ಢಾಕಾ: ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಮುಂದುವರೆದಿದೆ. ಷರೀಫ್ ಉಸ್ಮಾನ್ ಹಾದಿ ನಿಧನದ ನಂತರ ಬಾಂಗ್ಲಾದೇಶ ಹೊತ್ತಿ ಉರಿಯುತ್ತಿದೆ. ಅಶಾಂತಿಯ ಹಿನ್ನೆಲೆಯಲ್ಲಿ, ಗುಂಪು (Bangladesh Unrest) ಹಿಂಸಾಚಾರವು ಆತಂಕಕಾರಿಯಾಗುತ್ತಿದೆ. ಹಿಂದೂಗಳನ್ನೇ ಟಾರ್ಗೆಟ್ ಮಾಡಿ ಹಿಂಸಿಸುವ ಕೃತ್ಯ ಬೆಳಕಿಗೆ ಬರುತ್ತಿವೆ.
ಇಬ್ಬರು ಹಿಂದೂ ವ್ಯಕ್ತಿಗಳನ್ನು ಕೊಲೆ ಮಾಡಿದ ನಂತರ ಈಗ ಹಿಂದೂ ಒಡೆತನದ ಮನೆಯನ್ನು ಸುಟ್ಟುಹಾಕಲಾಗಿದೆ ಎಂದು ವರದಿಯಾಗಿದೆ. ಡಿ. 27 ರಂದು ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿರುವ ಸಹಾ ನಿವಾಸದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿ ಬೆಂಕಿ ಹಚ್ಚಿದ್ದಾರೆ. ಕೋಣೆಯೊಳಗೆ ಬಟ್ಟೆ ಹಾಕಿ ಬೆಂಕಿ ಹಚ್ಚಿದ್ದಾರೆ. ಬೆಂಕಿ ಇಡೀ ಮನೆಯನ್ನು ಆವರಿಸಿ ಸುಟ್ಟು ಹಾಕಿದೆ. ಪಿರೋಜ್‌ಪುರದ ಡುಮ್ರಿಟೋಲಾ ಗ್ರಾಮದಲ್ಲಿ, ಸಹಾ ಕುಟುಂಬದ ಮನೆಯ ಐದು ಕೊಠಡಿಗಳನ್ನು ಹಿಂದೂ ದ್ವೇಷಿ ಜಿಹಾದಿಗಳು ಸುಟ್ಟುಹಾಕಿದರು. ಬೆಳಗಿನ ಜಾವ ಎಲ್ಲರೂ ಮಲಗಿದ್ದಾಗ ಮನೆಗೆ ಬೆಂಕಿ ಹಚ್ಚಿದರು ಎಂದು ಬಾಂಗ್ಲಾದೇಶದ ಪ್ರಸಿದ್ಧ ಲೇಖಕಿ ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
ಎಲ್ಲಾ ಹಿಂದೂ ಮನೆಗಳನ್ನು ಹೀಗೆಯೇ ಸುಡಲಾಗುತ್ತದೆಯೇ? ಅವರು ಹಿಂದೂಗಳನ್ನು ಜೀವಂತವಾಗಿ ಸುಡಲು ಬಯಸುತ್ತಾರೆ; ಅದಕ್ಕಾಗಿಯೇ ಜನರು ನಿದ್ದೆ ಮಾಡುವಾಗ ಅವರು ಬೆಂಕಿ ಹಚ್ಚುತ್ತಾರೆ. ಯೂನಸ್ ಕೇವಲ ಕೊಳಲು ನುಡಿಸುತ್ತಿದ್ದಾರೆಯೇ?” ಎಂದು ಅವರು ಪ್ರಶ್ನೆ ಮಾಡಿದ್ದಾರೆ.
