ಸ್ಯಾಂಡಲ್ವುಡ್ ಅಂಗಳದಲ್ಲಿ ಅನುಶ್ರೀ ಮದುವೆ ಸಂಭ್ರಮ ಜೋರಾಗಿದೆ. ನಾನು ನಿಮ್ಮ ಮನೆ ಮಗಳು ಆಂಕರ್ ಅನುಶ್ರೀ ಅಂತಾ ಮಾತು ಶೂರು ಮಾಡೋ ಮಾತಿನ ಮಲ್ಲಿ ಅನುಶ್ರೀ ತಮ್ಮ 37ನೇ ವಯಸ್ಸಿನಲ್ಲಿ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಪಟಪಟ ಅಂತಾ ಮಾತಾಡೋ ಮಂಗಳೂರು ಚೆಲುವೆ ಅನುಶ್ರೀ, ಕೊಡಗಿನ ಉದ್ಯಮಿ ರೋಷನ್ರನ್ನ ಇಂದು ಶುಭ ಮುರ್ಹೂತ್ದಲ್ಲಿ ವರಿಸಿದ್ದಾರೆ.
ಇನ್ನು ಅನುಶ್ರೀ ಮದುವೆ ಸಾಂಪ್ರದಾಯಿಕ ಶಾಸ್ತ್ರೋಕ್ತವಾಗಿ ಸಂಪನ್ನವಾಗಿದೆ. ಸೆಲೆಬ್ರಿಟ್ ಆಂಕರ್ ಆಗಿರೋ ಅನುಶ್ರೀ ರೋಷನ್ ಕಲ್ಯಾಣಕ್ಕೆ ಸ್ಯಾಂಡಲ್ವುಡ್ ಸ್ಟಾರ್ಸ್ ಹಾಜರಿ ಹಾಕಿದ್ರು.
ಬೆಂಗಳೂರಿನ ಕಗ್ಗಲೀಪುರದಲ್ಲಿ ಆಂಕರ್ ಅನುಶ್ರೀ ಹಾಗೂ ರೋಷನ್ ವಿವಾಹ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿ ನವ ದಂಪತಿಗಳಿಗೆ ಶುಭಕೋರಿದ್ರು. ಅನುಶ್ರೀಗೆ ರೋಷನ್ ತಾಳಿ ಕಟ್ಟೋ ಸಮಯದಲ್ಲಿ ಮದುವೆ ಆಗುವ ಸಂದರ್ಭದಲ್ಲಿ ಭಾವುಕರಾಗಿದ್ದಾರೆ. ಮತ್ತೊಂದು ಕಡೆ ತಾವು ಮದುವೆ ಆಗುತ್ತಿರುವ ಖುಷಿ ಕೂಡ ಮುಖದಲ್ಲಿ ಎದ್ದು ಕಾಣಿಸುತ್ತಿತ್ತು.
ಮದುವೆಯಲ್ಲಿ ಸ್ಯಾಂಡಲ್ವುಡ್ ಸ್ಟಾರ್ಸ್ ಹವಾ
ಸು ಫ್ರಂ ಸೋ ನಟ, ನಿರ್ಮಾಪಕ ಹಾಗೂ ಅನುಶ್ರೀ ಆಪ್ತ ರಾಜ್ ಬಿ ಶೆಟ್ಟಿ ಕೂಡ ಆಗಮಿಸಿದ್ದರು. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದು, ಅನುಶ್ರೀ ಮದುವೆಗೆ ಬಾವ ಬಂದರು ಎಂದು ಅನೇಕರು ಕಮೆಂಟ್ ಮಾಡುತ್ತಾ ಇದ್ದಾರೆ. ರಾಜ್ ಬಿ ಶೆಟ್ಟಿ ಹಾಗೂ ಅನುಶ್ರೀ ಬಹಳ ಒಳ್ಳೇ ಸ್ನೇಹಿತರಾಗಿದ್ದಾರೆ. ಸು ಫ್ರಂ ಸೋ ಸಿನಿಮಾ ಸಕ್ಸಸ್ ಆದ ಖುಷಿಗೆ ಇಬ್ಬರೂ ಕೇಕ್ ಕತ್ತರಿಸಿ ಸಂಭ್ರಮಿಸಿದ್ದರು. ಜೊತೆಗೆ ಉತ್ರಪ್ರದೇಶದಲ್ಲಿ ನಡೆದ ಕುಂಭಮೇಳಕ್ಕೂ ಒಟ್ಟಿಗೆ ಹೋಗಿ ಬಂದಿದ್ರು. ಮುಂದೆ ನಿಂತು ಮದುವೆ ನೆರವೇರಿಸಿಕೊಟ್ಟು, ಶುಭ ಕೋರಿದ್ದಾರೆ.
ಜೀ ವಾಹಿನಿಯ ಬಿಸಿನೆಸ್ ಹೆಡ್ ರಾಘವೇಂದ್ರ ಹುಣಸೂರು, ಕಾವ್ಯಾ ಶಾ, ಚೈತ್ರಾ ಜೆ. ಆಚಾರ್, ಶರಣ್, ಶಿವರಾಜ್ ಕುಮಾರ್ ದಂಪತಿ, ಹಂಸಲೇಖ, ರಿಷಬ್ ಶೆಟ್ಟಿ, ರಾಜ್ ಬಿ ಶೆಟ್ಟಿ, ಪ್ರಮೋದ್ ಶೆಟ್ಟಿ ಹಾಗೇ ಯುವ ರಾಜ್ಕುಮಾರ್, ವಿನಯ್ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್ ತರುಣ್ ಸುಧೀರ್, ಸೋನಲ್ ಮೊಂಥೆರೋ, ರಚಿತಾ ರಾಮ್, ಚೈತ್ರಾ ಆಚಾರ್, ಡಾಲಿ ಧನಂಜಯ್, ನಟಿ ತಾರಾ, ನಟಿ ಪ್ರೇಮಾ ಸೇರಿದಂತೆ ಸ್ಯಾಂಡಲ್ವುಡ್ ತಾರಾಗಣವೇ ಸಾಕ್ಷಿಯಾಗಿತ್ತು.
ಇನ್ನು ಅನುಶ್ರೀ ಮದುವೆಗೆ ಅಭಿಮಾನಿಗಳಿಗೆ ಆಹ್ವಾನ ಇರಲಿಲ್ಲ. ಹೀಗಾಗಿ, ಅಭಿಮಾನಿಗಳನ್ನು ಒಳಗೆ ಬಿಟ್ಟಿಲ್ಲ. ಕೇವಲ ಆಪ್ತರಿಗೆ, ಕುಟುಂಬದವರಿಗೆ ಮಾತ್ರ ಮದುವೆಗೆ ಆಹ್ವಾನಿಸಲಾಗಿತ್ತು.
Read Also :ರೋಷನ್ ತಾಳಿ ಕಟ್ಟುತ್ತಿದ್ದಂತೆ ಕಣ್ಣೀರಿಟ್ಟ ಅನುಶ್ರೀ.. ಮದುವೆಯ ಫೋಟೋಸ್ ಇಲ್ಲಿವೆ ನೋಡಿ..!
