Subscribe to Updates
Get the latest creative news from FooBar about art, design and business.
Author: Mahanthesha
ಬೆಂಗಳೂರು, ಡಿ.15 : ವಯೋಸಹಜ ಖಾಯಿಲೆಯಿಂದ ಭಾನುವಾರ ನಿಧನರಾಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಹಾಗೂ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಂತ್ಯಕ್ರಿಯೆಯನ್ನು ದಾವಣಗೆರೆ ನಗರದ ಆನೆಕೊಂಡದ ಬಳಿ ಇರುವ ಶಾಮನೂರು ಮನೆತನದ ಕಲ್ಲೇಶ್ವರ ರೈಸ್ ಮಿಲ್ ಆವರಣದಲ್ಲಿ ಪಂಚಪೀಠ ಹಾಗೂ ವಿವಿಧ ಜಗದ್ಗುರುಗಳ ಸಮ್ಮುಖದಲ್ಲಿ ವೀರಶೈವ ಲಿಂಗಾಯತ ಸಂಪ್ರದಾಯದ ವಿಧಿವಿಧಾನಗಳಂತೆ ಕ್ರಿಯಾ ಸಮಾಧಿ ನಿರ್ಮಿಸಿ ಅಂತ್ಯಸಂಸ್ಕಾರ ನೇರವೇರಿಸಲಾಗಿದೆ. ನಗರದ ಎಂಸಿಸಿ ಬಡಾವಣೆಯ ಬಿ ಬ್ಲಾಕ್‌ನಿಂದ ಹೊರಟ ಮೆರವಣಿಗೆಯಲ್ಲಿ ಭಜನೆ ತಂಡಗಳು ಭಕ್ತಿ ಗೀತೆ ಹಾಡಿದವು. ಪಾರ್ಥಿವ ಶರೀರದ ಕೈವಲ್ಯಕ್ಕೆ ಪುತ್ರ ಹಾಗೂ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಹೆಗಲು ಕೊಟ್ಟಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ಸಾಲಾಗಿ ನಿಂತಿದ್ದ ಅಪಾರ ಅಭಿಮಾನಿಗಳು, ಸಾರ್ವಜನಿಕರು, ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಹೂಹಾರ ಹಾಕಿ ಗೌರವ ಸಲ್ಲಿಸಿ ತಮ್ಮ ನೆಚ್ಚಿನ ನಾಯಕನಿಗೆ ಕಂಬನಿ ಮಿಡಿದರು. ಶಾಮನೂರು ರಸ್ತೆ, ಗುಂಡಿ ವೃತ್ತ, ಚರ್ಚ್ ರಸ್ತೆ, ರಾಮ್ ಅಂಡ್ ಕೋ ವೃತ್ತ, ಎವಿಕೆ ಕಾಲೇಜು ರಸ್ತೆಯ…
ಬೆಂಗಳೂರು: ವಿಶೇಷ ಚೇತನ ಮಕ್ಕಳ ಬಾಳಲ್ಲಿ ಸಂತಸ ಮೂಡಲಿ ಎಂಬ ನಿಟ್ಟಿನಲ್ಲಿ ಬೈಕ್ ಮತ್ತು ಜೀಪ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಶ್ ಫೌಂಡೇಶನ್ ಸಂಸ್ಥಾಪಕರಾದ ಗಾಯತ್ರಿ ಹೇಳಿದರು. ನಗರದಲ್ಲಿ ಸ್ಪರ್ಶ್ ಫೌಂಡೇಶನ್, ಹಸಿರೋತ್ಸವ ಫೋರಂ ಮತ್ತು ಸುದಯ ಫೌಂಡೇಶನ್ ಸಹಯೋಗದೊಂದಿಗೆ ಸೋರ್ ಬೇರಿ ಹೋಟೆಲ್ ನಿಂದ ಆರಂಭವಾಗಿ ಹಾಲಿಡೇ ಇನ್ ಹೋಟೆಲ್ ವರೆಗೆ “ಸಂತಾ ರೈಡ್ ಮತ್ತು ಡ್ರೈವ್” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಗಾಯತ್ರಿ ಅವರು, ನಾವು ವಿಶೇಷ ಚೇತನವುಳ್ಳ ಮಕ್ಕಳ ಶಿಕ್ಷಣ, ಚಿಕಿತ್ಸೆ ಮತ್ತು ಒಟ್ಟಾರೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸಿ ಈವರೆಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಅದರಂತೆ ಇಂದು ಕೈಗೊಂಡ ಸಂತಾ ರೈಡ್ ಕೇವಲ ಆಯೋಜನೆಯಲ್ಲ, ಜನರಲ್ಲಿ ಅರಿವು ಮೂಡಿಸಲು ಮತ್ತು ಮಕ್ಕಳಿಗೆ ಅರ್ಥಪೂರ್ಣವಾಗಿ ಬೆಂಬಲ ನೀಡಲು ಸಮುದಾಯವನ್ನು ಪ್ರೋತ್ಸಾಹಿಸುವ ಒಂದು ಮಾರ್ಗವಾಗಿದೆ ಎಂದರು. ಹಸಿರೋತ್ಸವ ಫೋರಂ ನ ಸಂಸ್ಥಾಪಕರಾದ ಆರತಿ ಮಾತನಾಡಿ, ಈ ರೀತಿಯ ಕಾರ್ಯಕ್ರಮಗಳ ಮೂಲಕ ನಾವು ವಿಶೇಷ ಚೇತನವುಳ್ಳ ಮಕ್ಕಳಿಗೆ…
ಬೆಂಗಳೂರು. ಡಿ.15 : ಕರ್ನಾಟಕದ ಹೃದಯ ಭಾಗವಾದ ದಾವಣಗೆರೆ ಜಿಲ್ಲೆಯ ಧಣಿ, ಕೊಡುಗೈ ದಾನಿ ಎಂತಲೇ ಖ್ಯಾತರಾದ ಉದ್ಯಮಿ, ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಹಾಗೂ ಶಾಸಕರಾದ ಡಾ.ಶಾಮನೂರು ಶಿವಶಂಕರಪ್ಪ(94) ಭಾನುವಾರ(ಡಿ.14) ಸಂಜೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶಾಮನೂರು ಶಿವಶಂಕರಪ್ಪ ಅವರಿಗೆ ಕಳೆದೊಂದು ತಿಂಗಳಿಂದ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಕರ್ನಾಟಕದ ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದ ನಾಯಕರು. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಾತ್ರವಲ್ಲದೇ 94 ವರ್ಷದ ಶಾಮನೂರು ಶಿವಶಂಕರಪ್ಪ ಅವರು ಭಾರತದಲ್ಲೇ ಹಿರಿಯ ಶಾಸಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆ ಭೇಟಿ ನೀಡಿ ಶಿವಶಂಕರಪ್ಪ ಅವರ ಆರೋಗ್ಯ ಸ್ಥಿತಿ ವಿಚಾರಿಸಿ ವೈದ್ಯರಿಂದ ಮಾಹಿತಿ ಪಡೆದಿದ್ದರು. ಶಾಮನೂರು ಶಿವಶಂಕರಪ್ಪ ಅವರ ಆರೋಗ್ಯ ಸುಧಾರಣೆಯಾಗಲಿ ಎಂದು ದಾವಣಗೆರೆ ಸೇರಿದಂತೆ ವಿವಿಧೆಡೆ ಅಭಿಮಾನಿಗಳಿಂದ ಪ್ರಾರ್ಥನೆ ನೆರವೇರಿತ್ತು. ದುರದೃಷ್ಟವಶಾತ್ ನಿನ್ನೆ ಬೆಂಗಳೂರಿನ ಖಾಸಗಿ…
ತುಮಕೂರು, ಡಿ.14 : ಕೊರಟಗೆರೆಯ ನೇಗಿಲ ಸಿದ್ಧ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ (ಎಫ್‌ಪಿಸಿಎಲ್) ಪ್ರತಿಷ್ಠಿತ ಸಿಐಐ ಎಫ್‌ಪಿಓ ಉತ್ಕೃಷ್ಟತಾ ಪ್ರಶಸ್ತಿಗಳು 2025 ರಲ್ಲಿ ಮೌಲ್ಯವರ್ಧನೆ ಮತ್ತು ಬ್ರ್ಯಾಂಡಿಂಗ್ ವಿಭಾಗದಲ್ಲಿ ರನ್ನರ್-ಅಪ್ ಪ್ರಶಸ್ತಿಗೆ ಭಾಜನವಾಗಿದೆ. ಈಶ ಔಟ್‌ರೀಚ್‌ನ ಬೆಂಬಲದೊಂದಿಗೆ, ನೇಗಿಲ ಸಿದ್ದ ರೈತ ಉತ್ಪಾದಕ ಸಂಸ್ಥೆಯು ಕೊರಟಗೆರೆಯಲ್ಲಿ ಮೊದಲ ಹುಣಸೆಹಣ್ಣು ಸಂಸ್ಕರಣಾ ಘಟಕವನ್ನು ಪರಿಚಯಿಸಿದ್ದಕ್ಕಾಗಿ ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡಿದೆ.ಏಕರೂಪದ ಶುದ್ಧೀಕರಣ ಮತ್ತು ಶ್ರೇಣೀಕರಣವನ್ನು ಖಚಿತಪಡಿಸುವ ಮೂಲಕ ಉತ್ಪನ್ನದ ಗುಣಮಟ್ಟವನ್ನು ಹೆಚ್ಚಿಸುವ ಜೊತೆಗೆ, ಯಾಂತ್ರೀಕರಣದ ಮೂಲಕ ಕಾರ್ಮಿಕ ವೆಚ್ಚವನ್ನು ಕಡಿಮೆ ಮಾಡಿ ಮತ್ತು ಸಂಸ್ಕರಣೆ ಹಾಗೂ ಪ್ಯಾಕೇಜಿಂಗ್‌ನಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಮಹಿಳೆಯರು ಮತ್ತು ಯುವಕರಿಗೆ ಹೊಸ ಜೀವನೋಪಾಯದ ಅವಕಾಶಗಳನ್ನು ತೆರೆದಿದೆ. ಸಂಸ್ಥೆಯ ಅಧ್ಯಕ್ಷ ದೊಡ್ಡಯ್ಯ, ನಿರ್ದೇಶಕ ರಮೇಶ್ ಎಂ.ಎನ್ ಮತ್ತು ಈಶ ಔಟ್‌ರೀಚ್‌ನ ಸ್ವಾಮಿ ಕೇದಾರ ಅವರು ಸಂಸ್ಥೆಯ ಪರವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ ಈಶ ಔಟ್‌ರೀಚ್‌ನ ಎಫ್‌ಪಿಓಗಳ ಯೋಜನಾ ನಿರ್ದೇಶಕ ಆರ್. ವೆಂಕಟ್ ರಸ ಮಾತನಾಡಿ, ಈಶ ಔಟ್‌ರೀಚ್ ನೇಗಿಲ ಸಿದ್ಧ ಎಫ್‌ಪಿಓ…
ಹುಬ್ಬಳ್ಳಿ, ಡಿ.14 : ಬಸವರಾಜ್ ಹೊರಟ್ಟಿ ಹಾಗೂ ನನ್ನ ನಡುವೆ ನಾಲ್ಕು ದಶಕಗಳ ಸ್ನೇಹವಿದೆ. ಆಡಂಬರವಿಲ್ಲದ ಸ್ನೇಹಜೀವಿಯಾಗಿರುವ ಅವರು ಶಿಕ್ಷಕರ ಕ್ಷೇತ್ರದಿಂದ ಎಂಟು ಬಾರಿ ಶಾಸಕರಾಗಿದ್ದು, ಶಿಕ್ಷಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ ಸದಸ್ಯರಾಗಿ 45 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಶನಿವಾರ ಶ್ರೀ ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ವತಿಯಿಂದ ಹುಬ್ಬಳ್ಳಿ ನಗರದ ನೆಹರು ಮೈದಾನದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಪಕ್ಷದವರೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ಹೊರಟ್ಟಿಯವರು ಅಜಾತಶತ್ರು. ನೇರ ನುಡಿಯ ದಿಟ್ಟ ವ್ಯಕ್ತಿತ್ವದ ರಾಜಕಾರಣಿಯಾಗಿದ್ದಾರೆ. 1980 ರಲ್ಲಿ ವಿಧಾನಪರಿಷತ್ತಿನ ಶಾಸಕರಾಗಿದ್ದ ಇವರೊಂದಿನ ನನ್ನ ಸ್ನೇಹ ನಾಲ್ಕು ದಶಕಗಳದ್ದು. 1983ರಲ್ಲಿ ಶಾಸಕರಾದ ನಂತರ ಹೊರಟ್ಟಿಯವರೊಂದಿಗೆ ಸ್ನೇಹ ಬೆಳೆಯಿತು. ಹಳ್ಳಿಗಾಡಿನ ನಂಟಿರುವ ಇಬ್ಬರೂ ಸಾಮಾನ್ಯ ಕುಟುಂಬದಿಂದ ಬಂದವರು. ಅಧಿಕಾರ ಮತ್ತು ಹುದ್ದೆಯೊಂದಿಗೆ ವ್ಯಕ್ತಿತ್ವದ ನಂಟು ಹೊಂದುವ ವರ್ಗ ಒಂದಾದರೆ, ಅಧಿಕಾರದ ಹಿರಿಮೆಯನ್ನು ಕಾಯ್ದುಕೊಳ್ಳುವ ವರ್ಗವಿದ್ದು, ಹೊರಟ್ಟಿಯವರದು ಎರಡನೇ…
ಬೆಂಗಳೂರು : ಈ ಸರ್ಕಾರ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ನಿಲ್ಲುತ್ತದೆ. ಈ ಕಾರಣಕ್ಕೆ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025ಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್‌ಗಳ ಪ್ರತಿನಿಧಿಗಳೊಂದಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಶನಿವಾರ ಸಂವಾದ ನಡೆಸಿ ಮಾತನಾಡಿದರು. ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಪತ್ರದಲ್ಲಿ ಎಚ್ಚರಿಕೆ ನೀಡಿದ್ದಾನೆ. ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ…
ಬೆಂಗಳೂರು : ಸ್ಯಾಂಡಲ್‌ವುಡ್‌ನ ʼಡಿ ಬಾಸ್ʼ ಅಂತಲೇ ಖ್ಯಾತಿ ಪಡೆದಿರುವ ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ʼದಿ ಡೆವಿಲ್ʼ ಚಿತ್ರ ಇಂದು (ಡಿ.11) ಬಿಡುಗಡೆಯಾಗಿದ್ದು, ಕರ್ನಾಟಕ ಸೇರಿದಂತೆ ಹೊರ ರಾಜ್ಯಗಳಲ್ಲಿಯೂ ಸಹ ಗಮನ ಸೆಳೆಯುತ್ತಿದೆ. ನಟ ದರ್ಶನ್ ಪ್ರಸ್ತುತ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಹೊರತಾಗಿಯೂ, ಈ ಚಿತ್ರ ತೆರೆ ಕಂಡಿದ್ದು, ಕನ್ನಡ ಚಿತ್ರರಂಗದಲ್ಲಿ ಈ ವರ್ಷದ ಅತೀದೊಡ್ಡ ಸಿನಿಮಾಗಳಲ್ಲಿ ಒಂದಾಗಿದೆ. ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಸ್ವತಃ ಅಭಿಮಾನಿಗಳೇ ಪ್ರಚಾರಕರಾಗಿ ತೊಡಗಿಸಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳಿಂದಾಗಿ ಅವರ ಅನುಪಸ್ಥಿತಿ ದಿ ಡೆವಿಲ್ ಚಿತ್ರದ ಪ್ರಚಾರದ ಮೇಲೆ ಯಾವುದೇ ಪರಿಣಾಮ ಬೀರದಂತೆ ಚಿತ್ರತಂಡ ಹಾಗೂ ಅಭಿಮಾನಿಗಳು ಮುತುವರ್ಜಿ ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ಟ್ರೇಲರ್ ವೀಕ್ಷಣೆ ಹಾಗೂ ಹಾಡುಗಳ ಮೂಲಕವೇ ಚಿತ್ರಕ್ಕೆ ಅಪಾರ ಪ್ರಮಾಣದ ಜನಪ್ರಿಯತೆ ಹರಿದು ಬಂದಿತ್ತು. ಡಿಸೆಂಬರ್ 6 ರಂದು ತೆರೆದ ಮುಂಗಡ ಬುಕಿಂಗ್‌ನಲ್ಲಿ…
ವ್ಯಕ್ತಿತ್ವದ ಆಟವಾದ ಬಿಗ್‌ಬಾಸ್ ಈಗ ರಣರಂಗದ ಅಖಾಡವಾದಂತೆ ಕಾಣುತ್ತಿದೆ. ಸವಾಲಿಗೆ ಸವಾಲ್.. ಏಟಿಗೆ ಎದುರೇಟು.. ಬಿಗ್‌ಬಾಸ್ ಮನೆಯನ್ನು ವಿಲನ್ ತನ್ನ ಹಿಡಿತಕ್ಕೆ ತಗೊಂಡಿದ್ದೇ ತಡ.. ಮನೆಯ ವಾತಾವರಣವೇ ಚೇಂಜ್ ಆಗಿದೆ.. ಶಾಂತಿಯಾಗಿದ್ದ ಮನೆಯಲ್ಲಿ ಕ್ರೋಧ, ವ್ಯಂಗ್ಯ, ಜಗಳ ತಾಂಡವವಾಡ್ತಿದೆ.. ಸ್ಪರ್ಧಿಗಳಂತೂ ಒಬ್ರಾದ ಮೇಲೊಬ್ರು ಮಾತಿನ ಮತಾಪು ಸಿಡಿಸಿ ಯುದ್ಧಕಾಂಡ ನಿರ್ಮಿಸಿದ್ದಾರೆ.. ಅಷ್ಟಕ್ಕೂ ಬಿಗ್‌ಬಾಸ್ ಮನೆಯಲ್ಲಿ ಏನಾಯ್ತು..? ವಾರದ ಮಧ್ಯದಲ್ಲೇ ಸ್ಪರ್ಧಿಗಳು ಸಿಡಿಮಿಡಿಗೊಳ್ತಿರೋದು ಯಾಕೆ..? ಬಿಗ್‌ಬಾಸ್ ಮನೆ ಅತಿಥಿಗಳು ಬಂದು ಹೊದ್ಮೇಲೆ ಕೊಂಚ ಶಾಂತವಾಗಿತ್ತು.. ಕಾಮಿಡಿ ಇರಿಟೇಟ್ ಆಗ್ತಿದೆ ಅಂದಿದ್ದಕ್ಕೆ ಗಿಲ್ಲಿ ಕೂಡ ಸ್ವಲ್ಪ ಸೈಲೆಂಟ್ ಆಗಿದ್ರು.. ಅತ್ತ ಅಶ್ವಿನಿ 2.O ಗೇಮ್‌ಪ್ಲ್ಯಾನ್.. ಖಿನ್ನತೆಯಲ್ಲಿ ಧ್ರುವಂತ್. ಗಿಲ್ಲಿಯ ಚಿಯರ್ ಡ್ಯಾನ್ಸರ್ ಅಗಿ ರಜತ್ ಹೀಗೆ ಉರಿದುರಿದು ಬೀಳಬೇಕಿದ್ದ ಘಟಾನುಘಟಿಗಳೇ ತಮ್ಮ ಆಟವನ್ನು ಮರೆತಿದ್ರು.. ಯಾವಾಗ ವೀಕೆಂಡ್ ಬಂತೋ ಕಿಚ್ಚ ಸುದೀಪ್ ಕೊಟ್ಟ ಎನರ್ಜಿ ಬೂಸ್ಟ್‌ನಿಂದಾಗಿ ದೊಡ್ಮನೆ ಮಂದಿಗೆ ಮತ್ತೆ ಶಕ್ತಿ ಬಂದಂತೆ ಕಾಣಿಸ್ತಿದೆ. ಬಿಗ್‌ಬಾಸ್ ಫಿನಾಲೆ ಸಮೀಪಿಸುತ್ತಿರುವ ಕಾರಣ ಎಲ್ಲರೂ ತಮ್ಮ ತಮ್ಮ…
ಬೆಂಗಳೂರು : ಮಹಿಳಾ ನೇತೃತ್ವದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ಬೆಳವಣಿಗೆಗೆ ತಂತ್ರಜ್ಞಾನ ಅಳವಡಿಕೆ ಮತ್ತು ನಾವೀನ್ಯತೆ ಅತ್ಯಗತ್ಯ ಎಂದು ಬೆಂಗಳೂರಿನ ಎಂಎಸ್‌ಎಂಇ-ಡಿಎಫ್‌ಒ ಜಂಟಿ ನಿರ್ದೇಶಕ ಹಾಗೂ ಕಚೇರಿ ಮುಖ್ಯಸ್ಥ ಐಇಡಿಎಸ್ ದೇವರಾಜ್.ಕೆ ಹೇಳಿದರು. ಎಂಎಸ್‌ಎಂಇ-ಡಿಎಫ್‌ಒ (MSME DFO) ಬೆಂಗಳೂರು, ಉಬುಂಟು ಮಹಿಳಾ ಉದ್ಯಮಿ ಸಂಘಗಳ ಒಕ್ಕೂಟದ ಸಹಯೋಗದೊಂದಿಗೆ ನಗರದ ಆಡಳಿತ ಸಂಶೋಧನಾ ಸಂಸ್ಥೆ, ಐಎಎಸ್ ಆಫೀಸರ್ಸ್ ಅಸೋಸಿಯೇಷನ್ ಆವರಣದಲ್ಲಿ “ತಂತ್ರಜ್ಞಾನ ಅಳವಡಿಕೆ – ಎಂಎಸ್‌ಎಂಇ ಬೆಳವಣಿಗೆಗೆ ಸಬಲೀಕರಣ” ಕುರಿತು ಹಮ್ಮಿಕೊಂಡಿದ್ದ ಒಂದು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿಶೇಷ ಸಬ್ಸಿಡಿ, ಮರುಪಾವತಿ ಪ್ರಯೋಜನಗಳು, ಉಚಿತ ಕೌಶಲ್ಯ ಕಾರ್ಯಕ್ರಮಗಳು, ಪೇಟೆಂಟ್ ಹಾಗೂ ಸುಧಾರಿತ ತಂತ್ರಜ್ಞಾನಗಳಿಂದ ಮಹಿಳಾ ಉದ್ಯಮಿಗಳು ಹಿಂದೆಂದಿಗಿಂತಲೂ ಈಗ ಬಲವಾದ ಸಾಂಸ್ಥಿಕ ಬೆಂಬಲವನ್ನು ಪಡೆಯುತ್ತಿದ್ದಾರೆ. ಈ ಉಪಕ್ರಮಗಳು ಮಹಿಳೆಯರಿಗೆ ಸೂಕ್ಷ್ಮ ಘಟಕಗಳಿಂದ ಹಿಡಿದು ಸ್ಪರ್ಧಾತ್ಮಕ ಉತ್ಪಾದನಾ ಉದ್ಯಮಗಳಿಗೆ ಬದಲಾಗಲು, ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶಿಸಲು ಸಹಾಯ ಮಾಡುತ್ತವೆ. ಭಾರತದ…
ಬೆಂಗಳೂರು : ಲೋಕಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷಗಳ ಸದಸ್ಯರ ಮಧ್ಯೆ ತೀವ್ರ ವಾಗ್ವಾದ ನಡೆದಿದೆ. ಎಸ್‌ಐಆರ್ ಚರ್ಚೆ ವೇಳೆ ಲೋಕಸಭೆ ವಿಪಕ್ಷ ನಾಯಕ ಆರ್‌ಎಸ್‌ಎಸ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಸದನದ ಕೋಲಾಹಲಕ್ಕೆ ಕಾರಣವಾಯಿತು. ಚುನಾವಣಾ ಸುಧಾರಣೆಗಳ ಕುರಿತು ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಾಹುಲ್ ಗಾಂಧಿ ಮಾತನಾಡಿ, ಆರ್‌ಎಸ್‌ಎಸ್ ಸಮಾನತೆಯನ್ನು ನಂಬುವುದಿಲ್ಲ. ಅವರು ಶ್ರೇಣಿಕೃತ ವ್ಯವಸ್ಥೆಯನ್ನು ನಂಬುತ್ತಾರೆ. ತಾವು ಆ ಶ್ರೇಣಿಕೃತ ವ್ಯವಸ್ಥೆಯಲ್ಲಿ ಮೇಲಿರಬೇಕು ಎಂದು ಬಯಸುತ್ತಾರೆ ಎಂದು ಆರ್‌ಎಸ್‌ಎಸ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು. ಆರ್‌ಎಸ್‌ಎಸ್ ಹಾಗೂ ಬಿಜೆಪಿ ಸಮಾನ ಹಕ್ಕುಗಳ ನಿರ್ಮೂಲನೆಯ ಕಡೆಗೆ ಕಾರ್ಯ ನಿರ್ವಹಿಸುತ್ತಿವೆ. ಹೀಗಾಗಿ, ಚುನಾವಣಾ ಆಯೋಗದಂತಹ ಸಂಸ್ಥೆಗಳನ್ನು ಹಿಡಿತದಲ್ಲಿಟ್ಟುಕೊಳ್ಳಲು ಪ್ರಯತ್ನಿಸುತ್ತಿವೆ ಎಂದು ಆರೋಪಿಸಿದರು. ಮತದಾನವು ಪ್ರತಿಯೊಬ್ಬ ನಾಗರಿಕರು ಸಮಾನರು ಎಂಬುದನ್ನು ಸ್ಪಷ್ಟಪಡಿಸುತ್ತದೆ. ಆದರೆ, ಇದು ಆರ್‌ಎಸ್‌ಎಸ್‌ಗೆ ಸಿದ್ಧಾಂತಕ್ಕೆ ಪರ್ಯಾಯವಾಗಿದೆ, ಅವರು ಸಮಾನತೆಯನ್ನು ನಂಬುವುದಿಲ್ಲ. ಅವರು ಶ್ರೇಣೀಕೃತ ವ್ಯವಸ್ಥೆಯನ್ನು ನಂಬುತ್ತಾರೆ. ಈ ವ್ಯವಸ್ಥೆಯಲ್ಲಿ ತಾವೇ ಮೇಲೆ ಇರಬೇಕು ಎಂದು ನಂಬುತ್ತಾರೆ ಎಂದ…