
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್, ಪೊಲೀಸರ ವಿರುದ್ಧವೇ ನ್ಯಾಯಮೂರ್ತಿಗಳಿಗೆ ದೂರು ನೀಡಿದ್ದಾರೆ. ಹೌದು.. ಸಿಸಿಹೆಚ್-57ನೇ ಕೋರ್ಟ್‌ಗೆ ಆರೋಪಿಗಳು ಹಾಜರಾಗಿದ್ರು. ದರ್ಶನ್ ಹಾಗೂ ಪವಿತ್ರಾ ಗೌಡ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಗೆ ಹಾಜರಾಗಿದ್ರು. ಈ ವೇಳೆ ಜಡ್ಜ್ ಎದುರು ದರ್ಶನ್ ಅಳಲು ತೋಡಿಕೊಂಡಿದ್ದಾರೆ. ಕೋರ್ಟ್ ಆದೇಶವನ್ನು ಜೈಲಿನ ಅಧಿಕಾರಿಗಳು ಪಾಲಿಸುತ್ತಿಲ್ಲ ಅಂತಾ ಆರೋಪ ಮಾಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ದರ್ಶನ್ ಅವರು ಬಿಳಿ ಬಣ್ಣದ ಜಾಕೆಟ್ ಧರಿಸಿದ್ದರು. ಉಳಿದ ಆರೋಪಿಗಳಾದ ಪುಟ್ಟಸ್ವಾಮಿ, ರಾಘವೇಂದ್ರ, ಧನರಾಜ್, ವಿನಯ್ ಕಾರ್ತಿಕ್, ಕೇಶವ ಮೂರ್ತಿ, ನಿಖಿಲ್ ನಾಯಕ್ ಕೋರ್ಟ್‌ಗೆ ಖುದ್ದು ಹಾಜರಾಗಿದ್ದಾರೆ. ಆರೋಪಿ ನಂದೀಶ್ ನಂದೀಶ್ ಗೈರಾಗಿದ್ದಾನೆ. ಪ್ರಕರಣದಿಂದ ಕೈಬಿಡುವಂತೆ ಕೆಲವು ಆರೋಪಿಗಳು ಅರ್ಜಿ ಸಲ್ಲಿಸಿದ್ದಾರೆ. ಇನ್ನು, ವಿಚಾರಣೆ ವೇಳೆ ದರ್ಶನ್ಗೆ ಜಡ್ಜ್ ಪ್ರಶ್ನೆ ಕೇಳಿದ್ದಾರೆ. ಕೋರ್ಟ್ ಆದೇಶ ಪಾಲಿಸುತ್ತಿದ್ದಾರೆಯೇ? ಅಂತಾ ಪ್ರಶ್ನೆ ಕೇಳಿದ್ರು.. ಈ ವೇಳೆ ಪ್ರತಿಕ್ರಿಯೆ ನೀಡಿದ ದರ್ಶನ್, ಇಲ್ಲ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಸರ್ ಅಂತಾ ಹೇಳಿದ್ದಾರೆ. 25/3 ಫೀಟ್ ಮಾತ್ರ ಓಡಾಡಲು ಅವಕಾಶ ಕೊಟ್ಟಿದ್ದಾರೆ. ಅಲ್ಲಿ ವಾಕಿಂಗ್ ಮಾಡಲು ಸೂರ್ಯನ ಬೆಳಕು ಬರುವುದಿಲ್ಲ ಅಂತಾ ದರ್ಶನ್ ಉತ್ತರ ನೀಡಿದ್ದಾರೆ. ಈ ವೇಳೆ ಮತ್ತೆ ಮಧ್ಯೆ ಪ್ರವೇಶಿಸಿದ ಜಡ್ಜ್, ಜೈಲಿನ ಸೂಪರಿಂಟೆಂಡೆಂಟ್ ಕೋರ್ಟ್‌ಗೆ ಹಾಜರಾಗುವಂತೆ ಸೂಚನೆ ನೀಡಿದ್ದು, ಅಕ್ಟೋಬರ್ 9ಕ್ಕೆ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
