ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಷ್ಯಾ-ಉಕ್ರೇನ್ ನಡುವಿನ ಯುದ್ಧ ಸದ್ಯದಲ್ಲೇ ಕೊನೆಗೊಳ್ಳಲಿದೆ ಎಂದಿದ್ದಾರೆ.

ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜೊತೆಗೆ ಫ್ಲೋರಿಡಾದ ಮಾರ್-ಎ-ಲಾಗೊ ನಿವಾಸದಲ್ಲಿ ನಡೆದ ಚರ್ಚೆ ನಂತರ ಈ ಮಾತು ಹೇಳಿದ್ದಾರೆ. ಯುದ್ಧ ನಿಲ್ಲಿಸಿ ಶಾಂತಿ ನೆಲೆಸುವಂತೆ ಮಾತುಕತೆಗಳು ನಡೆಯುತ್ತಿವೆ. ಝೆಲೆನ್ಸ್ಕಿ ಜೊತೆ ಸಭೆ ನಡೆಸುವ ಮೊದಲು ಟ್ರಂಪ್‌ ಪುಟಿನ್‌ಗೆ ದೂರವಾಣಿ ಕರೆ ಮಾಡಿ ಯುದ್ಧ ಕೊನೆಗೊಳಿಸುವ ಸಂಬಂಧ ಮಾತನಾಡಿದ್ದರು. ಫೆಬ್ರವರಿ 2022 ರಿಂದ ಹತ್ತಾರು ಸಾವಿರ ಜನರನ್ನು ಬಲಿತೆಗೆದುಕೊಂಡಿರುವ ಯುದ್ಧವನ್ನು ಕೊನೆಗೊಳಿಸಲು ಸಾಧ್ಯವೇ ಎಂಬುದು ವಾರಗಳಲ್ಲಿ ಸ್ಪಷ್ಟವಾಗುತ್ತದೆ. ಎರಡೂ ದೇಶಗಳಿಗೆ ನಾನು ತುಂಬಾ ಹತ್ತಿರ.

ಯುದ್ಧವನ್ನು ಕೊನೆಗೊಳಿಸುವ ಕರಡು ಒಪ್ಪಂದ ಬಹುತೇಕ ಶೇ.95 ಪೂರ್ಣಗೊಂಡಿದೆ. ಎರಡೂ ಕಡೆಯವರು ಆ ಯುದ್ಧವನ್ನು ಕೊನೆಗೊಳಿಸುವಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದಾರೆ. ಯುದ್ಧ ಮುಗಿಸುವ ಸಂಬಂಧ ಟ್ರಂಪ್‌ ಉಕ್ರೇನ್‌ ಸಂಸತ್ತನ್ನು ಉದ್ದೇಶಿಸಿ ಮಾತನಾಡಲು ಮುಂದಾಗಿದ್ದಾರೆ.

ವ್ಲಾಡಿಮಿರ್‌ ಪುಟಿನ್‌ ಅವರು ಉಕ್ರೇನ್‌ ಬಗ್ಗೆ ತುಂಬಾ ಉದಾರ ಮನೋಭಾವನೆ ಹೊಂದಿದ್ದಾರೆ” ಎಂದು ಟ್ರಂಪ್‌ ಅಚ್ಚರಿಯ ಹೇಳಿಕೆಯನ್ನು ನೀಡಿದ್ದಾರೆ. ರಷ್ಯಾ-ಉಕ್ರೇನ್‌ ಶಾಂತಿ ಸ್ಥಾಪನೆ ಕುರಿತು ಮಾತನಾಡಲು, ಈ ಹಿಂದೆ ಶ್ವೇತಭವನದಲ್ಲಿ ಡೊನಾಲ್ಡ್‌ ಟ್ರಂಪ್‌ ಮತ್ತು ವೊಲೊಡಿಮಿರ್‌ ಝೆಲೆನ್ಸ್ಕಿ ಭೇಟಿಯಾಗಿದ್ದರು. ಆಗ “ಉಕ್ರೇನ್‌ ಅಧ್ಯಕ್ಷರಿಗೆ ಯುದ್ಧ ಕೊನೆಯಾಗುವುದು ಬೇಕಿಲ್ಲ” ಎಂದು ಟ್ರಂಪ್ ಹೇಳಿದ್ದು ದೊಡ್ಡ ಚರ್ಚೆಗೆ ಗ್ರಾಸವಾಗಿತ್ತು.

Share.
Leave A Reply