ದೇಶದಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಭಾರಿ ಏರಿಕೆಯಾಗುತ್ತಿರುವ ಈ ಸಂದರ್ಭದಲ್ಲಿ ಉತ್ತರ ಪ್ರದೇಶದ Allahabad ಹೈಕೋರ್ಟ್ ನೀಡಿರುವ ತೀರ್ಪು ದೇಶದೆಲ್ಲೆಡೆ ಸಂಚಲನ ಸೃಷ್ಟಿಸಿದೆ. ಮುಸ್ಲಿಂ ಸಮುದಾಯದ ಪುರುಷರು ತಮ್ಮ ಎಲ್ಲಾ ಹೆಂಡತಿಯರನ್ನ ಸಮಾನವಾಗಿ ನೋಡಿಕೊಂಡರೆ ಅವರಿಗೆ ಬಹುಪತ್ನಿತ್ವದ ಅವಕಾಶ ಇದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ಹೊರಡಿಸಿದೆ.
ಫುರ್ಕಾನ್ ಎಂಬ ವ್ಯಕ್ತಿಯ ವಿರುದ್ಧ ಮಹಿಳೆಯೋರ್ವಳು ನೀಡಿದ್ದ ದೂರಿನ ವಿಚಾರಣೆ ನಡೆಸಿದ ಹೈಕೋರ್ಟ್, ಮುಸ್ಲಿಮರು ಒಂದಕ್ಕಿಂತೆ ಹೆಚ್ಚಿನ ಮಹಿಳೆಯರನ್ನ ಮದುವೆಯಾಗಬಹುದು ಎಂಬ ತೀರ್ಪು ನೀಡಿದೆ. ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರಿದ್ದ ಏಕಸದಸ್ಯ ಪೀಠ, ಮುಸ್ಲಿಂ ಪುರಷರ ವಿವಾಹ ಆಯ್ಕೆಯ ಕುರಿತು ಈ ತೀರ್ಪು ನೀಡಿದೆ.
2020ರಲ್ಲಿ ಫುರ್ಕಾನ್ ಎಂಬ ವ್ಯಕ್ತಿಯ ಮೇಲೆ ಪ್ರಕರಣ ದಾಖಲಿಸಿದ್ದ ಮಹಿಳೆ, ಈಗಾಗಲೇ ಮದುವೆಯಾಗಿದ್ದರೂ ವಿಷಯ ಮುಚ್ಚಿಟ್ಟು ನನ್ನನ್ನು ಮದುವೆ ಯಾಗಿದ್ದಾನೆ ಎಂದು ಆರೋಪಿಸಿದ್ದಳು. ಹಾಗೂ ಈತ ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಳು.
Also Read: Karnataka Rain Update : ಮುಂದಿನ 3 ಗಂಟೆ ಈ ಜಿಲ್ಲೆಗಳಲ್ಲಿ ಭಾರೀ ಮಳೆ!
ಈ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದ ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಅರುಣ್ ಕುಮಾರ್ ಸಿಂಗ್ ದೇಸ್ವಾಲ್ ಅವರಿದ್ದ ಏಕಸದಸ್ಯ ಪೀಠ ಮುಸ್ಲಿಮರಿಗೆ ಬಹುಪತ್ನಿತ್ವದ ಅವಕಾಶ ಇದೆ ಎಂದ ತೀರ್ಪು ಹೊರಡಿಸಿದೆ. ಏಕರೂಪ ನಾಗರಿಕ ಸಂಹಿತೆ ಪ್ರಕಾರ ಮುಸ್ಲಿಂ ಪುರುಷರಿಗೆ ನಾಲ್ಕು ಮದುವೆ ಆಗಲು ಅವಕಾಶವಿದೆ. ವಾದ ವಿವಾದದ ನಂತರ ಪ್ರಕರಣದ ಮುಂದಿನ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಲಾಗಿದೆ.
