Subscribe to Updates
Get the latest creative news from FooBar about art, design and business.
Author: Mahanthesha
ಅದ್ಭುತ ದೃಶ್ಯಕಾವ್ಯದ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದು ಬಾಹುಬಲಿ ಸಿನಿಮಾ.. ಅದರಲ್ಲೂ ಬಾಹುಬಲಿ ಬೆನ್ನಿಗೆ ಕಟ್ಟಪ್ಪ ಇರಿದಿದ್ದು ಎಲ್ಲ ಪ್ರೇಕ್ಷರನ್ನ ಬೆರಗಾಗಿಸಿತ್ತು. ಆದ್ರೀಗ ಅದೇ ರೀತಿ, ಅದೇ ಸೀನ್ ಕನ್ನಡ ಬಿಗ್‌ಬಾಸ್‌ನಲ್ಲಿ ನಡೆದಿದೆ. ಕುಚಿಕು ಗೆಳೆಯನಂತಿದ್ದ ಗಿಲ್ಲಿ ಬೆನ್ನಿಗೆ ರಘು ಚೂರಿ ಹಾಕಿದ್ದು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಹುಟ್ಟು ಹಾಕಿದೆ. ಹೌದು.. ಬಾಹುಬಲಿ ಸಿನಿಮಾ ಯಾರಿಗ್ ಗೊತ್ತಿಲ್ಲ ಹೇಳಿ. ಅದ್ರಲ್ಲೂ ಕಟ್ಟಪ್ಪ ಹಾಗೂ ಬಾಹುಬಲಿಯ ಒಡನಾಟ ಜೊತೆಗೆ ಸಿನಿಮಾ ಕ್ಲೈಮ್ಯಾಕ್ಸ್ ಅದ್ಭುತವಾಗಿತ್ತು. ಇದೇ ಥರದ ಒಂದು ಘಟನೆ ಬಿಗ್‌ಬಾಸ್ ಶೋನ ಗಿಲ್ಲಿ ಮತ್ತು ರಘು ಮಧ್ಯೆ ನಡೆದಿದೆ. ಇಷ್ಟು ದಿನ ಸ್ನೇಹಜೀವಿಗಳಾಗಿದ್ದ ಮ್ಯೂಟೆಂಟ್ ರಘು ಹಾಗೂ ಗಿಲ್ಲಿ ನಟ ಮೊನ್ನೆ ರೆಸಾರ್ಟ್ ಟಾಸ್ಕ್ ಆದಾಗಿನಿಂದ ಒಬ್ಬರ ಮೇಲೊಬ್ರು ಕತ್ತಿ ಮಸೆಯುತ್ತಿರುವಂತೆ ಕಾಣ್ತಿದೆ. ಗಿಲ್ಲಿ ರಘು ಗಡ್ಡಕ್ಕೆ ಕೈಹಾಕಿ ಕಿಚಾಯಿಸೋದು, ರಘು ಮೈ ಮೇಲೆ ಬೀಳೋದು, ಹಾಗೆ ಗಿಲ್ಲಿ ಮೇಲೆ ರಘು ಅವರ ಹುಸಿಮುನಿಸು ಇವೆಲ್ಲಾ ಜನ್ರನ್ನ…
ಬೆ. ಡಿ.02 : ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆಯ ಆಂತರಿಕ ಭಿನ್ನಮತದ ಕುರಿತಾದ ಊಹಾಪೋಹಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಧಿಕೃತವಾಗಿ ತೆರೆ ಎಳೆದಿದ್ದಾರೆ. ಡಿಸಿಎಂ ನಿವಾಸದಲ್ಲಿ ನಡೆದ ಮಹತ್ವದ ಉಪಾಹಾರ ಕೂಟದ ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು, “ನಮ್ಮಿಬ್ಬರ ನಡುವೆ ಯಾವುದೇ ಮನಸ್ತಾಪವಿಲ್ಲ. ಒಂದೇ ಪಕ್ಷ ಒಂದೇ ಸಿದ್ಧಾಂತ ಎಂದು ಸ್ಪಷ್ಟಪಡಿಸುವ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ. ಉಪಹಾರ ಬಳಿಕ ಸಿಎಂ ಸಿದ್ದು ಸ್ಫೋಟಕ ಹೇಳಿಕೆ :ಡಿಸಿಎಂ ಡಿಕೆಶಿ ನಿವಾಸದಲ್ಲಿ ಏರ್ಪಡಿಸಲಾಗಿದ್ದ ಬ್ರೇಕ್‌ಫಾಸ್ಟ್ ಮೀಟಿಂಗ್ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಿದ ಉಭಯ ನಾಯಕರು, ಮುಂಬರುವ ಚಳಿಗಾಲ ಅಧಿವೇಶನ ವೇಳೆ ವಿಪಕ್ಷಗಳನ್ನು ಎದುರಿಸಲು ಸನ್ನದ್ದರಾಗಿರುವ ಕುರಿತು ಮಾತನಾಡಿದರು. ಒಳಗೊಳಗೆ ಬುಸುಗುಡುತ್ತಿರುವ ಸಿಎಂ ಕುರ್ಚಿ ಫೈಟ್ ನಡುವೆ, ಡಿಕೆ ಶಿವಕುಮಾರ್ ಸಿಎಂ ಯಾವಾಗ ಆಗ್ತಾರೆ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ, ಡಿಕೆ ಶಿವಕುಮಾರ್ ಸಮ್ಮುಖದಲ್ಲೇ ಖಾರವಾಗಿಯೇ ಉತ್ತರಿಸಿರುವ ಸಿದ್ದರಾಮಯ್ಯ ʼಹೈಕಮಾಂಡ್ ಹೇಳಿದಾಗ ಆಗ್ತಾರೆʼ…
ಬೆಂಗಳೂರು : ಪತಂಜಲಿ ತುಪ್ಪ ಕ್ವಾಲಿಟಿ ಟೆಸ್ಟ್‌ನಲ್ಲಿ ಫೇಲ್ ಆಗಿದೆ. ಭಾರತದ ಪ್ರಮುಖ ಕಂಪನಿಗಳಲ್ಲಿ ಪತಂಜಲಿ ಕೂಡ ಒಂದಾಗಿದ್ದು, ಇಂಡಿಯನ್ ಬ್ರ್ಯಾಂಡ್ ಎಂಬ ಕಾರಣಕ್ಕೆ ಹಲವರು ಪತಂಜಲಿ ಪ್ರಾಡಕ್ಟ್‌ಗಳನ್ನ ಬಳಸ್ತಿದ್ದಾರೆ. ಆದ್ರೆ, ಈ ಪತಂಜಲಿ ತುಪ್ಪವು ಕಲಬೆರಕೆಯಾಗಿದೆ ಅಂತಾ ರಾಜ್ಯ ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳು ದೃಢಪಡಿಸಿವೆ. 2020ರಲ್ಲಿ ಉತ್ತರಾಖಂಡದ ಕರಣ್ ಜನರಲ್ ಸ್ಟೋರ್‌ನಿಂದ ಹಿರಿಯ ಆಹಾರ ಅಧಿಕಾರಿಯೊಬ್ಬರು ಪತಂಜಲಿ ತುಪ್ಪವನ್ನ ತಪಾಸಣೆಗಾಗಿ ಖರೀದಿಸಿದ್ದರು. ಉತ್ತರಾಖಂಡದ ಪ್ರಯೋಗಾಲಯದಲ್ಲಿ ತುಪ್ಪವು ಆಹಾರ ಸುರಕ್ಷತಾ ಮಾನದಂಡಗಳನ್ನು ಪೂರೈಸಿಲ್ಲ. ಹೀಗಾಗಿ ಅದು ಕಳಪೆ ಗುಣಮಟ್ಟದ್ದಾಗಿದೆ, ಈ ತುಪ್ಪವನ್ನು ಸೇವಿಸುವುದರಿಂದ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಮತ್ತು ಅನಾರೋಗ್ಯಕ್ಕೂ ಕಾರಣವಾಗಬಹುದು ಎಂದು ಪ್ರಯೋಗಾಲಯದ ವರದಿ ಬಹಿರಂಗಪಡಿಸಿತ್ತು. ನಂತರ ಕಂಪನಿಯ ಅಧಿಕಾರಿಗಳು ಮಾದರಿಯನ್ನ ಕೇಂದ್ರ ಪ್ರಯೋಗಾಲಯದಲ್ಲಿ ಮರುಪರೀಕ್ಷೆ ಮಾಡುವಂತೆ ಒತ್ತಾಯಿಸಿದರು. ಹೀಗಾಗಿ 2021ರಲ್ಲಿ ಮರುಪರೀಕ್ಷೆ ಮಾಡಲಾಗಿತ್ತು. ಆದರೆ ಇದರಲ್ಲಿಯೂ ಕೂಡ ಪತಂಜಲಿ ತುಪ್ಪ ಫೇಲ್ ಆಗಿದೆ. ಹೀಗಾಗಿ ಪ್ರಕರಣವನ್ನ ದಾಖಲಿಸಲಾಗಿತ್ತು. ಇದೀಗ ಅದರ ತೀರ್ಪು ಪ್ರಕಟವಾಗಿದ್ದು, ಆರೋಪಿಗಳ ವಿರುದ್ಧ…
ಡಿ.01 : ತೆಲುಗು ನಟ ನಾಗಚೈತನ್ಯರಿಂದ ಡಿವೋರ್ಸ್ ಪಡೆದ ನಂತರ ಏಕಾಂಗಿಯಾಗಿದ್ದ ನಟಿ ಸಮಂತಾ ಈಗ ಮತ್ತೊಂದು ವೈವಾಹಿಕ ಜೀವನ ಆರಂಭಿಸಿದ್ದಾರೆ. ಬಾಲಿವುಡ್ ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಸಪ್ತಪದಿ ತುಳಿದಿದ್ದು, ಫೋಟೋಸ್, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸೋಮವಾರ ಬೆಳ್ಳಂಬೆಳಗ್ಗೆ ಗೆಳೆಯ ರಾಜ್ ನಿಡಿಮೋರು ಜೊತೆ ಸಮಂತಾ ಹೊಸ ಬಾಳಿಗೆ ಕಾಲಿಟ್ಟಿದ್ದು, ತಮಿಳುನಾಡಿನ ಕೊಯಮತ್ತೂರಿನ ಈಶ ಫೌಂಡೇಶನ್ ಆವರಣದಲ್ಲಿರುವ ಲಿಂಗಭೈರವಿ ದೇವಿಯ ಮುಂದೆ ಸರಳವಾಗಿ ಮದುವೆಯಾಗಿದ್ದಾರೆ ಎನ್ನಲಾಗುತ್ತಿದೆ. ರಾಜ್ ನಿಡಿಮೋರು ಈಗಾಗ್ಲೇ ವಿವಾಹವಾಗಿದ್ದು ಸಮಂತಾ ಜೊತೆ ಅವರಿಗೆ ಇದು ಎರಡನೇ ವಿವಾಹವಾಗಿದೆ. ಇನ್ನು ಸಮಂತಾ ಈ ಹಿಂದೆ ನಟ ನಾಗ ಚೈತನ್ಯ ಅವರನ್ನು ವಿವಾಹವಾಗಿದ್ದರು. ನಂತರ 2021ರಲ್ಲಿ ವಿಚ್ಛೇದನ ಪಡೆದಿದ್ದರು. ವೆಬ್‌ಸಿರೀಸ್ ಒಡನಾಡಿ ರಾಜ್ ಜೊತೆ ಸಮಂತಾ ಪ್ರೀತಿಯಲ್ಲಿ ಬಿದ್ದಿದ್ದು ಸದ್ದಿಲ್ಲದೇ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ ಎನ್ನಲಾಗುತ್ತಿದೆ. ಲಿಂಗಭೈರವಿ ದೇವಿಯ ಆರಾಧಕಿ ಆಗಿರುವ ಸಮಂತಾ, ಮನೆಯಲ್ಲಿ ನಿತ್ಯವೂ ಪೂಜೆ ಮಾಡೋದಾಗಿ ಹೇಳಿಕೊಂಡಿದ್ರು. ದೇವಿ ಮುಂದೆ ಧ್ಯಾನ ಮಾಡುವ ಫೋಟೋಗಳನ್ನೂ ಸಹ…
ಭಾರತದಲ್ಲಿ ಇನ್ಮುಂದೆ ನಿಮ್ಗೆ ಸಿಗಲಿದೆ ಇ-ಪಾಸ್‌ಪೋರ್ಟ್. ಇದು ನೆಕ್ಸ್ಟ್ ಜನರೇಷನ್ ಪಾಸ್‌ಪೋರ್ಟ್ ಆಗಿದ್ದು, ಈಗಿನಿಂದ ಹೊಸದಾಗಿ ಅರ್ಜಿ ಸಲ್ಲಿಸುವ ಎಲ್ಲ ಅರ್ಜಿದಾರರಿಗೂ ಇ-ಪಾಸ್‌ಪೋರ್ಟ್ ಮಾತ್ರ ನೀಡಲಾಗ್ತಿದೆ. ಪ್ರತಿ ಇ-ಪಾಸ್‌ಪೋರ್ಟ್‌ನಲ್ಲಿ ಅತ್ಯಂತ ಸುರಕ್ಷಿತ ರೇಡಿಯೊ ಫ್ರೀಕ್ವೆನ್ಸಿ ಐಡೆಂಟಿಫಿಕೇಷನ್ ಚಿಪ್ ಮತ್ತು ಆಂಟೆನಾ ಅಳವಡಿಸಲಾಗಿದೆ. ಈ ಚಿಪ್‌ನಲ್ಲಿ ಅರ್ಜಿದಾರರ ಫೋಟೋ, ಫಿಂಗರ್‌ಪ್ರಿಂಟ್, ಇತರ ಬಯೊಮೆಟ್ರಿಕ್ ಮಾಹಿತಿ, ವೈಯಕ್ತಿಕ ವಿವರಗಳು ಎಲ್ಲವನ್ನೂ ಎನ್‌ಕ್ರಿಪ್ಟೆಡ್ ಮತ್ತು ಡಿಜಿಟಲ್ ಸಿಗ್ನೇಚರ್ ಸಹಿತ ಸಂಗ್ರಹಿಸಲಾಗುತ್ತೆ. ಇದ್ರಿಂದ ಏರ್‌ಪೋರ್ಟ್‌ನಲ್ಲಿ ನಿಮ್ಮ ಸಮಯ ವ್ಯರ್ಥವಾಗೋದಿಲ್ಲ. ಕೇವಲ 3-4 ಸೆಕೆಂಡ್‌ಗಳಲ್ಲಿ ಪಾಸ್‌ಪೋರ್ಟ್ ಸ್ಕ್ಯಾನ್ ಆಗುತ್ತೆ. ಅಲ್ಲದೇ ಇಮಿಗ್ರೇಷನ್ ಕೌಂಟರ್‌ಗಳಲ್ಲಿ ಕ್ಯೂ ಕೂಡ ಕಡಿಮೆಯಾಗುತ್ತೆ.ಇನ್ನು, ಫಿಸಿಕಲ್ ಪಾಸ್‌ಪೋರ್ಟ್‌ಗಳಿಗೂ ಕೂಡ ಮಾನ್ಯತೆ ಇದೆ. ವ್ಯಾಲಿಡಿಟಿ ಎಕ್ಸ್‌ಪೈರ್ ಆಗುವವರೆಗೂ ಅವುಗಳನ್ನ ಬಳಸ್ಬಹುದು. ಈ ಹೊಸ ತಲೆಮಾರಿನ ಪಾಸ್‌ಪೋರ್ಟ್‌ಗಳ ಮೂಲಕ ವಂಚನೆಯನ್ನು ಬಹುತೇಕ ಶೂನ್ಯಕ್ಕೆ ಇಳಿಸುವ ಗುರಿಯನ್ನ ಸರ್ಕಾರ ಹೊಂದಿದೆ. ಪಾಸ್‌ಪೋರ್ಟ್ ತಿರುಚುವಿಕೆ, ಡೂಪ್ಲಿಕೇಟ್ ತಯಾರಿಕೆ ಅಸಾಧ್ಯ. ಯಾಕಂದ್ರೆ ಅರ್ಜಿ ಸಲ್ಲಿಸುವಾಗ್ಲೇ ಕೇಂದ್ರೀಯ ಸರ್ವರ್‌ನಲ್ಲಿ ಬಯೊಮೆಟ್ರಿಕ್ ಪರಿಶೀಲನೆ ಮಾಡಲಾಗುತ್ತೆ. ಇದ್ರಿಂದ…
ಇನ್ಮುಂದೆ ಸಿಕ್ ಸಿಕ್ಕಲ್ಲಿ ಕಸ ಸುರ್ದು ಬೆಂಕಿ ಹಚ್ಚಿದ್ರೆ ಜೈಲುಪಾಲಾಗ್ತೀರಾ ಹುಷಾರ್! ಯಾಕಂದ್ರೆ ಇದೀಗ ಕಸಕ್ಕೆ ಬೆಂಕಿ ಹಾಕುವವರ ಮೇಲೆ ಎಫ್ಐಆರ್ ಫೈಲ್ ಮಾಡಿ ಜೈಲಿಗೆ ಕಳಿಸಲು ಸಿದ್ದತೆ ಮಾಡಿಕೊಳ್ಳಲಾಗ್ತಿದೆ. ಈ ಬಗ್ಗೆ ಬೆಂಗಳೂರು ಘನ ತ್ಯಾಜ್ಯ ನಿರ್ವಹಣೆ ನಿಗಮದ ಅಧಿಕಾರಿಗಳು ಖಡಕ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಎಲ್ಲೆಂದ್ರಲ್ಲಿ ಕಸಕ್ಕೆ ಬೆಂಕಿ ಹಚ್ಚುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಇದನ್ನು ತಡೆಗಟ್ಟಲು BSWML ಕಠಿಣ ಕ್ರಮಕ್ಕೆ ಮುಂದಾಗಿದ್ದು, ಒಂದು ವೇಳೆ ಕಸ ಸುರಿದು ಬೆಂಕಿ ಹಾಕಿದರೆ ಮೊದಲು ದಂಡ ಪ್ರಯೋಗ ಮಾಡಲಿದೆ. ನಂತರ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಿದೆ. ಕಸ ಸುಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ಘನತ್ಯಾಜ್ಯ ಘಟಕದ ಹೆಲ್ತ್ ಇನ್ಸ್ಪೆಕ್ಟರ್ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ.ಎಲ್ಲೆಂದರಲ್ಲಿ ಕಸ ಸುರಿದು ಬೆಂಕಿ ಹಚ್ಚುವವರ ವಿಡಿಯೋ ಮಾಡಿ ಕ್ರಿಮಿನಲ್ ಮೊಕದ್ದಮೆ ಹೂಡಿ, ಪುರಾವೆಗಳ ಅಧಾರದ ಮೇಲೆ ಪರಿಸರ ಸಂರಕ್ಷಣಾ ಕಾಯ್ದೆ ಅಡಿ ಕೇಸ್ ದಾಖಲಿಸಿ. ವಾಯು ಮಾಲಿನ್ಯ ನಿಯಂತ್ರಣ ಕಾಯ್ದೆ 1981 ಸೆಕ್ಷನ್ 5ರ ಅಡಿ…
ದೊಡ್ಮನೆ ಅಖಾಡಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯಿಂದ ಹೊಸ ಟ್ವಿಸ್ಟ್ ಕೊಟ್ಟದ ಬಿಗ್‌ಬಾಸ್, ಈಗ ಬಿಗ್ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಹೊರ ಬರುತ್ತಾರೆ ಅನ್ನೋದೇ ದೊಡ್ಡ ಪ್ರಶ್ನೆ ಆಗಿತ್ತು. ಎಲ್ಲರೂ ಕೂಡ ಅವರದ್ದೇ ಆಟವನ್ನು ಆಡುತ್ತಿದ್ದಾರೆ ಹೀಗಾಗಿ ಯಾರು ಹೊರ ಬರುತ್ತಾರೆ ಅಂತ ಊಹಿಸಲು ಕಷ್ಟವಾಗಿತ್ತು ಆದ್ರೆ ಇದೀಗ ಆ ಎಲ್ಲಾ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಜಾಹ್ನವಿ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಅಷ್ಟಕ್ಕೂ ಜಾನ್ವಿ ಔಟ್ ಆಗೋಕೆ ಕಾರಣವೇನು? ಅನ್ನೋದನ್ನ ನೋಡೋಣ ಬನ್ನಿ ಬಿಗ್‌ಬಾಸ್ ಮನೆಗೆ 5 ಮಂದಿ ಅತಿಥಿಗಳ ಪ್ರವೇಶದಿಂದ ಬಿಗ್ ಹೌಸ್ ಫೈಟ್ ರಿಂಗ್ ಆಗಿತ್ತು. ಮನೆ ಮಂದಿ ಗಿಲ್ಲಿಯದ್ದು ತಪ್ಪು ಅಂದ್ರೆ, ಕೆಲ ಸ್ಪರ್ಧಿಗಳು ಗಿಲ್ಲಿ ಪರ ಬ್ಯಾಟ್ ಬೀಸಿದರು. ಪ್ರಸ್ತುತ ಬಿಗ್ ಹೌಸ್‌ಗೆ ಇಬ್ಬರ ವೈಲ್ಡ್ ಕಾರ್ಡ್ ಎಂಟ್ರಿ ಆಗಿದೆ. ಹಿಂದಿನ ಸೀಸನ್‌ನ ಸ್ಪರ್ಧಿಯಾಗಿದ್ದ ರಜತ್ ಮತ್ತು ಚೈತ್ರಾ ದೊಡ್ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ.. ಇನ್ನು ಈ…
ಬೆ, ನ.30 : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಸ್ಯಾಂಡಲ್ ವುಡ್ ಹಿರಿಯ ನಟ ಎಂ.ಎಸ್.ಉಮೇಶ್(80 ವರ್ಷ) ಅವರು ಭಾನುವಾರ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದಾಗಿ ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಉಮೇಶ್ ಅವರು, ಚಿಕಿತ್ಸೆ ಫಲಕಾರಿಯಾಗದೇ ಕಿದ್ವಾಯಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. “ಅಯ್ಯಯ್ಯೋ ಇವ್ರು ನನ್ನ ಅಪಾರ್ಥ ಮಾಡ್ಕೊಂಡ್ಬಿಟ್ರಲ್ಲ”… ಎನ್ನುವ ಡೈಲಾಗ್ ಮೂಲಕವೇ ಕನ್ನಡ ಚಿತ್ರ ರಸಿಕರ ಮನ ಗೆದ್ದಿದ್ದರು. ಕಳೆದ ಕೆಲವು ದಿನಗಳಿಂದ ಅವರಿಗೆ ತೀವ್ರ ಅನಾರೋಗ್ಯ ಉಂಟಾಗಿತ್ತು. ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿ ಆಗದೇ ಅವರು ಮೃತರಾಗಿದ್ದಾರೆ. ಉಮೇಶ್ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ಅನೇಕ ಕಲಾವಿದರು ಹೋಗಿ ಮಾತನಾಡಿಸಿದ್ದರು. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದರು. ಆದರೆ ಪ್ರಾರ್ಥನೆ ಫಲಿಸಿಲ್ಲ. ಚಿಕಿತ್ಸೆ ಫಲಕಾರಿ ಆಗದೇ ಎಂ.ಎಸ್. ಉಮೇಶ್ ಅವರು ನಿಧನರಾಗಿದ್ದಾರೆ. ಎಂ.ಎಸ್. ಉಮೇಶ್ ಮೈಸೂರಿನಲ್ಲಿ ಏಪ್ರಿಲ್ 22, 1945ರಲ್ಲಿ ಜನಿಸಿದ್ದ ಅವರು ರಂಗಭೂಮಿ ಮತ್ತು ಚಲನಚಿತ್ರ ನಟರಾಗಿ 1948ರಿಂದ ಸಕ್ರಿಯರಾಗಿದ್ದರು. ಮಕ್ಕಳ ರಾಜ್ಯ, ಭಾಗ್ಯವಂತರು, ಕಿಲಾಡಿ…
ಬೆ, ನ.29 : ಕಾಂಗ್ರೆಸ್ ಹೈಕಮಾಂಡ್ ನಾಯಕರ ಸೂಚನೆಯಂತೆ ಇಂದು ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿ, ನಂತರ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವಿನ ಪವರ್ ಶೇರಿಂಗ್ ಫೈಟ್‌ಗೆ ತಾತ್ಕಾಲಿಕವಾಗಿ ಕಡಿವಾಣ ಹಾಕಲಾಗಿದೆ ಎಂಬ ಸತ್ಯವನ್ನು ಸ್ವತಃ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರೇ ಬಹಿರಂಗ ಪಡಿಸಿದ್ದಾರೆ. ಹೈಕಮಾಂಡ್ ಸೂಚನೆಯಂತೆ ಇನ್ನು ಮೂರು ತಿಂಗಳು ಮುಂದೂಡಿಕೆಯಾಗಿದೆ ಎಂದು ಡಿಸಿಎಂ ಒಪ್ಪಿಕೊಂಡಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಡಿಸಿಎಂ ಹೈಕಮಾಂಡ್ ಇನ್ನು ಮೂರು ತಿಂಗಳ ಕಾಲ ಕಾಯಲು ಹೇಳಿದೆ, ಅಲ್ಲಿಯವರೆಗೆ ಕಾಯುತ್ತೇನೆ ಎಂಬ ಸ್ಫೋಟಕ ಹೇಳಿಕೆ ನೀಡಿ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಿದ್ದಾರೆ.. ಇನ್ನು, ಡಿಸಿಎಂ ಡಿಕೆಶಿ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ಅನೇಕ ದಿನಗಳಿಂದ ಹಾಲಿ ಕಾಂಗ್ರೆಸ್ ಶಾಸಕರ ಬಾಯಿಂದ ಬರುತ್ತಿದ್ದ ನವೆಂಬರ್ ಕ್ರಾಂತಿಗೆ ತುಸು ಬ್ರೇಕ್ ಸಿಕ್ಕಿದ್ದು, ಅದು ಜನವರಿಯಲ್ಲಿ ಮತ್ತೆ ಸಿಡಿಯುವ ಸಾಧ್ಯತೆಗಳೇ ಹೆಚ್ಚಿವೆ. ಬೆಳಗಾವಿಯ ಸುವರ್ಣಸೌಧದಲ್ಲಿ ಇದೇ ಡಿ.08 ರಿಂದ ನಡೆಯಲಿರುವ ಚಳಿಗಾಲ ಅಧಿವೇಶನದ ವೇಳೆ ಬಿಜೆಪಿ ಹಾಗೂ…
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ವಿರುದ್ಧ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೆಚ್ಚಾದ ಬೆನ್ನಲ್ಲೇ ವಿಷಾದ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ನ್ಯಾಯಾಧೀಶ ಸಂತೋಷ್ ಹೆಗ್ಡೆ ಅವರು ಖಾಸಗಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿಗೆ ಸನ್ಮಾನ ಮಾಡಿದ್ದರು. ಕಾರ್ಯಕ್ರಮದಲ್ಲಿ ಸಂತೋಷ್ ಹೆಗ್ಡೆ ಅವರು, ಪುನೀತ್ ಕೆರೆಹಳ್ಳಿಗೆ ಶಾಲು ಪೇಟ ಹೊದಿಸಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿದ್ದರು. ಇದರ ಫೋಟೋಗಳನ್ನು ಪುನೀತ್ ಕೆರೆಹಳ್ಳಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಕಂಡ ನೆಟ್ಟಿಗರು ಸಂತೋಷ್ ಹೆಗ್ಡೆ ಅವರನ್ನು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆ ಹೊಂದಿರುವ ವ್ಯಕ್ತಿಗೆ ಸನ್ಮಾನ ಮಾಡಿದ್ದೀರಿ. ಆತನ ಹಿನ್ನೆಲೆ ಏನು ಅಂತಾ ಗೊತ್ತಿರಲಿಲ್ವಾ ಎಂದು ಪ್ರಶ್ನಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಸಂತೋಷ್ ಹೆಗ್ಡೆ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಅರ್ಥಪೂರ್ಣ ಕಾರ್ಯಕ್ರಮ ಎಂದು ತಿಳಿದು ನಾನು ಹೋಗಿದ್ದೆ, ಅಲ್ಲಿ ಯಾರಿಗೆ ಪ್ರಶಸ್ತಿ ಕೊಡುತ್ತಿದ್ದೇನೆ…