ಬಿಗ್‌ಬಾಸ್‌ ಹವಾ ಮತ್ತೆ ಶುರುವಾಗಿದೆ.. ಬಿಗ್‌ಬಾಸ್ ಕನ್ನಡ 11 ಸೀಸನ್‌ ಮುಗಿದು ಹೆಚ್ಚು ಕಮ್ಮಿ 5 ತಿಂಗಳು ಉರುಳಿವೆ. ಆದ್ರೆ, ಅದರ ಹವಾ ಮಾತ್ರ ಒಂಚೂರು ಕಡಿಮೆ ಆಗಿಲ್ಲ.. ಅದಕ್ಕೆ ಕಾರಣ ಬಾದ್ ಷಾ ಕಿಚ್ಚ ಸುದೀಪ್‌.. ಕಳೆದ ಸೀಸನ್ ಮುಗಿಯುತ್ತಿದ್ದಂತೆ ಸುದೀಪ್ ಮುಂದಿನ ಸೀಸನ್ ನಿರೂಪಣೆ ಮಾಡುವುದಿಲ್ಲ ಎಂದು ಹೇಳಿದ್ದರು. ಇದು ಕಿರುತೆರೆ ವೀಕ್ಷಕರಿಗೆ ಹಾಗೂ ಕಿಚ್ಚ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ನಿರಾಸೆ ಆಗಿತ್ತು.

ಕಿಚ್ಚ ಸುದೀಪ್ ಬಿಗ್‌ಬಾಸ್ ನಿರೂಪಣೆಯಿಂದ ಹೊರ ಬಂದಿದ್ದಕ್ಕೆ ಕಾರಣವೇನು ಅನ್ನೋ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ನೂರೆಂಟು ಚರ್ಚೆಯಾಗಿದೆ. ಕಳೆದ ಸೀಸನ್ ಆರಂಭದಲ್ಲಿ ಗಲಾಟೆ, ಕಿತ್ತಾಟ, ದೊಡ್ಮನೆ ಅಭಿಮಾನಿಗಳಿಂದ ಬಂದ ನೆಗೆಟಿವ್ ಮಾತುಗಳು ಕಿಚ್ಚನಿಗೆ ಬೇಸರ ಆಗಿತ್ತು. ಅದಕ್ಕೆ ಸುದೀಪ್‌ ನಿರೂಪಣೆಗೆ ಗುಡ್‌ ಬಾಯ್‌ ಹೇಳಿದ್ರು ಎನ್ನಲಾಗಿತ್ತು. ಆದ್ರೆ ಈಗ ಬೆಂಕಿ ನ್ಯೂಸ್‌ ಒಂದು ಬಂದಿದ್ದು, ಕಿಚ್ಚ ಬಿಗ್‌ಬಾಸ್‌ ಅಖಾಡಕ್ಕೆ ಮತ್ತೆ ರಿಎಂಟ್ರಿ ಕೊಡ್ತಾರೆ ಎನ್ನಲಾಗಿದೆ.

ಬಿಗ್ ಬಾಸ್‌ ಕನ್ನಡ 12 ಕಾರ್ಯಕ್ರಮದ ತೆರೆ ಹಿಂದಿನ ಕೆಲಸಗಳಿಗೆ ಚಾಲನೆ ಕೊಡಲಾಗಿದ್ಯಂತೆ. ಈ ಬಾರಿಯೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯುತ್ತಾರಂತೆ. ಇದಕ್ಕಾಗಿ ಕಿಚ್ಚ ಸುದೀಪ್‌ ಕೆಲವು ಖಡಕ್‌ ಕಂಡೀಷನ್‌ಗಳನ್ನ ಹಾಕಿದ್ದಾರೆ.. ಅವೆಲ್ಲದಕ್ಕೂ ಬಿಗ್ ಬಾಸ್ ಆಯೋಜಕರು ಒಪ್ಪಿಕೊಂಡಿದ್ದಾರಂತೆ ಎಂಬ ಸುದ್ದಿ ಹಬ್ಬಿದೆ..

ಬೇರೆ ಭಾಷೆಗಳಿಗಿಂತಲೂ ಕನ್ನಡದ ಬಿಗ್‌ಬಾಸ್‌ ಒಂದು ಕೈ ಮೇಲಿರಬೇಕು. ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು.. ವಿವಾದಾತ್ಮಕ ಸ್ಪರ್ಧಿಗಳು ಇರಬಾರದು ಅಂತ ಕಿಚ್ಚ ಸುದೀಪ್‌ ಕಂಡೀಷನ್‌ ಹಾಕಿದ್ದಾರಂತೆ. ಅದಕ್ಕೆ ಬಿಗ್‌ಬಾಸ್ ಆಯೋಜಕರು ಓಕೆ ಆಂದಿದ್ದಾರೆ ಎನ್ನಲಾಗಿದ್ದು, ಬಿಗ್‌ಬಾಸ್‌ ಮತ್ತೆ ಬಂದ್ರೆ ಕಿಚ್ಚನ ಫ್ಯಾನ್ಸ್‌ ಅಂತೂ ಹಬ್ಬ ಮಾಡೋದು ಗ್ಯಾರಂಟಿ..

Share.
Leave A Reply