ಬೆಂಗಳೂರು, ಜ.10 : ಬಿಗ್‌ಬಾಸ್ ಸೀಸನ್ 12ರ ಇಬ್ಬರು ಪ್ರಮುಖ ಸ್ಪರ್ಧಿಗಳು ಅಂದ್ರೆ ಅದು ಗಿಲ್ಲಿ ನಟ ಮತ್ತು ಅಶ್ವಿನಿಗೌಡ.. ಇವರಿಬ್ಬರೂ ಇಲ್ಲಾ ಅಂದಿದ್ರೆ ಬಿಗ್‌ಬಾಸ್ ಈ ಸೀಸನ್‌ಗೆ ಮಜಾನೇ ಇರ್ತಿರಲಿಲ್ಲ. ಇಷ್ಟು ದಿನ ಗಿಲ್ಲಿ ಗಿಲ್ಲಿ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಮೆರೆಸುತ್ತಿದ್ದಾರೆ. ಗಿಲ್ಲಿನೇ ಗೆಲ್ಲೋದು ಅಂತಾ ಎಲ್ಲಾ ಕಡೆಯೂ ಫ್ಯಾನ್ಸ್ ಹೋದಲ್ಲಿ ಬಂದಲ್ಲಿ ಹೇಳಿಕೊಂಡು ತಿರುಗಾಡ್ತಿದ್ದಾರೆ. ಆದ್ರೀಗ ಟ್ರೆಂಡ್ ಬದಲಾದಂತೆ ಕಾಣುತ್ತಿದೆ. ಬಿಗ್‌ಬಾಸ್ ಕೊನೆಯಲ್ಲಿ ಗಿಲ್ಲಿ ನಟನನ್ನು ಹಿಂದಿಕ್ಕಿ ಅಶ್ವಿನಿಗೌಡ ಮುಂದೆ ಬಂದಿದ್ದು, ಗೇಮ್ ಚೇಂಜರ್ ಆಗಿ ಬದಲಾಗಿದ್ದಾರೆ.
ಹೌದು.. ಫಿನಾಲೆ ಹತ್ರ ಬರ್ತಿದ್ದಂತೆ ಅಶ್ವಿನಿ ಗೇಮ್ ಚೇಂಜರ್ ಆದ್ರಾ ಅನ್ನೋ ಚರ್ಚೆ ಜೋರಾಗಿದೆ.. ಯಾಕಂದ್ರೆ, ಬಿಗ್‌ಬಾಸ್‌ನಲ್ಲಿ ಒಂದು ನಿರ್ಧಾರ, ಒಂದು ಟಾಸ್ಕ್, ಇಡೀ ಗೇಮ್‌ನೇ ಚೇಂಜ್ ಮಾಡ್ಬುಹುದು ಅನ್ನೋದಕ್ಕೆ ಹಲವು ಉದಾಹರಣೆಗಳಿವೆ. ಈ ಸೀಸನ್‌ನಲ್ಲಿ ಅಶ್ವಿನಿ ಅವರು ನೆಗೆಟಿವ್ ಆಗಿ ಕಾಣಿಸಿಕೊಂಡರು. ಅವರಿಲ್ಲದೇ ಬಿಗ್‌ಬಾಸ್ ಇಲ್ಲ ಅಂತಾ ಹೇಳೋ ವೀಕ್ಷಕರು ತುಂಬಾ ಜನ ಇದ್ದಾರೆ. ಹಾಗಂತ ಗಿಲ್ಲಿ ಇಲ್ವಾ? ಅಂತಲ್ಲ. ಇವರಿಬ್ಬರು ಈ ಸೀಸನ್‌ನ ಹೈಲೆಟೆಡ್ ಸ್ಪರ್ಧಿಗಳು ಅನ್ನೋದರಲ್ಲಿ ಡೌಟೇ ಇಲ್ಲ..
ಅಷ್ಟಕ್ಕೂ ಟಾಪ್ 6 ಕಂಟೆಂಡರ್ ಟಾಸ್ಕ್‌ನಲ್ಲಿ ಅಶ್ವಿನಿಗೌಡ ರೋಚಕವಾಗಿ ಗೆದ್ದಿದ್ದೇ ಗೆದ್ದಿದ್ದು, ಅವರ ಆಟಕ್ಕೆ ಫುಲ್ ಫಿದಾ ಆಗಿರುವ ಪ್ರೇಕ್ಷಕರು ಅಶ್ವಿನಿಗೌಡಗೆ ಬಹುಪರಾಕ್ ಹೇಳ್ತಿದ್ದಾರೆ. ಅವರ ಆ ಛಲಕ್ಕೆ ಬಿಗ್‌ಬಾಸ್ ಅಭಿಮಾನಿಗಳು ಮನ ಸೋತಿದ್ದಾರೆ. ಇಷ್ಟೇ ಇಲ್ಲ, ಹಲವರು, ಈ ಬಾರಿ ಅವ್ರಿಗೆ ಕಿಚ್ಚನ ಚಪ್ಪಾಳೆ ಕೊಡ್ಬೇಕು ಅಂತಾನೂ ಬೇಡಿಕೆಯಿಟ್ಟಿದ್ದಾರೆ.
ಇನ್ನು, ಗೇಮ್‌ನ ಕೊನೆಯ ಹಂತದಲ್ಲಿ ಅಶ್ವಿನಿ ಶೈನ್ ಆಗಿರೋದರಿಂದ ತಳ್ಳಿ ಹಾಕುವಂತಿಲ್ಲ. ಸೇಮ್ ಟೈಮ್, ಗಿಲ್ಲಿ ಕೂಡ, ಡಲ್ ಆಗಿರೋದರಿಂದ ಅವರಿಗೆ ಅಡ್ವಾಂಟೇಜ್ ಅಂತೂ ಇದೆ. ಅಷ್ಟೇ ಅಲ್ದೆ, ನಿನ್ನೆಯ ಎಪಿಸೋಡ್‌ನಲ್ಲಿ ಅಶ್ವಿನಿಗೌಡ ಅವರಿಗೆ ಮನೆಯ ಎಲ್ಲಾ ಸ್ಪರ್ಧಿಗಳು ಉತ್ತಮ ನೀಡಿದ್ದಾರೆ. ಹೀಗಾಗಿ, ಬಿಗ್‌ಬಾಸ್ ಫಿನಾಲೆ ಟೈಮ್‌ನಲ್ಲಿ ಅಶ್ವಿನಿಗೌಡ ಗೇಮ್ ಚೇಂಜರ್ ಆಗಿ ಬದಲಾಗಿದ್ದು, ಗಿಲ್ಲಿ ಫ್ಯಾನ್ಸ್‌ಗೂ ಶಾಕ್ ಆದಂತಾಗಿದೆ.. ಆದ್ರೆ, ಇನ್ನೂ ಬಿಗ್‌ಬಾಸ್ ಆಟ ಮುಗಿದಿಲ್ಲ. ಕೊನೇ ಕ್ಷಣದಲ್ಲಿ ಏನಾಗುತ್ತೆ ಅನ್ನೋದನ್ನು ಕಾದು ನೋಡ್ಬೇಕಿದೆ.
