ಈ ಬೇಸಿಗೆಗೆ ಫ್ಯಾನ್‌ ಗಾಳಿ ಎಲ್ಲಾ ಸಾಕಾಗಲ್ಲ.. ಏನಿದ್ರೂ ಎಸಿ ಹಾಕ್ಕೊಂಡು ಚಿಲ್‌ ಆಗಿ ಮಲ್ಕೋಬೇಕು ಅನ್ನೋರೇ ಹೆಚ್ಚು.. ಆದ್ರೆ ನಿಮಿಗ್‌ ಗೊತ್ತಾ? ಇದ್ರಿಂದ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ವೆ. ಎಸಿಯಲ್ಲಿ ಮಲಗುವುದರಿಂದ (AC Side Effects)ಮೂಗು ಮತ್ತು ಗಂಟಲು ಊತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಉಂಟಾಗುತ್ತೆ. ಹೀಗಾಗಿ ಈಗಾಗ್ಲೇ ಆಸ್ತಮಾ ಅಥವಾ ಅಲರ್ಜಿಯಂತಹ ಸಮಸ್ಯೆಗಳನ್ನು ಹೊಂದಿರುವವರು ಎಸಿಯನ್ನು ಅವಾಯ್ಡ್‌ ಮಾಡ್ಲೇಬೇಕು.

ಎಸಿಯ ಶೀತ ಮತ್ತು ಶುಷ್ಕ ಗಾಳಿಯು ಚರ್ಮದ ತೇವಾಂಶವನ್ನು ಸಹ ಕಡಿಮೆ ಮಾಡುತ್ತದೆ. ಇದು ಚರ್ಮದಲ್ಲಿ ತುರಿಕೆ, ಊತ ಮತ್ತು ಶುಷ್ಕತೆಯನ್ನು ಉಂಟುಮಾಡಬಹುದು.‌ ಇದ್ರಿಂದ ಸ್ಕಿನ್‌ ಡ್ರೈ ಆಗಿ ಕಳಾಹೀನವಾಗುತ್ತೆ. ಎಸಿಯ ತಂಪು ಗಾಳಿ ಸ್ನಾಯುಗಳು ಮತ್ತು ಕೀಲುಗಳಲ್ಲಿ ಬಿಗಿತವನ್ನು ಉಂಟುಮಾಡಬಹುದು. ತಣ್ಣನೆಯ ಗಾಳಿಗೆ ನೇರವಾಗಿ ಒಡ್ಡಿಕೊಳ್ಳುವುದರಿಂದ ಸ್ನಾಯು ಸೆಳೆತ ಮತ್ತು ನೋವು ಉಂಟಾಗುತ್ತೆ. ಎಸಿ, ದೇಹದ ರೋಗನಿರೋಧಕ ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ.

ಎಸಿ ಫಿಲ್ಟರ್‌ನಲ್ಲಿ ಸಂಗ್ರಹವಾದ ಬ್ಯಾಕ್ಟೀರಿಯಾ ಮತ್ತು ಧೂಳು ಸಹ ಸೋಂಕಿಗೆ ಕಾರಣವಾಗಬಹುದು. ಎಸಿಯ ತಂಪಾದ ಗಾಳಿಯು ಕಣ್ಣುಗಳಲ್ಲಿನ ತೇವಾಂಶವನ್ನು ಕಡಿಮೆ ಮಾಡುತ್ತೆ. ಇದು ಕಣ್ಣುಗಳು ಒಣಗಲು ಕಾರಣವಾಗ್ಬಹುದು. ಇನ್ನು, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸುವವರಲ್ಲಿ ಈ ಸಮಸ್ಯೆ ವಿಶೇಷವಾಗಿ ಕಂಡುಬರುತ್ತದೆ. ಒಂದ್ವೇಳೆ ಎಸಿ ಬಳಸಲೇಬೇಕು ಅಂತಾದ್ರೆ, ಈ ನಿಯಮಗಳನ್ನ ಫಾಲೋ ಮಾಡಿ. ಎಸಿಯ ತಾಪಮಾನವನ್ನು ತುಂಬಾ ಕಡಿಮೆ ಇರಿಸ್ಬೇಡಿ. 22ರಿಂದ 24 ಡಿಗ್ರಿ ಸೆಲ್ಸಿಯಸ್ ತಾಪಮಾನ ಸಾಕಾಗುತ್ತೆ.

Also Read: Pakistan Ceasefire Violation : ಕದನ ವಿರಾಮ ಉಲ್ಲಂಘಿಸಿ ಮತ್ತೆ ಬಾಲ ಬಿಚ್ಚಿದ ಪಾಕ್‌..!

ಎಸಿ ಆನ್‌ ಮಾಡ್ಕೊಂಡ್ರೆ ರೂಮ್‌ಅಲ್ಲಿ ಹ್ಯುಮಿಡಿಫೈಯರ್‌ಅನ್ನ ಇಟ್ಕೊಳಿ. ಇದು ಗಾಳಿಯಲ್ಲಿ ತೇವಾಂಶ ಕಾಪಾಡಲು ಸಹಾಯ ಮಾಡುತ್ತೆ. ಧೂಳು ಮತ್ತು ಬ್ಯಾಕ್ಟೀರಿಯಾಗಳು ಸಂಗ್ರಹವಾಗದಂತೆ ಎಸಿ ಫಿಲ್ಟರ್ ಅನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ.

Share.
Leave A Reply