ಅಹಮಾದಾಬಾದ್ ವಿಮಾನ ದುರಂತಕ್ಕೆ ಇಡೀ ವಿಶ್ವವೇ ಬೆಚ್ಚಿಬಿದ್ದಿತ್ತು. ಏರ್‌ಇಂಡಿಯಾ ವಿಮಾನದಲ್ಲಿದ್ದ 241 ಜನರು ಒಟ್ಟಿಗೆ ಉಸಿರು ಚೆಲ್ಲಿದರು. ಈ ದುರಂತದಲ್ಲಿ ಪವಾಡ ಸದೃಶ್ಯದಂತೆ ಏಕೈಕ ವ್ಯಕ್ತಿ ಬದುಕುಳಿದಿದ್ದು, ಎಲ್ಲರನ್ನ ಅಚ್ಚರಿಗೊಳಿಸಿದ್ರು.. ವಿಮಾನ ಬಿದ್ದ ಜಾಗದಲ್ಲಿದ್ದ ಹಾಸ್ಟೆಲ್ ವಿದ್ಯಾರ್ಥಿಗಳ ಜೀವನ ದಾರುಣ ಅಂತ್ಯವಾಯಿತು. ವಿಮಾನ ದುರಂತದಲ್ಲಿ ಬರೋಬ್ಬರಿ 274 ಜನರ ಜೀವನ ಕಳೆದುಕೊಂಡರು. ಈ ದುರಂತದಲ್ಲಿ ಪೈಲಟ್ ತಪ್ಪೋ? ತಾಂತ್ರಿಕ ದೋಷವೋ? ಇಂಜಿನ್ ವೈಫಲ್ಯವೇ? ಅಥವಾ ಬಾಹ್ಯ ಕಾರಣಗಳಿಂದ ವಿಮಾನ ಪತನವಾಗಿದೆಯಾ ಎಂಬ ನಾನಾ ಪ್ರಶ್ನೆಗಳಿಗೆ ಈ ತನಿಖಾ ವರದಿ ಉತ್ತರಿಸಿದೆ..
ಈ ವಿಮಾನ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯ ಪ್ರಾಥಮಿಕ ವರದಿ ಬಹಿರಂಗಗೊಂಡಿದ್ದು, ಅಪಘಾತದ ನಿಖರ ಕಾರಣಗಳತ್ತ ಬೆಳಕು ಚೆಲ್ಲಿದೆ. ಈ ಭೀಕರ ಘಟನೆಯ ವರದಿ 15 ಪುಟಗಳಲ್ಲಿ ಸಾದರಪಡಿಸಲಾಗಿದೆ. ವಿಮಾನ ಟೇಕ್ ಆಫ್ ಆದ ಕೆಲವೇ ಸೆಕೆಂಡುಗಳ ನಂತರ ವಿಮಾನದ ಎರಡೂ ಎಂಜಿನ್‌ಗಳು ಇದ್ದಕ್ಕಿದ್ದಂತೆ ಸ್ವಯಂಚಾಲಿತವಾಗಿ ಸ್ಥಗಿತಗೊಂಡಿದ್ದು, ಇದರಿಂದಾಗಿ ವಿಮಾನ ಅಪಘಾತಕ್ಕೀಡಾಗಿದೆ ಎಂದು ಏರ್ ಇಂಡಿಯಾ ಅಪಘಾತದ ಬಗ್ಗೆ ಭಾರತೀಯ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಬಿಡುಗಡೆ ಮಾಡಿದೆ.
ಅಷ್ಟೇ ಅಲ್ಲದೇ ವಿಮಾನ ಟೇಕಾಫ್ ವೇಳೆ ಪೈಲಟ್ಗಳ ಮಾತುಕತೆಯ ವಿವರ ಬಿಡುಗಡೆಯಾಗಿದೆ. ಪೈಲಟ್ ಸುಮಿತ್ ಸಭರ್ವಾಲ್ ತಮ್ಮ ಸಹ-ಪೈಲಟ್ ಡ್ರೈವ್ ಕುಂದರ್ ಅವರನ್ನು ನೀವು ಎಂಜಿನ್ ಇಂಧನವನ್ನು ಏಕೆ ಆಫ್ ಮಾಡಿದ್ದೀರಿ?’ ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಸಹ-ಪೈಲಟ್ ಡ್ರೈವ್ ಕುಂದರ್, ‘ನಾನು ಏನೂ ಮಾಡಲಿಲ್ಲ’ ಎಂದು ಹೇಳಿದ್ದಾರೆ. ಆಗ ಎರಡು ಇಂಜಿನ್ಗಳಿಗೆ ಇಂಧನ ಪೂರೈಕೆಯಾಗಿಲ್ಲ. ಇಂಜಿನ್ 1 ಮತ್ತು ಇಂಜಿನ್ 2 ಕ್ಕೂ ಇಂಧನದ ಬಟನ್ ಕಟ್ ಆಫ್ ಸ್ಥಿತಿಯಲ್ಲಿದ್ದವು. ಇದರಿಂದ ವಿಮಾನದ ಇಂಜಿನ್ಗೆ ಇಂಧನ ಪೂರೈಕೆಯಾಗದೇ ಇಂಜಿನ್ ವರ್ಕ್ ಆಗಿಲ್ಲ. ಪೈಲಟ್ ತಕ್ಷಣವೇ ಇಂಜಿನ್ಗೆ ಇಂಧನ ಪೂರೈಸಲು ರನ್ ಬಟನ್ ಒತ್ತಿದ್ದಾರೆ. ಆದರೆ ತಕ್ಷಣವೇ ಇಂಧನ ಪೂರೈಕೆಯಾಗಿಲ್ಲ. ಆಗ ಇಂಜಿನ್ 1 ವರ್ಕ್ ಆಗಿಲ್ಲ. ಇಂಜಿನ್ 2 ವರ್ಕ್ ಆದರೂ ಪೂರ್ತಿಯಾಗಿ ವರ್ಕ್ ಆಗಿಲ್ಲ. ಬಳಿಕ ಪೈಲಟ್ ಎಟಿಸಿಗೆ ‘ಮೇಡೇ’ ಕಾಲ್ ನೀಡಿದ್ದಾರೆ. ವಿಮಾನಕ್ಕೆ ಯಾವುದೇ ಹಕ್ಕಿ ಡಿಕ್ಕಿ ಹೊಡೆದಿಲ್ಲ ಅಂತ 15 ಪುಟಗಳ ವರದಿಯನ್ನು ಏರ್ ಕ್ರಾಫ್ಟ್ ಆಕ್ಸಿಡೆಂಟ್ ಇನ್ ವೆಸ್ಟಿಗೇಷನ್ ಬ್ಯೂರೋದ ಅಧಿಕಾರಿಗಳು ಸಲ್ಲಿಸಿದ್ದಾರೆ.
ಪೈಲಟ್‌ನಿಂದ ತುರ್ತು ʼಮೇ ಡೇʼ ಕರೆ
ದುರಂತದ ಕೆಲವೇ ಕ್ಷಣಗಳ ಮೊದಲು, ವಿಮಾನ ನಾಶವಾಗುವ ಸಮಯವಾದ 08:09:05 UTCಗೆ ಪೈಲಟ್‌ಗಳು “May Day” ಎಂಬ ತುರ್ತು ಕರೆ ನೀಡಿದ್ದರು. ಆದರೆ ಈ ಸಮಯದಲ್ಲಿ ವಿಮಾನವು ಏರ್‌ಪೋರ್ಟ್ ಹೊರಗಿನ ಕಟ್ಟಡಗಳಿಗೆ ಡಿಕ್ಕಿ ಹೊಡೆದು ಸಂಪೂರ್ಣ ನಾಶವಾಗಿತ್ತು.
