Author: Mahanthesha

ಬಿಗ್ ಬಾಸ್ ಸೀಸನ್ 11 ಸ್ಪರ್ಧಿಯಾಗಿ ಜನಪ್ರಿಯತೆ ಪಡೆದ ನಟಿ ಯಮುನಾ ಶ್ರೀನಿಧಿ, ಈಗ “ಯಜಮಾನ” ಕನ್ನಡ ಧಾರಾವಾಹಿಯಲ್ಲಿ ಹೊಸ ಪಾತ್ರದಲ್ಲಿ ಪ್ರವೇಶಿಸುತ್ತಿದ್ದಾರೆ. ತಮ್ಮ ಮಿಂಚುವ ಅಭಿನಯ ಮತ್ತು ಪ್ರತಿಭೆಯಿಂದ ಪ್ರಸಿದ್ಧರಾದ ಯಮುನಾ, ಸುಮಿತ್ರಾ ಪಾತ್ರದ ಮೂಲಕ ಧಾರಾವಾಹಿಗೆ ಹೊಸ ಮಟ್ಟದ ನಾಟಕೀಯತೆ, ಕುತೂಹಲ ಮತ್ತು ರೋಮಾಂಚನವನ್ನು ತರಲು ಸಿದ್ಧರಾಗಿದ್ದಾರೆ. ಧಾರಾವಾಹಿಯಲ್ಲಿ, ಯಮುನಾ ಅಭಿನಯಿಸುತ್ತಿರುವ ಸುಮಿತ್ರಾ ಪಾತ್ರ— ಕುಟುಂಬದ ಶಾಂತಿ ಮತ್ತು ಏಕತೆಯನ್ನು ಬಲಪಡಿಸುವ ಅವಳ ಸೂಕ್ಷ್ಮ ಸಂವೇದನೆ ಕಥೆಗೆ ಹೊಸ ತಿರುವುಗಳನ್ನು ನೀಡುತ್ತವೆ. ವಿಶೇಷವಾಗಿ, ಧಾರಾವಾಹಿಯ ಖಳನಾಯಕಿಯಾದ ತುಳಸಿ, ತನ್ನ ಮಗ ಪ್ರಣವ್ ಜಾನ್ಸಿಯನ್ನು ಮದುವೆಯಾಗಬೇಕೆಂದು ಒತ್ತಾಯಿಸುವ ತುಳಸಿಯ ಯೋಜನೆಗಳು ಪ್ರೇಕ್ಷಕರನ್ನು ಕುತೂಹಲದ ಅಂಚಿನಲ್ಲಿ ಇಡುತ್ತವೆ. ಜೊತೆಗೆ ಜಾನ್ಸಿಯ ತಾಯಿ ಸುಮಿತ್ರಾಳನ್ನು ತುಳಸಿ ಗುಪ್ತವಾಗಿ ಬಂಧಿಸಿರುವುದು ಕಥೆಯ ರೋಚಕತೆ ಮತ್ತು ಭಾವನಾತ್ಮಕ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ. ತಾಯಿ ಸುಮಿತ್ರಾ ಮಗಳು ಝಾನ್ಸಿಯನ್ನು ಹೇಗೆ ಸೇರುತ್ತಾಳೆ? ಎಂಬುದು ಕಥೆಯ ಸ್ವಾರಸ್ಯ. ಯಮುನಾ ಶ್ರೀನಿಧಿಯ ಪ್ರವೇಶದೊಂದಿಗೆ, “ಯಜಮಾನ” ಧಾರಾವಾಹಿ ಹೊಸ ಎತ್ತರಕ್ಕೆ ಏರಲು…

Read More

ಬೆಂಗಳೂರು: ಡಿಸೆಂಬರ್‌ ಬಂತೆಂದರೆ ಕ್ರಿಸ್‌ಮಸ್‌ ಹಬ್ಬಕ್ಕೆ ಎಲ್ಲೆಡೆ ತಯಾರಿ ಆರಂಭ. ಈ ನಿಟ್ಟಿನಲ್ಲಿ ನಗರದ ಗೋಕುಲಂ ಹೋಟೆಲ್‌ನಲ್ಲಿ ಕ್ರಿಸ್‌ಮಸ್‌ ಟ್ರೀ ಗೆ ಲೈಟಿಂಗ್‌ ಮಾಡುವ ಮೂಲಕ ಹಬ್ಬದ ಆರಂಭವನ್ನು ಸೂಚಿಸಲಾಯಿತು. ಈ ವೇಳೆ ಇದೊಂದು ಒಗ್ಗಟ್ಟು ಮತ್ತು ಸಂಭ್ರಮದ ಹಬ್ಬ ಎಂದು ಗೋಕುಲಂ ಹೋಟೆಲ್‌ನ ಏರಿಯಾ ಜನರಲ್ ಮ್ಯಾನೇಜರ್ ಶಫೀ ಅಹ್ಮದ್ ಹೇಳಿದರು. ಕಾರ್ಯಕ್ರಮದ ವಿಶೇಷ ಅತಿಥಿಗಳಾದ ಮಾರ್ಕೊ ಮತ್ತು ಸಿಂಧೂರಿ ಅವರು ಕ್ರಿಸ್ಮಸ್ ವೃಕ್ಷಕ್ಕೆ ದೀಪಾಲಂಕಾರ ಮಾಡಿದ್ದು, ಈ ಆಚರಣೆಯ ಪ್ರಮುಖ ಆಕರ್ಷಣೆಯಾಗಿತ್ತು. ಹೋಟೆಲ್‌ನ ಸೇಲ್ಸ್ ಮತ್ತು ಮಾರ್ಕೆಟಿಂಗ್ ನಿರ್ದೇಶಕರಾದ ಸಚಿನ್ ಮುದ್ದಪ್ಪ ಮಾತನಾಡಿ, ಡಿಸೆಂಬರ್‌ ತಿಂಗಳಲ್ಲಿ ರಜಾದಿನಗಳು ಹೆಚ್ಚಿರುವ ಕಾರಣ ಪ್ರವಾಸ ಕೈಗೊಳ್ಳುವವರು ಹೆಚ್ಚಿರುತ್ತಾರೆ ಮತ್ತು ನಮ್ಮ ಹೋಟೆಲ್‌ಗೆ ಆಗಮಿಸುವವರು ಕೂಡ ಜಾಸ್ತಿ. ಹೀಗಾಗಿ ಹಬ್ಬದ ವಾತಾವರಣವನ್ನು ಸೃಷ್ಟಿಸುವಲ್ಲಿ ನಾವು ಹೆಚ್ಚು ಕಾರ್ಯನಿರತರಾಗಿರುತ್ತೇವೆ ಎಂದರು. ಕಲ್ಲೂರ್ ಸಿನಿಮಾಸ್, ಪೆನ್ ಎನ್ ಪೇಪರ್ ಸ್ಟುಡಿಯೋಸ್ ಹಾಗೂ ಸ್ಕ್ರೀನ್ ಫಸ್ಟ್ ಪ್ರೊಡಕ್ಷನ್ ಲಾಂಛನದಲ್ಲಿ ಪ್ರಶಾಂತ್ ಕಲ್ಲೂರ್ ಅವರು ನಿರ್ಮಿಸಿರುವ, ಪ್ರತಾಪ್ ಗಂಧರ್ವ…

Read More

ಬೆಂಗಳೂರು, ಡಿ.6 : ರಾಜಾಜಿನಗರದ ಇ.ಎಸ್.ಐ.ಸಿ ವೈದ್ಯಕೀಯ ಕಾಲೇಜು ಮತ್ತು ಮಾದರಿ ಆಸ್ಪತ್ರೆಯಲ್ಲಿ ಕನ್ನಡ ರಾಜ್ಯೋತ್ಸವವನ್ನು ವೈಭವದಿಂದ ಆಚರಿಸಲಾಯಿತು. ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಕನ್ನಡ ತಾಯಿಯ ಗೌರವವನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಕವಿ ಮತ್ತು ಲೇಖಕ ಬಿ.ಆರ್. ಲಕ್ಷ್ಮಣ್ ರಾವ್ ಮಾತನಾಡಿ, ಕನ್ನಡ ಕೇವಲ ಭಾಷೆಯಲ್ಲ, ಅದು ನಮ್ಮ ಸಂಸ್ಕೃತಿ, ನಮ್ಮ ಹೃದಯದ ನೋಟ, ನಮ್ಮ ಜೀವನದ ನಡಿಗೆ, ಯುವ ಜನಾಂಗ ಕನ್ನಡವನ್ನು ಅರ್ಥಮಾಡಿಕೊಂಡು ಅದರಲ್ಲಿ ಹೆಮ್ಮೆಯನ್ನು ಹೊತ್ತು ನಡೆಯಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಇ.ಎಸ್.ಐ.ಸಿ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯದ ಡೀನ್‌ ಡಾ.ಜಿತೇಂದ್ರ ಕುಮಾರ್ ಜೆ.ಎಂ ಮಾತನಾಡಿ, ಭಾಷೆ ಯಾವುದೇ ಸಮುದಾಯದ ಆತ್ಮ. ಕನ್ನಡ ನಮ್ಮ ನಾಡಿನ ನಾಡಿ, ಅದನ್ನು ಕಾಪಾಡುವುದು ಮತ್ತು ಯುವಪೀಳಿಗೆಯ ಜವಾಬ್ದಾರಿಯಾಗಿದೆ. ಅದರ ಬೌದ್ಧಿಕ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು. ಇ.ಎಸ್.ಐ.ಸಿ ವೈದ್ಯಕೀಯ ಅಧೀಕ್ಷಕ ಡಾ. ಪ್ರಸಾದ್ ಸಿ.ಜಿ.ಎಸ್ ಮಾತನಾಡಿ, ರಾಜ್ಯೋತ್ಸವವು ನಾಡಿನ…

Read More

ಬೆಂಗಳೂರು, ಡಿ.06 : ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಸುಸಜ್ಜಿತ Electric Rapid Transit (E-RT) ಯೋಜನೆ ಕುರಿತು ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ನಡೆದ ಸಭೆಯಲ್ಲಿ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಎಸ್‌ ಲಾಡ್‌ ಅವರು ಭಾಗವಹಿಸಿದ್ದರು. ಸಭೆಯಲ್ಲಿ ಯೋಜನೆಯ ಕುರಿತಾದ ತಾಂತ್ರಿಕ ಅಂಶಗಳು, ಕಾರಿಡಾರ್‌ಗಳು, ಹಣಕಾಸು ವ್ಯವಸ್ಥೆ ಸೇರಿದಂತೆ ಮತ್ತಿತರ ಅಂಶಗಳನ್ನು ಪ್ರಾತ್ಯಕ್ಷಿಕೆ ಮೂಲಕ ಮುಖ್ಯಮಂತ್ರಿಗಳಿಗೆ ಸಚಿವರು ವಿವರಿಸಿದರು. ಪ್ರಾತ್ಯಕ್ಷಿಕೆ ವೀಕ್ಷಿಸಿದ ಮುಖ್ಯಮಂತ್ರಿಗಳು, ಇನ್ನೂ ಹೆಚ್ಚಿನ ಮೌಲ್ಯಮಾಪನಕ್ಕಾಗಿ ಸಾರಿಗೆ ಮತ್ತು ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸುವಂತೆ HESS ಇಂಡಿಯಾ ಮತ್ತು ಎಸ್‌ಎಸ್‌ಬಿಗೆ ಸೂಚಿಸಿ ಈ ಪ್ರಸ್ತಾವನೆಯನ್ನು ಹೆಚ್ಚಿನ ಚರ್ಚೆ ಮತ್ತು ಅಗತ್ಯ ತೀರ್ಮಾನ ಕೈಗೊಳ್ಳಲು ಮುಂದಿನ ಸಂಪುಟ ಸಭೆಯ ಗಮನಕ್ಕೆ ತರುವುದಾಗಿ ತಿಳಿಸಿದರು. ಸಭೆಯಲ್ಲಿ ಹಾಜರಿದ್ದ ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಇ-ಆರ್‌ಟಿಯು ಇತರ ಸಾಂಪ್ರದಾಯಿಕ ಮೆಟ್ರೋಗೆ ಹೋಲಿಸಿದರೆ ಹೆಚ್ಚು ಆರ್ಥಿಕ ಪರಿಣಾಮಕಾರಿ ಹೇಗೆ ಎಂಬುದನ್ನು…

Read More

ಬೆಂಗಳೂರು : ಈ ದೇಶದಲ್ಲಿ ಬೆಕ್ಕುಗಳು ಬೀದಿಲಿ ಅಲೆದಾಡುವಂತಿಲ್ಲ. ಯಾವುದಾದರೂ ಬೆಕ್ಕು ಮನೆ ಹೊರಗಡೆ ಕಾಣಿಸಿಕೊಂಡ್ರೆ ಕಂಡಲ್ಲೇ ಗುಂಡಿಕ್ಕಿ ಕೊಲ್ಲಲಾಗ್ತಿದೆ. ಅಲ್ಲದೇ 2050ರ ವೇಳೆಗೆ ಒಂದೇ ಒಂದು ಬೆಕ್ಕು ಬೀದಿಯಲ್ಲಿಲ್ಲದಂತೆ ಮಾಡೋದು ಈ ದೇಶದ ಸರ್ಕಾರದ ಉದ್ದೇಶವಾಗಿದೆ. ಯಾಕಪ್ಪಾ ಬೆಕ್ಕುಗಳ ಮೇಲೆ ಇಷ್ಟೊಂದು ದ್ವೇಷ ಅಂತಾ ನಿಮಗೆ ಅನ್ನಿಸುತ್ತಿರಬಹುದು. ವಿಷಯ ಏನೆಂದರೆ, ಬೀದಿಬೆಕ್ಕುಗಳು ಆ ದೇಶದ ಬಯೋಡೈವರ್ಸಿಟಿಯನ್ನ ಹಾಳು ಮಾಡುತ್ತಿವೆಯಂತೆ. ಬೆಕ್ಕುಗಳ ಬುದ್ಧಿನೇ ಬೇಟೆಯಾಡೋದು, ಕಾದು ಹೊಂಚು ಹಾಕೋದು. ಇದರಿಂದ ಅಲ್ಲಿನ ಹಕ್ಕಿಗಳು, ಸಣ್ಣ ಪುಟ್ಟ ಪ್ರಾಣಿಗಳು ಸಾಯುತ್ತಿವೆ. ಎಷ್ಟೋ ಪಕ್ಷಿಗಳ ಪ್ರಜಾತಿಗಳು ಅಳಿವಿನ ಹಂತದಲ್ಲಿವೆ. ಇದಕ್ಕೆ ಮುಖ್ಯ ಕಾರಣವೇ ಬೀದಿಬೆಕ್ಕುಗಳಾಗಿವೆ. ಹೀಗಾಗಿ ನ್ಯೂಜಿಲ್ಯಾಂಡ್‌ ಸರ್ಕಾರ ಬೀದಿಬೆಕ್ಕುಗಳ ಮಾಸ್‌ ಕಿಲ್ಲಿಂಗ್‌ ಮಾಡ್ತಾ ಇದೆ. ಒಟ್ಟು 25 ಲಕ್ಷ ಬೀದಿಬೆಕ್ಕುಗಳು ನ್ಯೂಜಿಲ್ಯಾಂಡ್‌ನಲ್ಲಿವೆ. 2050ರ ವೇಳೆಗೆ ಈ ಬೆಕ್ಕುಗಳ ಅಸ್ತಿತ್ವವನ್ನ ನಾಶ ಮಾಡೋದಕ್ಕೆ ಸರ್ಕಾರ ಈಗಿನಿಂದಲೇ ಸಿದ್ಧತೆ ನಡೆಸಿದ್ದು, ಬೆಕ್ಕುಗಳ ಮಾರಣಹೋಮ ಮಾಡ್ತಿದೆ.2016ರಲ್ಲಿ ನ್ಯೂಜಿಲ್ಯಾಂಡ್‌ ಸರ್ಕಾರ ಪ್ರಿಡೇಟರ್‌ ಫ್ರೀ 2050 ಎಂಬ ಅಭಿಯಾನ ಆರಂಭಿಸಿತ್ತು.…

Read More

ಬೆಂಗಳೂರು, ಡಿ.04: ಯಾವುದೇ ಪರಿಸ್ಥಿತಿಯಲ್ಲಾದರೂ ಸರಿ ಮಹಿಳಾ ನೌಕರರು ಜಾತಿ ಸಂಘಗಳ ಆಧಾರದ ಮೇಲೆ ಸಂಘಟನೆ ಮಾಡಬೇಡಿ, ಮಹಿಳಾ ಶಕ್ತಿ ಆಧಾರದ ಮೇಲೆ ಸಂಘಟನೆ ಮಾಡಿ. ನಿಮ್ಮದು ಕೇವಲ ಒಂದೇ ಒಂದು ಸಂಘ ಇರಬೇಕು. ಅದು ಮಹಿಳಾ ಸಂಘವಾಗಿರಬೇಕು. ಇದು ನಾನು ನಿಮಗೆ ನೀಡುತ್ತಿರುವ ಸಲಹೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಗುರುವಾರ ನಡೆದ ಸರ್ಕಾರಿ ಮಹಿಳಾ ನೌಕರರ ಸಮ್ಮೇಳನ ಕಾರ್ಯಕ್ರಮದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತನಾಡಿದರು. ನಾನು ಬಂಗಾರಪ್ಪನವರ ಸರ್ಕಾರದಲ್ಲಿ ಸಚಿವನಾಗಿದ್ದಾಗಿನಿಂದ, ಅಂದರೆ 40 ವರ್ಷಗಳಿಂದ ಈ ಸಂಘವನ್ನು ಗಮನಿಸಿಕೊಂಡು ಬಂದಿದ್ದೇನೆ. ನಿಮ್ಮ ಒಗ್ಗಟ್ಟು ಬಿಡಬೇಡಿ. ಲಿಂಗಾಯತರ, ಹಿಂದುಳಿದ ವರ್ಗಗಳ, ಒಕ್ಕಲಿಗರ, ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಸಂಘ ಎಂದು ಜಾತಿ ಆಧಾರದ ಮೇಲೆ ಸಂಘಟನೆ ಮಾಡಬೇಡಿ. ಈ ಆಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದುಹಾಕಿ ಎಂದು ಕಿವಿಮಾತು ಹೇಳಿದರು. ಮಹಿಳೆಯರು ಕರುಣೆಯ ಕಡಲು, ಮಮತೆಯ ಮುಗಿಲು : “ಸಂಘಟನೆ ಬಹಳ ಮುಖ್ಯ. ಶಿಕ್ಷಣ ಇಲಾಖೆಯಲ್ಲಿ…

Read More

ಬೆಂಗಳೂರು : ಸಹಕಾರಿ ತತ್ವದಲ್ಲಿ ರೂಪಿತವಾಗಿರುವ ಭಾರತ್ ಟ್ಯಾಕ್ಸಿ ಇದೀಗ ಭಾರತದ ರೈಡ್ ಹೇಲಿಂಗ್ ಕ್ಷೇತ್ರಕ್ಕೆ ಅಡಿ ಇಟ್ಟಿದೆ. ಸೌರಾಷ್ಟ್ರ ಮತ್ತು ದೆಹಲಿಯಲ್ಲಿ ಇದರ ಪ್ರಾಯೋಗಿಕ ಸೇವೆ ಆರಂಭವಾಗಿದೆ. ಓಲಾ, ಊಬರ್, ರಾಪಿಡೋ ಪ್ರಾಬಲ್ಯ ಇರುವ ಈ ಸೆಕ್ಟರ್​ನಲ್ಲಿ ಭಾರತ್ ಟ್ಯಾಕ್ಸಿ ಅಡಿ ಬರುವ ಎಲ್ಲಾ ಸಲಕರಣೆ ಮತ್ತು ಸಿದ್ಧತೆ ಹೊಂದಿದೆ. ಇದು ಸಹಕಾರ ತತ್ವದಲ್ಲಿ ರೂಪಿತವಾಗಿರುವ ಪ್ಲಾಟ್​ಫಾರ್ಮ್ ಆಗಿದೆ. ಇದರಲ್ಲಿ ಡ್ರೈವರ್​ಗಳೇ ಮಾಲೀಕರು. ಅಮೂಲ್, ನಬಾರ್ಡ್, ಇಫ್ಕೋ ಮೊದಲಾದ ಎಂಟು ಪ್ರಮುಖ ಸಂಘಟನೆಗಳಿಂದ ಬೆಂಬಲಿತವಾಗಿರುವ ಭಾರತ್ ಟ್ಯಾಕ್ಸಿ ಪ್ಲಾಟ್​ಫಾರ್ಮ್‌ನಲ್ಲಿ ಆಟೊ, ಕ್ಯಾಬ್, ಬೈಕ್ ಟ್ಯಾಕ್ಸಿಗಳ ಸೇವೆ ಲಭ್ಯ ಇದೆ. ಈ ಪ್ಲಾಟ್​ಫಾರ್ಮ್​ಗೆ 51,000ಕ್ಕೂ ಅಧಿಕ ಡ್ರೈವರ್​ಗಳು ನೋಂದಣಿ ಮಾಡಿಕೊಂಡಿದ್ದಾರೆ. 2025ರ ಜೂನ್​ನಲ್ಲಿ ಆರಂಭವಾದ ಸಹಕಾರ ಟ್ಯಾಕ್ಸಿ ಕೋಆಪರೇಟಿವ್ ಲಿಮಿಟೆಡ್ ಸಂಸ್ಥೆಯ ಅಡಿಯಲ್ಲಿ ನಿರ್ಮಾಣವಾಗಿರುವ ಭಾರತ್ ಟ್ಯಾಕ್ಸಿ ಪೂರ್ಣ ಸಹಕಾರಿ ತತ್ವದಲ್ಲಿ ಆಪರೇಟ್ ಮಾಡುತ್ತದೆ. ನಮ್ಮ ಯಾತ್ರಿ ಪ್ಲಾಟ್​ಫಾರ್ಮ್ ರೀತಿಯಲ್ಲಿ ಭಾರತ್ ಟ್ಯಾಕ್ಸಿ ಕೂಡ ಝೀರೋ ಕಮಿಷನ್ ಮಾಡಲ್ ಅನುಸರಿಸುತ್ತದೆ. ಅಂದರೆ,…

Read More

ಬೆಂಗಳೂರು : ಭಾರತೀಯ ರೈಲ್ವೆ ಇಲಾಖೆ ತನ್ನ ಟಿಕೆಟ್ ವ್ಯವಸ್ಥೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ತತ್ಕಾಲ್ ಟಿಕೆಟ್‌ಗಳನ್ನು ಪಡೆಯುವುದು ಇನ್ನು ಮುಂದೆ ಮೊದಲಿನಂತೆ ಸುಲಭವಲ್ಲ, ಏಕೆಂದರೆ ರೈಲ್ವೆ ಇಲಾಖೆ ಹೊಸ ನಿಯಮವನ್ನು ಜಾರಿಗೆ ತರುತ್ತಿದ್ದು, ಅದು ಒಟಿಪಿ ಕಡ್ಡಾಯಗೊಳಿಸಲಾಗಿದೆ. ಭಾರತೀಯ ರೈಲ್ವೆ ತನ್ನ ಟಿಕೆಟ್ ವ್ಯವಸ್ಥೆಯನ್ನು ಹೆಚ್ಚು ಸುರಕ್ಷಿತ, ಪಾರದರ್ಶಕ ಮತ್ತು ದಲ್ಲಾಳಿ ರಹಿತಗೊಳಿಸುವ ನಿಟ್ಟಿನಲ್ಲಿ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇನ್ನು ಮುಂದೆ ರೈಲ್ವೆ ಕೌಂಟರ್‌ಗಳಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡಿಸಲು ಮೊಬೈಲ್ OTP ಕಡ್ಡಾಯವಾಗಲಿದೆ. OTP ಇಲ್ಲದೆ ಟಿಕೆಟ್ ಸಿಗುವುದಿಲ್ಲ. ಏಕೆ ಬಂತು ಈ ನಿಯಮ? :ತತ್ಕಾಲ್ ಟಿಕೆಟ್‌ಗಳು ಮಧ್ಯವರ್ತಿಗಳ ಕೈಗೆ ಬಿದ್ದು 3-4 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗುತ್ತಿದ್ದವು. ನಕಲಿ ಐಡಿ, ತಪ್ಪು ಮೊಬೈಲ್ ಸಂಖ್ಯೆಗಳು, ಒಬ್ಬರೇ ಹಲವು ಟಿಕೆಟ್‌ಗಳನ್ನು ಬುಕ್ ಮಾಡಿಸಿ ಕಪ್ಪು ಮಾರುಕಟ್ಟೆಗೆ ತಳ್ಳುವುದು ಸ್ವಾಭಾವಿಕವಾಗಿತ್ತು. ಇದಕ್ಕೆ ಕಡಿವಾಣ ಹಾಕಲು ರೈಲ್ವೆ ಈಗ OTP ಆಧಾರಿತ ವ್ಯವಸ್ಥೆಯನ್ನು ಕೌಂಟರ್ ತತ್ಕಾಲ್‌ಗೂ ವಿಸ್ತರಿಸಿದೆ. ಈಗಾಗಲೇ…

Read More

ಬೆಂಗಳೂರು : ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿಯ 53ನೇ ಏಕದಿನ ಶತಕ ಹಾಗೂ ರುತುರಾಜ್‌ ಗಾಯಕ್ವಾಡ್‌ ಸಿಡಿಲಬ್ಬರದ ಚೊಚ್ಚಲ ಶತಕಕ್ಕೆ ಸಾಂಘಿಕ ಬ್ಯಾಟಿಂಗ್‌ ಮೂಲಕ ಉತ್ತರ ನೀಡಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ 2ನೇ ಏಕದಿನ ಪಂದ್ಯದಲ್ಲಿ ಟೀಮ್‌ ಇಂಡಿಯಾವನ್ನು ಮಣಿಸಿದೆ. ಶಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 4 ವಿಕೆಟ್‌ಗಳಿಂದ ಭಾರತ ತಂಡವನ್ನು ಸೋಲಿಸುವ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸಮಬಲ ಸಾಧಿಸಿದೆ. ಇದರಿಂದಾಗಿ ಡಿಸೆಂಬರ್‌ 6ರ ಶನಿವಾರದಂದು ವಿಶಾಖಪಟ್ಟಣದಲ್ಲಿ ನಡೆಯಲಿರುವ ಸರಣಿಯ ಮೂರನೇ ಹಾಗೂ ನಿರ್ಣಾಯಕ ಪಂದ್ಯ ಕುತೂಹಲ ಮೂಡಿಸಿದೆ. ವಿರಾಟ್ ಕೊಹ್ಲಿ ಮತ್ತು ರುತುರಾಜ್ ಗಾಯಕ್ವಾಡ್ ಅವರ ಶತಕಗಳ ಹೊರತಾಗಿಯೂ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಸೋಲನುಭವಿಸಿದೆ. ಏಡೆನ್ ಮಾರ್ಕ್‌ರಮ್ ಅವರ ಅಮೋಘ ಶತಕದ ನೆರವಿನಿಂದ ದಕ್ಷಿಣ ಆಫ್ರಿಕಾ 4 ವಿಕೆಟ್‌ಗಳ ಜಯ ಸಾಧಿಸಿ, ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿದೆ. ಬುಧವಾರ…

Read More

ಬೆಂಗಳೂರು: ರಾಜ್ಯಸರ್ಕಾರದ ಮಹಿಳಾ ನೌಕರರಿಗೆ ತಿಂಗಳಿಗೆ ಒಂದು ಋತುಚಕ್ರ ರಜೆಯನ್ನು ಮಂಜೂರು ಮಾಡಿ ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ. ಈ ಸೌಲಭ್ಯ ತಕ್ಷಣದಿಂದಲೇ ಜಾರಿ ಮಾಡಲಾಗಿದೆ. ಋತುಚಕ್ರ ಹೊಂದಿರುವ 18 ವರ್ಷದಿಂದ 52 ವರ್ಷ ವಯಸ್ಸಿನ ಮಹಿಳಾ ಸರ್ಕಾರಿ ನೌಕರರಿಗೆ ಈ ರಜೆ ಅನ್ವಯವಾಗಲಿದೆ. ತಿಂಗಳಿಗೆ ಒಂದರಂತೆ ವರ್ಷಕ್ಕೆ ಒಟ್ಟು 12 ಋತುಚಕ್ರ ರಜೆಯನ್ನು ಪಡೆಯಬಹುದು. ಸಾಂದರ್ಭಿಕ ರಜೆಯನ್ನು ಮಂಜೂರು ಮಾಡುವ ಸಕ್ಷಮ ಪ್ರಾಧಿಕಾರವೇ ಈ ರಜೆಯನ್ನೂ ಮಂಜೂರು ಮಾಡಬಹುದಾಗಿದೆ. ಈ ರಜೆ ಪಡೆಯಲು ಯಾವುದೇ ವೈದ್ಯಕೀಯ ಪ್ರಮಾಣ ಪತ್ರ ನೀಡಬೇಕಿಲ್ಲ. ಈ ರಜೆಯನ್ನು ಹಾಜರಾತಿ ಪುಸ್ತಕದಲ್ಲಿ ಪ್ರತ್ಯೇಕವಾಗಿ ನಮೂದಿಸಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ. ಕಾರ್ಮಿಕ ಇಲಾಖೆಯ ಮತ್ತೊಂದು ಮಹತ್ವದ ಕ್ರಮ ಜಾರಿರಾಜ್ಯದ ಸರ್ಕಾರಿ ಮಹಿಳಾ ಉದ್ಯೋಗಿಗಳ ಮನೋಸ್ಥೈರ್ಯ ಹೆಚ್ಚಿಸುವ ಉದ್ದೇಶದಿಂದ ಜಾರಿ ಮಾಡಲಾದ ಋತುಚಕ್ರ ರಜೆಯು ಕಾರ್ಮಿಕ ಇಲಾಖೆಯ ಮಹತ್ವದ ಕ್ರಮಗಳಲ್ಲಿ ಒಂದಾಗಿದೆ. ಕಾರ್ಮಿಕ ಸಚಿವರಾದ ಸಂತೋಷ್‌ ಎಸ್‌ ಲಾಡ್‌ ಅವರು ಈ ಸೌಲಭ್ಯ ಜಾರಿಯಾಗುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.…

Read More