Subscribe to Updates
Get the latest creative news from FooBar about art, design and business.
Author: Mahanthesha
ಬೆಂಗಳೂರು, ಫೆ.28: ತಮಿಳು ಚಿತ್ರರಂಗದಲ್ಲಿ ದಳಪತಿಯಾಗಿ ಮಿಂಚಿದ್ದ ವಿಜಯ್ ಈಗ ದ್ರಾವಿಡ ನಾಡಿನ ದೊರೆಯಾಗೋಕೆ ತುದಿಗಾಲಲ್ಲಿ ನಿಂತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿಯಾಗಿ ಅಬ್ಬರಿಸೋಕೆ ಮಿಂಚಿನಂತೆ ಅಬ್ಬರಿಸುತ್ತಿದ್ದಾರೆ. ಆದ್ರೆ, ಸಿಎಂ ಆಗುವ ಕನಸಿನಲ್ಲಿ ತೇಲಾಡುತ್ತಿರುವ ದಳಪತಿ ವಿಜಯ್‌ಗೆ ಪತ್ನಿಯೇ ಆಘಾತ ನೀಡಿದ್ದಾರೆ. ಹೌದು.. ತಮಿಳುನಾಡು ಚುನಾವಣೆ ಹೊಸ್ತಿಲಲ್ಲೇ ದಳಪತಿ ವಿಜಯ್ ಪತ್ನಿ ಡಿವೋರ್ಸ್‌ಗೆ ಅರ್ಜಿ ಸಲ್ಲಿಸಿದ್ದು, ಭಾರಿ ಚರ್ಚೆ ಹುಟ್ಟು ಹಾಕಿದೆ. ಹೌದು.. ದಳಪತಿ ವಿಜಯ್ ಹಾಗೂ ಅವರ ಪತ್ನಿ ಸಂಗೀತಾ ಡಿವೋರ್ಸ್ ಪಡೆದುಕೊಳ್ತಿದ್ದಾರೆ ಅನ್ನೋ ಸುದ್ದಿ ಎಲ್ಲೆಡೆ ವೈರಲ್ ಆಗ್ತಿದೆ. ಆದ್ರೆ ಈ ದಂಪತಿಗೆ ಡಿವೋರ್ಸ್ ಸಿಗೋದು ಅಷ್ಟು ಸುಲಭವಲ್ಲ. ಸಂಸಾರದಲ್ಲಿ ಬಿರುಕು ಮೂಡಿರೋದು ಮಾತ್ರವಲ್ಲದೇ ಡಿವೋರ್ಸ್ ವೇಳೆಯೂ ಸಮಸ್ಯೆ ಕಾಣಿಸಿಕೊಳ್ತಿದೆ. ಬರೋಬ್ಬರಿ 27 ವರ್ಷಗಳ ಕಾಲ ಸುಖಸಂಸಾರ ನಡೆಸಿದ್ದ ಈ ಜೋಡಿ ಇದೀಗ ಡಿವೋರ್ಸ್‌ಗೆ ಅಪ್ಲೈ ಮಾಡಿರೋದಿಕ್ಕೆ ಕಾರಣ ಏನು? ಡಿವೋರ್ಸ್ ಪಡೆಯಲು ಯಾಕೆ ಪ್ರಾಬ್ಲಂ ಆಗ್ತಿದೆ ಗೊತ್ತಾ? ದಳಪತಿ ವಿಜಯ್ ಪತ್ನಿ ಸಂಗೀತಾ ಮೂಲತಃ ಶ್ರೀಲಂಕಾದ ತಮಿಳು…
ಬೆಂಗಳೂರು, ಫೆ.28: ಅಮೃತಧಾರೆ ಧಾರಾವಾಹಿಯ ಜೋಡಿ ನಿಜ ಜೀವನದಲ್ಲೂ ಒಂದಾಗೋಕೆ ನಿರ್ಧರಿಸಿದೆ. ಪಕ್ಕಾ ಡಿಬಾಸ್ ಫ್ಯಾನ್ ಆಗಿರುವ ರಾಧಾ ಭಗವತಿ, ಈಗ ದಾಂಪತ್ಯ ಜೀವನಕ್ಕೆ ಜೀವನಕ್ಕೆ ಕಾಲಿಡೋಕೆ ಸಜ್ಜಾಗಿದ್ದಾರೆ. ಜೀ ಕನ್ನಡದ ಅಮೃತಧಾರೆ ಖ್ಯಾತಿಯ ರಾಣವ್ ಗೌಡ ಮತ್ತು ಕಲರ್ಸ್ ಕನ್ನಡದ ಭಾರ್ಗವಿ LLB ನಟಿ ರಾಧಾ ಭಗವತಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಇದೀಗ ಎಂಗೇಜ್ಮೆಂಟ್ ಫೋಟೋಗಳನ್ನು ನೋಡಿ ಸೀರಿಯಲ್ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದಾರೆ. ಇನ್ನು, ರಾಣವ್ ಹಾಗೂ ರಾಧಾ ಮಧ್ಯೆ ಪ್ರೀತಿ ಹುಟ್ಟಿಕೊಂಡಿದ್ದೇ ರೋಚಕ. ಜೀ ಕನ್ನಡದಲ್ಲಿ ಪ್ರಸಾರವಾಗಿ ಜನ ಮನಗೆದ್ದಿದ್ದ ಅಮೃತಧಾರೆ ಸೀರಿಯಲ್‌ನಲ್ಲಿ ಈ ಇಬ್ಬರೂ ನಟಿಸುತ್ತಿದ್ರು. ಕ್ಯೂಟ್ ಆಕ್ಟಿಂಗ್ ಮೂಲಕವೇ ಅಭಿಮಾನಿಗಳ ಮನ ಗೆದ್ದಿದ್ರು. ಆ ಸೀರಿಯಲ್ ನೋಡುತ್ತಿದ್ದ ಜನರು, ಇಬ್ಬರೂ ನಿಜ ಜೀವನದಲ್ಲೂ ಒಂದಾಗಲಿ ಅಂತಾ ಹರಸುತ್ತಿದ್ರು. ಅದರಂತೆ ಇಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಅಮೃತಧಾರೆ ಧಾರಾವಾಹಿಯ ಸೆಟ್‌ನಲ್ಲೇ ಇವರಿಬ್ಬರ ಪ್ರೀತಿ ಚಿಗುರಿತ್ತು. ಇದೀಗ ಪ್ರೀತಿ ಮದುವೆಯ ಬಂಧಕ್ಕೆ ಮುನ್ನುಡಿ ಬರೆದಿದೆ. ಅಷ್ಟಕ್ಕೂ ಅಮೃತಧಾರೆ ಸೀರಿಯಲ್‌ನಲ್ಲಿ ಜೈದೇವ್…
ಬೆಂಗಳೂರು, ಫೆ.28: ಮೊಬೈಲ್ ಎಂಬುದು ಕೇವಲ ಸಂಪರ್ಕ ಸಾಧನವಾಗಿ ಇಂದು ಉಳಿದಿಲ್ಲ, ಬದಲಿಗೆ ಇಂದು ನಾವು ಮೊಬೈಲ್ ಇಲ್ಲದೆಯೇ ಬದಕಲು ಸಾಧ್ಯವಿಲ್ಲ ಎಂಬಂತೆ ನಮ್ಮನ್ನು ಬದಲಾಯಿಸಿಬಿಟ್ಟಿದೆ. ಡಿಜಿಟಲ್ ಆರೋಗ್ಯದ ಕುರಿತಾಗಿ ನೋಡುವುದಾದರೆ ಇತ್ತೀಚಿನ ಸಂಶೋಧನೆಗಳ ಪ್ರಕಾರ, ಡೂಮ್ ಸ್ಕ್ರೋಲಿಂಗ್(ಅತಿಯಾದ ವಿಡೀಯೋ ವೀಕ್ಷಣೆ) ಅಭ್ಯಾಸವು ನಮ್ಮ ಮೆದುಳಿನ ಪ್ರತಿಫಲ ವ್ಯವಸ್ಥೆಯನ್ನು ಬದಲಾಯಿಸಿಬಿಟ್ಟಿದೆ. ಇದರ ಪರಿಣಾಮ ಇಂದಿನ ಪೀಳಿಗೆ ಜನರು ಯಾವಾಗಲೂ ಆನ್‌ಲೈನ್‌ನಲ್ಲಿ ಇರುತ್ತಾರೆ ಜೊತೆಗೆ ನೋಡಲು ಸದಾ ಬಳಲಿದಂತೆ ಕಾಣಿಸುತ್ತಾರೆ ಎಂದು ಬೆಂಗಳೂರಿನ ವಾಸವಿ ಆಸ್ಪತ್ರೆಯ ಮಾನಸಿಕ ಆರೋಗ್ಯ ಆಪ್ತಸಮಾಲೋಚಕರಾದ ಸುಭಾಷ್ ಹೆಚ್.ಜೆ ಹೇಳುತ್ತಾರೆ. ಸ್ಮಾರ್ಟ್‌ಫೋನ್ ಯುಗ ಆರಂಭಕ್ಕೂ ಮುನ್ನ ಜನರ ನಡುವೆ ಸಂಪರ್ಕ ಉತ್ತಮವಾಗಿತ್ತು, ಅಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ರೋಗಿಗಳು ಮತ್ತು ಅವರ ಕುಟುಂಬಗಳು ಪರಸ್ಪರ ಮಾತನಾಡಿಕೊಳ್ಳುತ್ತಿದ್ದರು, ಒಬ್ಬರಿಗೊಬ್ಬರು ಧೈರ್ಯ ಹೇಳಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲರೂ ಅವರವರ ಮೊಬೈಲ್‌ನಲ್ಲಿ ಮೌನವಾಗಿ ಮುಳುಗಿದ್ದಾರೆ, ಕನಿಷ್ಟ ಸಂವಹನ ಕ್ರಿಯೆಯನ್ನೂ ಕೂಡ ಕಳೆದುಕೊಂಡಿದ್ದಾರೆ ಎಂದು ತಜ್ಞರು ವಿಷಾದಿಸಿದರು. ಸಾಮಾಜಿಕ ಮಾಧ್ಯಮ ಬಳಕೆ ಎಂದಿಗೂ ತೃಪ್ತಿ ನೀಡದು.…
ಬೆಂಗಳೂರು, ಫೆ.27: ಭಾರತೀಯ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ರಿಂಕು ಸಿಂಗ್‌ಗೆ ದೊಡ್ಡ ಆಘಾತ ಎದುರಾಗಿದೆ. ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡಕ್ಕೆ ಆಸರೆಯಾಗಿರುವ ಹೊತ್ತಲ್ಲೇ ಅವರ ತಂದೆ ಖಾನ್‌ಚಂದ್ ಸಿಂಗ್ ಅವರು ನಿಧನರಾಗಿದ್ದಾರೆ.. ನಾಲ್ಕನೇ ಹಂತದ ಕ್ಯಾನ್ಸರ್‌ಗೆ ತುತ್ತಾಗಿ ಕೊನೆಯುಸಿರೆಳೆದಿದ್ದಾರೆ. ಗ್ರೇಟರ್ ನೋಯ್ಡಾದ ಯಥಾರ್ಥ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಾಕಾರಿಯಾಗದೇ ಮೃತಪಟ್ಟಿದ್ದಾರೆ. ಈ ವಾರದ ಆರಂಭದಲ್ಲೇ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ರಿಂಕು ಸಿಂಗ್, ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ತನ್ನ ತಂದೆಯನ್ನ ನೋಡಲು ತೆರಳಿದ್ರು. ಆದರೆ, ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬರದ ಕಾರಣ ವೆಂಟಿಲೇಟರ್ ವ್ಯವಸ್ಥೆಯಲ್ಲಿ ಇರಿಸಲಾಗಿತ್ತು. ಆದ್ರೂ ದೇಶ ಸೇವೆಯನ್ನ ಮರಿಯದ ರಿಂಕು ಭಾರತದ ಪರ ಆಡಲು ಪುನಃ ತಂಡಕ್ಕೆ ವಾಪಸ್ ಆಗಿದ್ರು. ಆದ್ರೆ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅವರ ಬದಲಾಗಿ ಸಂಜು ಸ್ಯಾಮ್ಸನ್‌ರನ್ನ ಕಣಕ್ಕಿಳಿಸಲಾಗಿತ್ತು. ರಿಂಕು ಸಿಂಗ್‌ಗೆ ಪರ್ಯಾಯ ಫೀಲ್ಡರ್ ಆಗಿ ಭಾಗವಹಿಸಲು ಮಾತ್ರ ಅವಕಾಶ ಸಿಕ್ಕಿತ್ತು. ಇದೀಗ ಅವರ ತಂದೆಯನ್ನ…
ಬೆಂಗಳೂರು, ಫೆ.27: ದೆಹಲಿಯ ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಜೊತೆಗೆ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಕೂಡ ನಿರಾಳರಾಗಿದ್ದಾರೆ. ಅವರ ವಿರುದ್ಧವಾಗಿ ಇದ್ದ ಅಬಕಾರಿ ನೀತಿ ಕೇಸ್ ಕೊನೆಗೂ ಖುಲಾಸೆಗೊಂಡಿದೆ. ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯ ಪ್ರಕರಣದ ಎಲ್ಲಾ 23 ಆರೋಪಿಗಳನ್ನ ಖುಲಾಸೆ ಮಾಡಿದೆ. 2021-22ರಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಮದ್ಯ ನೀತಿಯಲ್ಲಿ ಸಾವಿರಾರು ಕೋಟಿ ರೂ. ಹಗರಣ ಆಗಿದೆ ಅಂತ ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇಡಿ ತನಿಖೆ ನಡೆಸಿದ್ದವು. ಕೇಜ್ರಿವಾಲ್ ಹಾಗೂ ಸಿಸೋಡಿಯಾ ಅರೆಸ್ಟ್ ಕೂಡ ಆಗಿದ್ದರು. ಆದ್ರೆ ಈ ಪ್ರಕರಣದ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಯಾವುದೇ ನಿರ್ದಿಷ್ಟ ಸಾಕ್ಷ್ಯಾಧಾರಗಳಿಲ್ಲ ಅಂತ ಆರೋಪಿಗಳನ್ನ ಕೇಸ್‌ನಿಂದ ಖುಲಾಸೆಗೊಳಿಸಿದೆ. ಅಂದು ದೆಹಲಿ ಸರ್ಕಾರ ಜಾರಿಗೊಳಿಸಿದ್ದ ಅಬಕಾರಿ ನೀತಿಯಲ್ಲಿ ಯಾವುದೇ ಪಿತೂರಿ ಅಥವಾ ಕ್ರಿಮಿನಲ್ ಉದ್ದೇಶ ಇರಲಿಲ್ಲ ಅಂತ ತೀರ್ಪು ನೀಡಿದೆ. ಜೊತೆಗೆ ತನಿಖೆಯಲ್ಲಿನ ಲೋಪಗಳಿಂದಾಗಿ ಸಿಬಿಐಗೆ ನ್ಯಾಯಾಲಯ ಛೀಮಾರಿ…
ಬೆಂಗಳೂರು, ಫೆ.25: ವೈವಾಹಿಕ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡಗೆ ಪ್ರಧಾನಿ ನರೇಂದ್ರ ಮೋದಿಯವರು ಶುಭ ಹಾರೈಸಿದ್ದಾರೆ. ಫೆಬ್ರವರಿ 26ರಂದು ರಾಜಸ್ಥಾನದ ಉದಯಪುರದಲ್ಲಿ ಮದುವೆ ಹಾಗೂ ಮಾರ್ಚ್ 4ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ರಿಸೆಪ್ಷನ್ ನಡೆಯಲಿದ್ದು, ಹಲವು ಗಣ್ಯರು, ರಾಜಕಾರಣಿಗಳು ಆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ವಿಜಯ್ ದೇವರಕೊಂಡ ಅವರ ತಂದೆ ಮತ್ತು ತಾಯಿ ಅವರು, ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಅವರ ಮದುವೆಯ ಆಹ್ವಾನ ಪತ್ರಿಕೆಯನ್ನು ನೀಡಿ ಹಲವು ಗಣ್ಯರನ್ನು ಇನ್ವೈಟ್ ಮಾಡಿದ್ದಾರೆ. ಹಾಗೆಯೇ ಪ್ರಧಾನಿ ಮೋದಿ ಅವರಿಗೂ ಇನ್ವಿಟೇಷನ್ ಕಳುಹಿಸಿದ್ದರು. ಇದೀಗ ಮೋದಿ ಅವರು ವಿಜಯ್ ದೇವರಕೊಂಡ ಪೋಷಕರ ಹೆಸರು ಸೂಚಿಸಿ ಪತ್ರ ಬರೆದು ವಧು-ವರರಿಗೆ ಶುಭ ಹಾರೈಸಿದ್ದಾರೆ. ಫೆಬ್ರವರಿ 26, 2026ರಂದು ನಡೆಯಲಿರುವ ವಿಜಯ್ ಮತ್ತು ರಶ್ಮಿಕಾ ಅವರ ವಿವಾಹಕ್ಕೆ ನೀವು ನೀಡಿದ ಆಮಂತ್ರಣವನ್ನು ಸ್ವೀಕರಿಸಿ ಬಹಳ ಸಂತೋಷವಾಯಿತು. ಈ ಅತ್ಯಂತ ಹರ್ಷದಾಯಕ ಮತ್ತು ಮಂಗಳಕರ ಸಂದರ್ಭದಲ್ಲಿ ದೇವರಕೊಂಡ ಮತ್ತು ಮಂದಣ್ಣ ಕುಟುಂಬಗಳಿಗೆ…
ಬೆಂಗಳೂರು, ಫೆ.25: ನ್ಯಾಷನಲ್ ಕ್ರಶ್, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆಗೆ ಕ್ಷಣಗಣನೆ ಶುರುವಾಗಿದೆ. ಕರ್ನಾಟಕದ ಮನೆ ಮಗಳು ಈಗ ತೆಲುಗು ರಾಜ್ಯದ ಸೊಸೆಯಾಗಲಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಸೀಕ್ರೆಟ್ ಆಗಿ ಲವ್ ಮಾಡುತ್ತಿದ್ದ ಇಬ್ಬರೂ ಇದೀಗ ಸತಿಪತಿಗಳಾಗಲು ಮುಂದಾಗಿದ್ದು, ಜೈಪುರದ ಭವ್ಯ ಅರಮನೆಯಂತಾ ಹೆರಿಟೇಜ್‌ನಲ್ಲಿ ಕಲ್ಯಾಣ ಜರುಗಲಿದೆ. ಹಾಗಾದರೆ, ಇಬ್ಬರ ಮದುವೆ ಹೇಗೆ ನಡೆಯುತ್ತೆ? ಒಂದೇ ಮಂಟಪದಲ್ಲಿ ಎರಡೆರಡು ಬಾರಿ ಮದುವೆ ಆಗೋದೇಕೆ ರಶ್-ವಿಜಯ್ ಅನ್ನೋ ಕುತೂಹಲಕ್ಕೆ ಇಲ್ಲಿದೆ ಉತ್ತರ. ಹೌದು, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕಿರಿಕ್ ಪಾರ್ಟಿ ಸಿನಿಮಾದಲ್ಲಿ ನಟಿಸುವ ಮೂಲಕ ರಶ್ಮಿಕಾ ಸಿನಿ ಇಂಡಸ್ಟ್ರಿಗೆ ಕಾಲಿಟ್ಟದ್ದರು. ಆ ಸಿನಿಮಾ ಶೂಟಿಂಗ್ ಸೆಟ್‌ನಲ್ಲೇ ರಕ್ಷಿತ್ ಶೆಟ್ಟಿ-ರಶ್ಮಿಕಾ ಮಧ್ಯೆ ಲವ್ ಶುರುವಾಗಿ, ಇಬ್ಬರೂ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು. ಆದ್ರೆ, ಆ ಎಂಗೇಜ್‌ಮೆಂಟ್ ಎರಡು ವರ್ಷದಲ್ಲೇ ಮುರಿದು ಬಿದ್ದಿತ್ತು. ಇದಾದ ನಂತರ ತೆಲುಗಿಗೆ ಹಾರಿದ್ದ ರಶ್ಮಿಕಾ ಮಂದಣ್ಣ ಹಿಂದೆ ತಿರುಗಿ ನೋಡಲೇ ಇಲ್ಲ. ಬ್ಯಾಕ್ ಟು…
ಬೆಂಗಳೂರು, ಫೆ.23: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರತಿದಿನ ರಾತ್ರಿ 7:30ಕ್ಕೆ ಪ್ರಸಾರವಾಗುತ್ತಿರುವ, ಅತಿ ಹೆಚ್ಚು ವೀಕ್ಷಕರ ಮನಗೆದ್ದಿರುವ ‘ಮುದ್ದುಸೊಸೆ’ ಧಾರಾವಾಹಿ ಇದೀಗ ಅತ್ಯಂತ ಕುತೂಹಲಕಾರಿ ಘಟ್ಟಕ್ಕೆ ಬಂದು ತಲುಪಿದೆ. ಆರಂಭದಿಂದಲೂ ತನ್ನ ವೇಗವಾದ ಕಥಾಹಂದರ ಹಾಗೂ ರೋಚಕ ತಿರುವುಗಳ ಮೂಲಕ ಮನೆಮಾತಾಗಿರುವ ಈ ಸೀರಿಯಲ್‌ನಲ್ಲಿ, ಇದೀಗ ಕಥಾನಾಯಕಿ ವಿದ್ಯಾಳ ಬದುಕನ್ನೇ ಬುಡಮೇಲು ಮಾಡುವಂತಹ ಘಟನೆಯೊಂದು ಸಂಭವಿಸಿದೆ. “ಕಣ್ಣಿಗೆ ಕಂಡಿದ್ದೆಲ್ಲಾ ಸತ್ಯವಲ್ಲ, ನನ್ನ ಗಂಡನ ಮೇಲಿರುವ ಅಪವಾದ ಸುಳ್ಳು!” – ಈ ಒಂದು ನಂಬಿಕೆಯ ಮೇಲೆ ಕಲರ್ಸ್ ಕನ್ನಡದ ‘ಮುದ್ದುಸೊಸೆ’ ಧಾರಾವಾಹಿಯ ಕಥಾನಾಯಕಿ ವಿದ್ಯಾ ಈಗ ಅಗ್ನಿಪರೀಕ್ಷೆಗೆ ಸಿದ್ಧಳಾಗಿದ್ದಾಳೆ. ಟ್ವಿಸ್ಟ್ ಮೂಲಕವೇ ವೀಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸುತ್ತಿರುವ ಈ ಧಾರಾವಾಹಿ, ಇದೀಗ ಕಥೆಯ ದಿಕ್ಕನ್ನೇ ಬದಲಿಸುವಂತಹ ‘ಮಹಾ ತಿರುವು’ ಪಡೆದುಕೊಂಡಿದೆ. ಕೇವಲ ಸಂಸಾರದ ಕಲಹವಲ್ಲದೆ, ಅಸ್ತಿತ್ವ ಮತ್ತು ಸಂಬಂಧದ ನಡುವಿನ ಸಂಘರ್ಷಕ್ಕೆ ವೇದಿಕೆ ಸಜ್ಜಾಗಿದೆ. ಹೌದು, ಮುದ್ದುಸೊಸೆ ಧಾರಾವಾಹಿ, ಪ್ರಸಾರ ಆರಂಭಿಸಿದ ದಿನದಿಂದ ಇಲ್ಲಿಯವರೆಗೂ ಸಾಕಷ್ಟು ತಿರುವುಗಳನ್ನು ವೀಕ್ಷಕರಿಗೆ ನೀಡುತ್ತಲೇ ಬಂದಿದೆ. ವೆಬ್‌ಸಿರೀಸ್‌ನಂತೆ ಏಪಿಸೋಡ್‌ನಿಂದ…
ಬೆಂಗಳೂರು, ಫೆ.23: ಸ್ಟಾರ್ ಕಪಲ್‌ಗಳ ಸಾಲಿಗೆ ಸೇರ್ಪಡೆಯಾಗೋದಿಕ್ಕೆ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಸಜ್ಜಾಗಿದ್ದಾರೆ. ಬಹುಕಾಲದಿಂದ ಗಾಸಿಪ್‌ಗಳಿಗೆ ಕಾರಣವಾಗಿದ್ದ ಈ ಜೋಡಿ ಇದೀಗ ಅಧಿಕೃತವಾಗಿ ದಾಂಪತ್ಯ ಜೀವನಕ್ಕೆ ಕಾಲಿಡಲಿದೆ. ಇದೇ ಫೆಬ್ರವರಿ 26ರಂದು ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಲಿದ್ದು, ಈ ಹಿನ್ನೆಲೆ ರಾಜಸ್ಥಾನದ ಉದಯಪುರ ನಗರಕ್ಕೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ತಮ್ಮ ಮದುವೆ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಖಚಿತಪಡಿಸಿದ್ದರು. ಇಬ್ಬರೂ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಮದುವೆಯನ್ನು ಅಧಿಕೃತವಾಗಿ ಘೋಷಿಸಿದ್ದು, ತಮ್ಮ ಜೋಡಿಗೆ ಅಭಿಮಾನಿಗಳು ನೀಡಿದ “ವಿರೋಷ್” ಎಂಬ ಹೆಸರನ್ನೇ ಮದುವೆ ಸಮಾರಂಭದ ಶೀರ್ಷಿಕೆಯಾಗಿಸಿಕೊಂಡಿದ್ದಾರೆ. “ನಮ್ಮ ಮೇಲೆ ನೀವು ತೋರಿದ ಪ್ರೀತಿಗೆ ಗೌರವವಾಗಿ ನಮ್ಮ ಒಂದಾಗುವಿಕೆಯನ್ನು ‘ವಿರೋಷ್ ವಿವಾಹ’ ಎಂದು ಕರೆಯಲು ಬಯಸುತ್ತೇವೆ” ಎಂದು ಈ ಜೋಡಿ ಭಾವನಾತ್ಮಕವಾಗಿ ಹಂಚಿಕೊಂಡಿದೆ. ಕೊನೆಗೆ ಮದುವೆ ವಿಚಾರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದರಿಂದ ಅಭಿಮಾನಿಗಳಲ್ಲಿದ್ದ ಗೊಂದಲ ದೂರವಾಗಿದೆ. ಉದಯಪುರ ವಿಮಾನ ನಿಲ್ದಾಣದಲ್ಲಿ ಇಬ್ಬರೂ ಪ್ರತ್ಯೇಕವಾಗಿ ಹೊರಬಂದರೂ, ಒಂದೇ…
ಬೆಂಗಳೂರು, ಫೆ.23: ಸಂಸ್ಕೃತಿ, ಸೃಜನಶೀಲತೆ ಮತ್ತು ವ್ಯಾಪ್ತಿಯನ್ನು ಆಧರಿಸಿದ ಭವಿಷ್ಯದ ವಿಷಯ (Content) ಪರಿಸರ ವ್ಯವಸ್ಥೆಯನ್ನು ಬಲಪಡಿಸುವ ತನ್ನ ಬದ್ಧತೆಯನ್ನು ಮುಂದುವರಿಸುತ್ತಾ, ‘ಜೀ’ (Z) ಸಂಸ್ಥೆಯು ‘ಜೀ ಕಿರುಚಿತ್ರ ಸ್ಪರ್ಧೆ’ಯನ್ನು (Zee Short Film Contest) ಆಯೋಜಿಸುತ್ತಿದೆ. ದೇಶದಾದ್ಯಂತ ಉದಯೋನ್ಮುಖ ಚಿತ್ರ ನಿರ್ಮಾಣ ಪ್ರತಿಭೆಗಳನ್ನು ಗುರುತಿಸಿ, ಪೋಷಿಸಿ ಮತ್ತು ಅವರನ್ನು ಗೌರವಿಸುವ ಉದ್ದೇಶವನ್ನು ಹೊಂದಿದೆ. ಭಾರತದ ವಿವಿಧ ಪ್ರಾದೇಶಿಕ ಸಿನೆಮಾ ಧ್ವನಿಗಳನ್ನು ಒಂದೇ ರಾಷ್ಟ್ರೀಯ ವೇದಿಕೆಯಲ್ಲಿ ಒಟ್ಟುಗೂಡಿಸುವ ಈ ಸ್ಪರ್ಧೆ, ಭಾರತೀಯ ಮನರಂಜನಾ ಕ್ಷೇತ್ರದಲ್ಲಿ ಬಹುಭಾಷಾ ಪ್ರತಿಭಾ ಅನ್ವೇಷಣೆಯ ಅತ್ಯಂತ ಮಹತ್ವಾಕಾಂಕ್ಷಿ ಪ್ರಯತ್ನಗಳಲ್ಲಿ ಒಂದಾಗಿದೆ. ಹಿಂದಿ, ಮರಾಠಿ, ಬೆಂಗಾಲಿ, ತೆಲುಗು, ತಮಿಳು, ಮಲಯಾಳಂ ಮತ್ತು ಕನ್ನಡ ಸೇರಿದಂತೆ ಏಳು ಪ್ರಮುಖ ಭಾಷೆಗಳಲ್ಲಿ ಈ ಸ್ಪರ್ಧೆ ನಡೆಯಲಿದ್ದು, ಸಿನಿಮಾ ಪರಂಪರೆ ಹೊಂದಿರುವ ಕಥೆಗಾರರಿಗೆ ರಾಷ್ಟ್ರೀಯ ಮಟ್ಟದ ಅವಕಾಶ ಸಿಗಲಿದೆ. ಈ ಸ್ಪರ್ಧೆಯ ಪ್ರಮುಖ ಆಕರ್ಷಣೆ ಎಂದರೆ ವಿವಿಧ ಪ್ರಾದೇಶಿಕ ಚಲನಚಿತ್ರ ಕ್ಷೇತ್ರಗಳಲ್ಲಿ ಹೊಸ ದಾರಿಯನ್ನು ತೋರಿಸಿದ ಗಣ್ಯ ನಿರ್ದೇಶಕ ತೀರ್ಪುಗಾರರು ಇರಲಿದ್ದಾರೆ. ‘ಗ್ಯಾಂಗ್ಸ್…