ಸ್ಯಾಂಡಲ್‌ವುಡ್‌ (Sandalwood) ಮೋಹಕತಾರೆ ರಮ್ಯಾ ಹೆಸರು ಕೇಳಿದ್ರೆ ಈಗಲೂ ಅದೆಷ್ಟೋ ಜನರ ಎದೆಯಲ್ಲಿ ರೋಮಾಂಚನ.. ಆ ಕ್ಯೂಟ್‌ನೆಸ್ಸು, ಬೋಲ್ಡ್‌ ಲುಕ್‌, ಚಂದದ ಮೈಮಾಟ ಎಲ್ಲವೂ ಫಿದಾ ಮಾಡಿ ಬಿಡುತ್ತೆ.. ಸ್ಯಾಂಡಲ್‌ವುಡ್‌ ಕ್ವೀನ್‌ ಅಂತಲೇ ಫೇಮಸ್‌ ಆಗಿರುವ ರಮ್ಯಾ, ಹಲವು ಹಿಟ್‌ ಚಿತ್ರಗಳಲ್ಲಿ ನಟಿಸಿ ಮೋಡಿ ಮಾಡಿದ್ದರು. ಆದ್ರೆ, ರಮ್ಯಾ (Ramya‌) ನಟನೆ, ಸಿನಿಮಾಗಳಿಗಿಂತ ಹೆಚ್ಚು ಸುದ್ದಿ ಆಗ್ತಿರೋದು ಅವರ ಮದುವೆ ವಿಷಯ. ರಮ್ಯಾ ವಯಸ್ಸು 42 ಆದ್ರೂ ಇನ್ನೂ ಮದುವೆ ಆಗಿಲ್ಲ.. ರಮ್ಯಾ ಯಾವಾಗ ಮದುವೆ ಆಗ್ತಾರೆ..? ಮುದುಕಿ ಆಗುವ ವಯಸ್ಸಾಯ್ತು? ಹುಡುಗ ಸಿಗ್ತಾನಾ..? ರಮ್ಯಾಗೆ ಮದುವೆ ಆಗೋ ಮನಸ್ಸು ಇಲ್ವಾ ಅಂತಿದ್ದ ಅಭಿಮಾನಿಗಳಿಗೆ ಈಗ ಗುಡ್‌ನ್ಯೂಸ್‌ ಸಿಕ್ಕಿದೆ. ಹುಟ್ಟು ಹಬ್ಬದ ಆ ಫೋಟೋ ಬಾಳ ಸಂಗಾತಿಯ ಸುಳಿವು ಕೊಟ್ಟಿದೆ..

Ramya with Sanjeev  Mohan

ಇಷ್ಟು ದಿನ ರಮ್ಯಾ ಮದುವೆ ಯಾವಾಗ ಅಂತಾ ಹೋದಲ್ಲಿ ಬಂದಲ್ಲಿ ಪ್ರಶ್ನಿಸುತ್ತಿದ್ದ ಅಭಿಮಾನಿಗಳಿಗೆ ಈಗ ಗುಡ್‌ನ್ಯೂಸ್‌ ಸಿಕ್ಕಿದೆ.. ನಿನ್ನೆಯಷ್ಟೇ ಬರ್ತ್‌ ಡೇ ಆಚರಿಸಿಕೊಂಡಿರುವ ರಮ್ಯಾ ತಮ್ಮ ಮದುವೆಯ ಹಿಂಟ್‌ ಕೊಟ್ಟಿದ್ದಾರೆ.. ರಮ್ಯಾ ಜೊತೆಗಿರುವ ಫೋಟೋವೊಂದನ್ನು ಅವರ ಸ್ನೇಹಿತ ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.. ಸುಂದರವಾದ ಕಾಡಿನ ಮಧ್ಯೆ ನಿಂತು ಇಬ್ಬರೂ ಅಪ್ಪಿಕೊಂಡಿರುವ ಪಿಕ್‌ವೊಂದನ್ನು ರಮ್ಯಾ ಸ್ನೇಹಿತ ಶೇರ್‌ ಮಾಡಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ…

ರಮ್ಯಾ ಜೊತೆಗಿರುವ ಈ ಸಂಜೀವ್‌ ಮೋಹನ್ ಯಾರು..?

ಇನ್‌ಸ್ಟಾಗ್ರಾಮ್‌ನಲ್ಲಿ ರಮ್ಯಾ ಜತೆಗಿರುವ ಫೋಟೋ ಶೇರ್‌ ಮಾಡಿದ್ದು ಸಂಜೀವ್‌ ಮೋಹನ್‌ ಎಂಬ ವ್ಯಕ್ತಿ. ರಮ್ಯಾ ಆಪ್ತ ವಲಯದಲ್ಲಿರುವ ಸಂಜೀವ್‌ ಮೋಹನ್‌, ನಿನ್ನೆ ಬರ್ತ್‌ಡೇ ಆಚರಿಸಿಕೊಂಡಿರುವ ಫೋಟೋ ಇನ್‌ಸ್ಟಾದಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಇನ್‌ಸ್ಟಾದಲ್ಲಿ ಇದೇ ಮೊದಲೇನಲ್ಲ… ಇದಕ್ಕೂ ಮೊದಲು 2018ರಲ್ಲೂ ಫೋಟೋ ಶೇರ್‌ ಮಾಡಿದ್ದಾರೆ. ಅಲ್ಲಿಂದ ಇಲ್ಲಿವರೆಗೂ ನಿರಂತರವಾಗಿ ಫೋಟೋ ಶೇರ್‌ ಮಾಡಿಕೊಂಡು ಬರುತ್ತಿದ್ದಾರೆ. ಇಷ್ಟಕ್ಕೂ ರಮ್ಯಾ ಜೊತೆಗಿರುವ ಫೋಟೋಗಳನ್ನು ಶೇರ್‌ ಮಾಡುತ್ತಿರುವ ಈ ಸಂಜೀವ್‌ ಮೋಹನ್‌, ಬೆಂಗಳೂರಿನವರು. ಬೆಂಗಳೂರಿನ ರಿಚ್ಮಂಡ್ ಸರ್ಕಲ್‌ನಲ್ಲಿರುವ ಪ್ರತಿಭಾ ಜುವೆಲ್ಲರಿ ಮಾಲೀಕ ನರಸಿಂಹುಲು ಚೆಟ್ಟಿಯ ಮೊಮ್ಮಗ ಹಾಗೂ ಮುರಳಿ ಮೋಹನ್ ಅವರ ಪುತ್ರ ಅನ್ನೋ ಮಾಹಿತಿ ಸಿಕ್ಕಿದೆ.. ಅಮೆರಿಕದ ಕ್ಯಾಲಿಫೋರ್ನಿಯಾದ ಜೆಮಾಲಜಿಕಲ್ ಇನ್ಸ್ಟಿಟ್ಯೂಟ್ ಆಫ್ ಅಮೆರಿಕದಿಂದ ಜೆಮಾಲಜಿಯಲ್ಲಿ ಪದವಿ ಪಡೆದಿದ್ದಾರೆ.

ಯಾವಾಗಲೂ ಪ್ರೀತಿಸುತ್ತೇನೆ ಎಂದ ಸಂಜೀವ್..!‌

ರಮ್ಯಾ ಜತೆಗಿನ ಫೋಟೋ ಹಂಚಿಕೊಂಡಿರುವ ಸಂಜೀವ್‌ ಸ್ವೀಟ್‌ ವಿಶ್‌ ಮಾಡಿದ್ದಾರೆ… ಹ್ಯಾಪಿ ಬರ್ತ್​ಡೇ ದಿವು. ಯಾವಾಗಲೂ ಪ್ರೀತಿಸುತ್ತೇನೆ. ನಿಮ್ಮ ಜೊತೆ ಇರೋದು ಯಾವಾಗಲೂ ಸುಂದರ ಅಂತ ಮಧುರವಾಗಿ ಬರೆದುಕೊಂಡಿದ್ದಾರೆ. ಈ ಪೋಸ್ಟ್​ಗೆ ಮಸಾಯಿ ಮಾರ, ಕೀನ್ಯಾ (Kenya) ಎಂದು ಲೊಕೇಶನ್ ನೀಡಿದ್ದಾರೆ. ಸದ್ಯ ಹಂಚಿಕೊಂಡಿರುವ ಪೋಸ್ಟ್‌ ಹಾಗೂ ಫೋಟೋ ಇಬ್ಬರ ಪ್ರೀತಿಯ ಗುಟ್ಟು ರಟ್ಟು ಮಾಡುವಂತಿದೆ.. ಹಲವು ವರ್ಷಗಳಿಂದಲೇ ಇಬ್ಬರೂ ಪ್ರೀತಿ ಮಾಡ್ತಿದ್ದಾರೆ ಅನ್ನೋದಕ್ಕೆ ಹಿಂಟ್‌ ಕೊಡುತ್ತಿದೆ..

ramya with sanjeev mohan in kenya,Sandalwood Queen Ramya‌

ನಿನ್ನೆಯಷ್ಟೇ ಬರ್ತ್‌ಡೇ (Birthday) ಆಚರಿಸಿಕೊಂಡಿರುವ ರಮ್ಯಾ ಸದ್ಯ ಕೀನ್ಯಾದ ಸುಂದರ ಕಾಡಿನಲ್ಲಿ ಸುತ್ತಾಡುತ್ತಿದ್ದಾರೆ.. ಬರ್ತ್‌ ಡೇ ವೆಕೇಷನ್‌ ಎಂಜಾಯ್‌ ಮಾಡ್ತಿದ್ದಾರೆ… ಈಗ ಇಬ್ಬರ ಫೋಟೋ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.. ಆದ್ರೂ ಸ್ಯಾಂಡಲ್‌ವುಡ್‌ ಕ್ವೀನ್‌ ಕಡೆಯಿಂದ ಯಾವುದೇ ರೆಸ್ಪಾನ್ಸ್‌ ಬಂದಿಲ್ಲ.. 2018ರಿಂದಲೂ ಫೋಟೋ ಶೇರ್‌ ಮಾಡ್ತಿರುವ ಸಂಜೀವ್‌ ಮೋಹನ್‌ ಯಾರು? ಗೆಳೆಯನಾ? ಅಥವಾ ಬಾಯ್‌ಫ್ರೆಂಡಾ? ಅಂತಾ ಸುಳಿವು ಕೊಟ್ಟಿಲ್ಲ.

Share.
Leave A Reply