ರಶ್ಮಿಕಾ ಮಂದಣ್ಣ ಹಾಗೂ Vijay Devarakonda ಇಬ್ಬರ ಸೀಕ್ರೆಟ್ ಲವ್​ ವಿಚಾರ ಆಗಾಗ ಸುದ್ದಿ ಆಗ್ತಾನೆ ಇರುತ್ತೆ. ಇದೀಗ ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಲವ್‌ ಸಿಕ್ರೇಟ್‌ ಮತ್ತೆ ಸುದ್ದಿಯಾಗಿದೆ. ವಿಜಯ್ ದೇವರಕೊಂಡ ಮೇ 9ರಂದು 36ನೇ ವರ್ಷದ ಬರ್ತ್​ಡೇ ಆಚರಿಸಿಕೊಂಡಿದ್ದಾರೆ. ಈ ವೇಳೆ ರಶ್ಮಿಕಾ ಮಂದಣ್ಣ ಅವರು ಸೋಶಿಯಲ್ ಮೀಡಿಯಾದಲ್ಲಿ ವಿಜಯ್‌ಗೆ ಬರ್ತ್​ಡೇ ವಿಶ್ ತಿಳಿಸಿದ್ದು, ಮತ್ತೆ ಇವರ ಲವ್‌ಸ್ಟೋರಿ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಇಬ್ಬರೂ ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಅನ್ನೋ ಗಾಸಿಪ್‌ ಆಗಾಗ ಕೇಳ್ತಾನೇ ಇರ್ತೀವಿ. ಆದ್ರೆ ಈ ಬಗ್ಗೆ ಅವರಾಗಿಯೇ ಇನ್ನು ಮಾಹಿತಿಯನ್ನ ರೀವಿಲ್‌ ಮಾಡಿಲ್ಲ. ಈಗ ವಿಜಯ್​ಗೆ ರಶ್ಮಿಕಾ ಪ್ರೀತಿಯಿಂದ ‘ವಿಜ್ಜು’ ಎಂದು ಕರೆದು ವಿಶ್‌ ಮಾಡಿದ್ದಾರೆ. ಅಲ್ಲದೆ ಪ್ರೀತಿಯಿಂದ ಶುಭಾಶಯಗಳನ್ನ ತಿಳಿಸಿದ್ದಾರೆ. ‘ನಾನು ಲೇಟ್‌ ಆಗಿ ವಿಶ್ ಮಾಡಿದ್ದೇನೆ. ಆದರೆ, ಹುಟ್ಟುಹಬ್ಬದ ಶುಭಾಶಯಗಳು ವಿಜ್ಜು. ನಿಮ್ಮ ಮುಂದಿನ ದಿನಗಳಲ್ಲಿ ಪ್ರೀತಿ, ಸಂತೋಷ, ಆರೋಗ್ಯ, ಸಂಪತ್ತು, ಶಾಂತಿಯಿಂದ ಕೂಡಿರಲಿ ಎಂದು ನಾನು ಆಶಿಸುತ್ತೇನೆ’ ಎಂದು ರಶ್ಮಿಕಾ ಮಂದಣ್ಣ ಶುಭಾಶಯ ಕೋರಿದ್ದಾರೆ. ಸದ್ಯ ರಶ್ಮಿಕಾ ವಿಜಯ್‌ ಬರ್ತ್​ಡೇ ವಿಶ್ ಮಾಡಿದ್ದು ವೈರಲ್ ಆಗಿದೆ. ಇದಕ್ಕೆ ವಿಜಯ್ ಪ್ರತಿಕ್ರಿಯಿಸಿದ್ದು, ‘ನಿಮ್ಮ ಹಾರೈಕೆ ಈಡೇರಲಿ’ ಎಂದಿದ್ದಾರೆ.

ಇದನೇಲ್ಲ ನೋಡಿದ್ರೆ, ರಶ್ಮಿಕಾ ಹಾಗೂ Vijay Devarakonda ನಡುವೆ ಪ್ರೀತಿ ಇರೋದು ಪಕ್ಕಾ ಅಂತ ಅಭಿಮಾನಿಗಳ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು ಇಬ್ಬರು ತಮ್ಮ ತಮ್ಮ ಮುಂದಿನ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ರಶ್ಮಿಕಾ ಮಂದಣ್ಣ ಸಾಲು ಸಾಲು ಹಿಟ್‌ ಸಿನಿಮಾಗಳನ್ನ ಕೊಟ್ಟಿದ್ದಾರೆ. ‘ಅನಿಮಲ್’, ಪುಷ್ಪ 2’ ಹಾಗೂ ‘ಛಾವಾ’ ಚಿತ್ರದಿಂದ ಗೆಲುವು ಕಂಡಿದ್ದಾರೆ. ಇತ್ತೀಚಿಗೆ ರೀಲಿಸ್‌ ಆಗಿದ್ದ ಸಲ್ಮಾನ್‌ ಖಾನ್‌ ನಟನೆಯ ಸಿಕಂದರ್‌ ಸಿನಿಮಾಗೆ ನಾಯಕಿಯಾಗಿ ನಟಿಸಿದ್ದಾರೆ.

Also Read: Operation Sindoor : ‘ಆಪರೇಷನ್ ಸಿಂಧೂರ್‌’ ಸಿನಿಮಾ ಅನೌನ್ಸ್! ಪೋಸ್ಟರ್ ನೋಡಿ ನೆಟ್ಟಿಗರು ಹೇಳಿದ್ದೇನು?

ಇನ್ನು ವಿಜಯ್ ದೇವರಕೊಂಡ ಮುಂದಿನ ಸಿನಿಮಾ ‘ಕಿಂಗ್​ಡಮ್’ ಮೇ 30ರಂದು ರಿಲೀಸ್ ಆಗಲಿದೆ. ಈ ಚಿತ್ರದ ಬಗ್ಗೆ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ಸಾಲು ಸಾಲು ಸಿನಿಮಾಗಳು ಟಾಲಿವುಡ್‌ ನೆಲಕ್ಕಚ್ಚಿವೆ. ಆದ್ರೆ ಈ ಸಿನಿಮಾದ ಮೇಲೆ ವಿಜಯ್‌ ದೇವರಕೊಂಡ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಇನ್ನು ಸಿನಿಮಾ ಸಕ್ಸಸ್‌ ಆಗುತ್ತಾ ಇಲ್ಲವಾ ಅನ್ನೋದನ್ನ ಕಾದುನೋಡಬೇಕಿದೆ.

Share.
Leave A Reply