕ್ಕೆ ದಾರಿ ಮಾಡಿಕೊಂಡಂತಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ದರೋಡೆ, ಸುಲಿಗೆಕೋರರ ಹಾವಳಿ ಹೆಚ್ಚಾಗಿದ್ದು, ಬರೋಬ್ಬರಿ 403 ಪ್ರಕರಣಗಳು ರಾಜ್ಯದಲ್ಲಿ ವರದಿಯಾಗಿವೆ.

2023 ರಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ 81 ಸುಲಿಗೆ ಪ್ರಕರಣಗಳು ಹಾಗೂ 23 ದರೋಡೆ ಪ್ರಕರಣಗಳು ವರದಿಯಾಗಿವೆ. 2024 ರಲ್ಲಿ 66 ಸುಳಿಗೆ ಹಾಗೂ 16 ದರೋಡೆ ಪ್ರಕರಣಗಳು ನಡೆದಿವೆ. 2025ರ ನವೆಂಬರ್ 15ರ ವರೆಗಿನ ಮಾಹಿತಿಯ ಪ್ರಕಾರ 51 ಸುಳಿಗೆ ಮತ್ತು 14 ದರೋಡೆ ಪ್ರಕರಣ ವರದಿಯಾಗಿವೆ.

ರಾಜ್ಯ ಹೆದ್ದಾರಿಯಲ್ಲಿ 2023 ರಲ್ಲಿ 39 ಸುಲಿಗೆ, 17 ದರೋಡೆ ನಡೆದರೆ 2024 ರಲ್ಲಿ 35 ಸುಳಿಗೆ, 22 ದರೋಡೆಗಳು ನಡೆದಿವೆ. 2025 ರಲ್ಲಿ 20 ಸುಳಿಗೆ ಪ್ರಕರಣ ಮತ್ತು 19 ದರೋಡೆ ಪ್ರಕರಣಗಳು ನಡೆದಿರುವ ಕುರಿತು ವರದಿಯಾಗಿವೆ. ಹೀಗಾಗಿ ಸಾರ್ವಜನಿಕರು ಎಚ್ಚರಿಕೆಯಿಂದ ಇರುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.

Share.
Leave A Reply