ಬೆಂಗಳೂರು: ಗಿಳಿ ರಕ್ಷಿಸಲು ಹೋಗಿ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ.

ವಿದ್ಯುತ್ ತಗುಲಿದ ಪರಿಣಾಮ ಯುವಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ಘಟನೆ ಬೆಂಗಳೂರಿನ (Bengaluru) ಗಿರಿನಗರದ (Girinagar) ಅಪಾರ್ಟ್ಮೆಂಟ್ ಬಳಿ ನಡೆದಿದೆ. ಅರುಣ್ ಕುಮಾರ್ (23) ಸಾವನ್ನಪ್ಪಿರುವ ದುರ್ದೈವಿ ಎನ್ನಲಾಗಿದೆ. ಅಪಾರ್ಟ್ಮೆಂಟ್ ಒಳಗಿನ ಹೈಟೆನ್ಸನ್ ವೈರ್ ಕಂಬದ ಮೇಲೆ ಕುಳಿತಿದ್ದ ಗಿಳಿ ರಕ್ಷಿಸಲು ಹೋಗಿದ್ದ ವೇಳೆ ಸಾವನ್ನಪ್ಪಿದ್ದಾನೆ.

ಕಾಂಪೌಂಡ್‌ ಮೇಲೆ ನಿಂತು ಸ್ಟೀಲ್ ಪೈಪ್‌ಗೆ ಕಡ್ಡಿ ಕಟ್ಟಿಕೊಂಡು ಕಂಬದ ಮೇಲೆ ಕುಳಿತಿದ್ದ ಗಿಳಿ ಓಡಿಸಲು ಪ್ರಯತ್ನಿಸಿದ್ದಾರೆ. ಆಗ 66 ಸಾವಿರ ಕೆವಿ ವೈರ್‌ನಿಂದ ಶಾಕ್ ತಗುಲಿದ್ದು, ಅರುಣ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಅರುಣ್‌ನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರೂ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನ ನಡೆಸಿದ್ದಾರೆ. ಈ ಕುರಿತು ಗಿರಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share.
Leave A Reply