ಗಿಲ್ಲಿ ಹಾರ್ಟ್‌ಗೆ ಚಿಟ್ಟೆ ಬಿಟ್ಟ ಕಾವ್ಯಾ.. ದಂಡಿಗೆ ಹೆದರಲಿಲ್ಲ, ದಾಳಿಗೆ ಹೆದರಲಿಲ್ಲ, ಕಾವ್ಯಾ ಕಣ್ಣು ನೋಡಿ ಹೆದರಿದ ಗಿಲ್ಲಿ ನಟ. ಬಿಗ್‌ಬಾಸ್‌ ಒಳಗೆ ಹೊರಗೆ ಸಖತ್‌ ಸೌಂಡ್‌ ಮಾಡಿದ ಜೋಡಿ ಮಧ್ಯೆ ಆಗಿದ್ದೇನು? ನಿಜಕ್ಕೂ ಗಿಲ್ಲಿಗೆ ಕಾವ್ಯಾನ ಮೇಲೆ ಲವ್‌ ಆಗಿದ್ಯಾ? ಕಿಚ್ಚನ ಮುಂದೆ ಹೇಳಿದ ಮಾತು ನಿಜಾನಾ? ವಾರಕ್ಕೂಂದು ಶಾಕಿಂಗ್‌ ನ್ಯೂಸ್‌ನಿಂದ ಸದಾ ಸದ್ದು ಮಾಡೋ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್.‌ ಅದ್ರಲ್ಲೂ ಲವ್‌ ಸ್ಟೋರಿಗಳಿಂದ ಸೌಂಡ್‌ ಮಾಡೋದೆ ಜಾಸ್ತಿ. ಸದ್ಯ ಈ ಸಲ ಕೂಡ ಹೊಸ ಲವ್‌ ಸ್ಟೋರಿ ಹುಟ್ಟಿಕೊಂಡಿದ್ದು, ಗಿಲ್ಲಿ-ಕಾವ್ಯಾ ಜೋಡಿ ಕರುನಾಡ ತುಂಬಾ ಸಖತ್‌ ಸೌಂಡ್‌ ಮಾಡ್ತಿದೆ. ನಟರಾಜ್‌ ಅಲಿಯಾಸ್‌ ಗಿಲ್ಲಿ ನಟ ಹಾಗೂ ಕಾವ್ಯಾ ಬಿಗ್‌ಬಾಸ್‌ಗೆ ಬಂದ ಮೊದಲ ದಿನದಿಂದಲ್ಲೂ ಮೋಡಿ ಮಾಡೋಕೆ ಶುರು ಮಾಡಿದ್ರು. ಗಿಲ್ಲಿ ನಟ ಹಾಗೂ ಕಾವ್ಯಾ ಮಧ್ಯೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಇದಕ್ಕೆ ಕಾರಣ ಆಗಿದ್ದು, ಒಂಟಿ-ಜಂಟಿ ಆಟ. ಈ ಟಾಸ್ಕ್‌ನಲ್ಲಿ ಕಾವ್ಯಾ ಹಾಗೂ ಗಿಲ್ಲಿ ಜಂಟಿ ಆಗಿದ್ದರು. ಆಮೇಲೆ ಈ ಆಟಕ್ಕೂ ಬ್ರೇಕ್‌ ಬಿತ್ತು. ಈ ವೇಳೆ ಇಬ್ಬರು ಮನಬಿಚ್ಚಿ ಮಾತನಾಡಿದ್ದು, ಕಾವ್ಯಾ ತಮ್ಮ ಮನದಾಸೆ ಬಿಚ್ಚಿಟ್ಟಿದ್ದಾರೆ. ಗಿಲ್ಲಿ ಅಂದ್ರೆ ನನಗೆ ಇಷ್ಟ, ಅವನು ಸಿಕ್ಕಾಪಟ್ಟೆ ನಗಿಸುತ್ತಾನೆ, ಖುಷಿಯಾಗಿ ನೋಡ್ಕೊಳ್ತಾನೆ, & ಹುಷಾರ್ ಇಲ್ಲದೆ ಇದ್ದಾಗ ನನ್ನನ್ನ ಕೇರ್ ಮಾಡ್ತಾನೆ ಎಂದು ಭಾವುಕರಾದ್ರು. ಈ ಕಡೆ ಗಿಲ್ಲಿ ಕೂಡ ಕಾವ್ಯ ಬಗ್ಗೆ ಸಖತ್‌ ಲವ್‌ನಲ್ಲಿ ಮಾತನಾಡಿದ್ದು, ಜಗಳ ಆದಾಗ ಕಾವ್ಯಾ ನನ್ನ ಪರವಾಗಿ ನಿಲ್ತಿದ್ರು. ಕಾವ್ಯಾನ ಕಣ್ಣು ಅಂದ್ರೆ ನನ್ಗೆ ಸಖತ್ ಭಯ. ದಂಡು ದಾಳಿಗೆ ಹೆದರದ ನಾನು ಕಾವ್ಯಾನ ಕಣ್ಣಿಗೆ ಭಯ ಪಡ್ತೀನಿ. ಇವಳ ಒಂದು ಲುಕ್ಕಿಗೆ ನಾನು ಮಾತು ನಿಲ್ಲಿಸುತ್ತಿದ್ದೆ. ಫಸ್ಟ್ ಟೈಮ್ ಒಂದು ಹುಡುಗಿಯ ಕಣ್ಣು ನೋಡಿ ಭಯ ಪಟ್ಟಿದ್ದೀನಿ ಅಂತಾ ಗಿಲ್ಲಿ ಸಖತ್‌ ಆಗಿ ಚಮಕ್‌ ಕೊಟ್ರು.

ಇನ್ನು ಕಿಚ್ಚನ ಪಂಚಾಯಿತಿಯಲ್ಲಿ ಕಿಚ್ಚ ಸುದೀಪ್‌ ಇಬ್ಬರನ್ನ ದೂರ ದೂರ ನಿಲ್ಲಿಸಿ ಪ್ರಶ್ನೆಗಳನ್ನು ಕೇಳಿದರು. ಈ ವೇಳೆ ಸುದೀಪ್ ಕೇಳಿದ ಕೆಲವು ಪ್ರಶ್ನೆಗಳಿಗೆ ಇಬ್ಬರೂ ಒಂದೇ ರೀತಿಯ ಅನ್ಸರ್ ನೀಡಿದರು. ಆದರೆ ಕೊನೆಯಲ್ಲಿ ಗಿಲ್ಲಿಗೆ ಕರೆಂಟ್ ಗರ್ಲ್​​ ಫ್ರೆಂಡ್ ಯಾರು..? ಎಂದು ಸುದೀಪ್ ಪ್ರಶ್ನೆ ಮಾಡ್ತಾರೆ. ಅದಕ್ಕೆ ಕಾವ್ಯಾ, ಯಾರೂ ಇಲ್ಲ ಎಂದು ಬರೆದು ತೋರಿಸುತ್ತಾರೆ. ಆದರೆ ಗಿಲ್ಲಿ, ಕಾವ್ಯಾ ಹೆಸರು ಬರೆದು ಕೊಂಚ ಸಮಯ ಯೋಚಿಸಿದ್ದಾರೆ. ನಂತರ ಅವರ ಹೆಸರನ್ನು ಅಳಿಸಿ, ಪ್ರೊಸೆಸ್ಸಿಂಗ್ ಎಂದು ಬರೆದಿದ್ದಾರೆ. ಅದು ಕಿಚ್ಚನ ಎದುರು ರಿವೀಲ್ ಆಗುತ್ತಿದ್ದಂತೆಯೇ ಕಾವ್ಯಾ, ಗಿಲ್ಲಿಯನ್ನು ದಿಟ್ಟಿಸಿ ನೋಡಿದ್ದಾರೆ. ಗಿಲ್ಲಿ ಕೊಟ್ಟ ಉತ್ತರ ಎಲ್ಲರಿಗೂ ಶಾಕ್​ ಆಗಿದೆ. ಕಾವ್ಯಾ ಕೂಡ ಶಾಕ್ ಆಗಿರುವ ರೀತಿಯಲ್ಲಿ ಗುರಾಯಿಸಿದ್ದು, ವೀಕ್ಷಕರ ಕುತೂಹಲಕ್ಕೆ ಕಾರಣವಾಗಿದೆ. ಇಬ್ಬರ ವರ್ತನೆ ನೋಡಿ ಇದು ಪ್ರೇಮಕಾವ್ಯದ ದಿಕ್ಸೂಚಿ, ಬಿಗ್‌ಬಾಸ್‌ ಮನೆಯಲ್ಲಿ ಇರುವಾಗ ಏನಿಲ್ಲ ಏನಿಲ್ಲ ಅನ್ನೋ ಜೋಡಿಗಳು ಮುಂದಕ್ಕೆ ಲವ್‌ ಮೋಡಿ ಮಾಡೋದು ಪಕ್ಕಾ ಎಂಬ ಮಾತುಗಳು ಗಿಲ್ಲಿ – ಕಾವ್ಯಾ ಅಭಿಮಾನಿಗಳಿಂದ ಸೋಷಿಯಲ್‌ ಮೀಡಿಯಾ ತುಂಬಾ ಹರಿದಾಡುತ್ತಿದೆ.

Read Also : RSS ಬ್ಯಾನ್‌ ಮಾಡ್ಬೇಕು ಎಂದಿದ್ದ ಪ್ರಿಯಾಂಕ್‌ ಖರ್ಗೆಗೆ ಬೆದರಿಕೆ ಕರೆ : ಮೋದಿ ಅವರ ತಾಯಿಗೆ ಈ ರೀತಿ ನಿಂದಿಸುವುದನ್ನು ಬಿಜೆಪಿಗರು ಒಪ್ಪುತ್ತಾರೆಯೆ ಎಂದು ಪ್ರಶ್ನೆ..?

Share.
Leave A Reply